ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವರಾಜನ ಕಥೆ - ೧೬೫ .ಬಿನ್ಲೈಸಲು; ಅವರಿತ್ವ ರೂ ಭಯಭಕ್ತಿಯುಕ್ತರಾಗಿ ಬಂದು ಕಾಣಿಕೆಯನ್ನಿತ್ತು ದೇವಿಯ ಆಜ್ಞೆಯಿಂ ಒಂದಿನಿಸು ದೂರದಲ್ಲಿ ಕುರುವಿಂದರ್ಮಣಿಯ ಪೀಠದಲ್ಲಿ ಕುಳಿ ತಿರಲು ; ದೇವಿಯು ವಿಕ )ಮಬಾಹುರಾಯ ಕಮಲಾವಳಿ ಮುಂತಾದವರ ಯೋಗ ಕ್ಷೇಮವಂ ಬೆಸಗೊಂಡ ಬಳಿಕ ರತ್ನಾ ವಳಿಯ ವೃತ್ತಾಂತವಂ ಪೇಳುತ್ತ, ತನ್ನ ನತಿಗೆ ಈ ರತ್ನಾ ವಳಿಯನ್ನು ವಿವಾಹವಂ ಗೆಯಬೇಕೆಂದು ನಿಶ್ಚಯಿಸಿರುವ ಸಮಯಕ್ಕೆ ಸರಿಯಾಗಿ ನೀವು ಇಲ್ಲಿಗೆ ಬಂದುದು ಅತ್ಯಂತ ಸಂತೋಷವಾದುದು ಎಂದು ನುಡಿ ಯಲು ; ರಾಜಪುತ್ರರುಗಳು ಅಂತರಂಗದಲ್ಲಿ ಸುಣ್ಣದ ಸರಳಿಗೆ ನೀರು ಬಿಟ್ಟಂತೆ ಕುದಿ ಗೊಂಡು ಕೊನೆವಿಾಸೆಗಳನ್ನು ಕುಣಿಯಿಸುತ್ತ, ಕಣ್ಣು ಗಳ೦ ಕೆಂಪುಗೆಯು ಒಬ್ಬ ರೋಬ ರ ಮುಖವಂ ನೋಡುತ್ಯ, ದೇವಿಯಂ ಕುರಿತು ಅನುವಿಂದನು-- ಎಲ್‌ ಅಕ್ಕಯ್ಯಾ, ಕೇಳು. ನೀನು ಆದಿಲಕ್ಷ್ಮಿಯಂತೆ ಅತಿಸುಂದರಳಾಗಿ ನೂತನ ಯೌವನ ದಿಂದ ಭೂಷಿತಳಾಗಿರುವಲ್ಲಿ, ಈ ನಮ್ಮ ರತ್ನಾ ವಳಿಯನ್ನು ವತ್ಸ ರಾಜನಿಗೆ ವಿವಾಹವಂ ಗೆಯ್ಯುವುದು ನ್ಯಾಯವಲ್ಲ ?” ಎನಲು ; ವಿಂದನು- ಪೂಜ್ಯಳೇ, ಕೇಳು, ಇನ್ನೂ ಬ್ಬನಿಗೆ ನಿಶ್ಚಯವಾಗಿರುವ ಈ ರತಾ ವಳಿಯು ವತ್ಸ ರಾಜನಿಗೆ ಹೇಗೆ ಪತ್ನಿ ಯಾಗುವಳು? ಬರಿಯ ಮಾತುಗಳಿಂದ ಪ್ರಯೋಜನವಿಲ್ಲ. ಆದರೂ ಫಲವಾದ ವೃಕ್ಷಕೆ ಪಕ್ಷಿಗಳು ಮುತ್ತುವಂತೆ ಸುಂದರವಾದ ಕ೩ ಕೆಯಿರುವ ಸ್ಥಾನಕ್ಕೆ ಬಹುಜನಗಳು ಬಂದು ಕೇಳುವುದು ನ್ಯಾಯವಾಗಿರುವುದು, ಈಶ್ವರಸಂಕಲ್ಪವು ಹೇಗಿರುವುದೋ ತಿಳಿ ಯದು ?” ಎಂದು ನುಡಿಯಲು ; ಯೌಗಂಧರಾಯಣನು, ತಾನು ಮಾಡಿದ ಪ್ರಯತ್ನ ಗಳನ್ನು ಈ ರಾಜ ಪುತ್ರರುಗಳು ಕ್ಷಣಮಾತ್ರದಲ್ಲಿ ವ್ಯರ್ಥವಂಗೆಯ್ಯುವಂತೆ ತೋರು ವದೆಂದು ಯೋಚಿಸಿ, . ಆದರೂ ಈಗ ರಾಜಪುತ್ರರು ಹೇಳುವ ವಾಕ್ಯವು ಯುಕ್ತ ವೇ ಸರಿ, ಆದರೆ ಅವರಿಗೂ ನಮಗೂ ಪೂಜ್ಯ ನಾಗ ವಿಕ್ರಮಬಾಹುರಾಯನ ಅನು ಮತಿಯು ಎಂತಿರುವುದೋ, ಆ ರೀತಿಯಿಂದ ನಿನ್ನ ನೀವೆಲ್ಲರೂ ನಡೆದುಕೊಳ್ಳಬೇಕಾ ಗಿರುವುದು ?” ಎನಲು ; ನಿಂದನು ಕೋನದಿಂದೊಡಗೊಂಡು ಆಯಾ ಮಂತ್ರಿ ಯೇ, ಕೇಳು, ನಮ್ಮ ಪಿತೃವಾಕ್ಯಾನುಸಾರವಾಗಿಯೇ ನಾವು ಇಲ್ಲಿಗೆ ಬಂದಿರುವಲ್ಲಿ ಮರಳಿ ಇನ್ನೊಂದು ಬಾರಿ ಪಿತೃವಾಕ್ಯವನ್ನು ಕೇಳತಕ್ಕ ಪ್ರಕೃತವು ತೋರಲಾರದು?' ಎಂದು ವಕ್ರವಾಕ್ಯವಂ ಗೆಯ್ಯುತ್ತಿರಲು ; ರತ್ನಾ ವಳಿಯ ಕಾಂಚನಮಾಲೆಯೊಡಗೊಂಡು ಬರುತ್ಯ, ದೇವಿಯೊಡನೆ ಮಾತುಗಳನ್ನಾಡುವ ನಿಂದಾನುವಿಂದರಂ ದೂರದಲ್ಲಿ ಕಂಡು, ಏನು ಮಾತನಾಡು ವರೋ ಎಂದು ಮರೆಗೊಂಡು, ಅವರು ಆಶಿವಕ್ರದಿಂದ ನುಡಿಯುವ ವಾಕ್ಯವಂ ಕೇಳಿ, ಪೆಟ್ಟು ಬಿದ್ದ ಸರ್ಪದಂತೆ ಅತಿಕೋಪದಿಂ ನಿಟ್ಟುಸಿರುಗಳಂ ಬಿಟ್ಟು, ದೇವಿಗೂ ಅಣ್ಣಂದಿರಾದ ವಿಂದಾನುವಿಂದರಿಗೂ ಸಹ ನಮಸ್ಕಾರವಂಗೆಯ್ದು, ಮನ್ಮಥನ ಕಬ್ಬಿನ ಬಿಲ್ಲುಗಳ ಮುರಿದ ಭಾನನಂ ತೋರಿಸುವವೋ ಎಂಬಂತೆ ಹುಬ್ಬುಗಳ೦ ಗಂಟಿಕ್ಕಿ,