ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ವತ್ಸರಾಜನ ಕಥೆ. - ತಿಯೇ, ಈಗ ಪುರೋಹಿತರು ಹೇಳಿದ ವಾಕ್ಯವು ನಿನ್ನ ಬುದ್ದಿಗೆ ಹೇಗೆ ತೋರು ವುದು? ನಿನ್ನ ಅಭಿಪ್ರಾಯವೆಂತಿರುವುದು? ಪೇಳುವನಾಗು ಎಂದು ಆಜ್ಞೆಯನ್ನಿಯಲಾ ಮಂತ್ರಿ, ಯು- ಎಲೈ, ಸ್ವಾಮಿಯೇ ! ಪುರೋಹಿತರು ರಾಜನೀತಿಗೂ ವ್ಯವಹಾ ರಕ್ಕೂ ಸಹ ಸಮ್ಮತವಾದ ವಾಕ್ಯವನ್ನೆ ಬಿಸಿರುವರು. ಇವರು ಹೇಳಿದಂತೆ ಕಾರವಂ ನಡೆಯಿಸುವುದು ಯುಕ್ತವಾಗಿರುವುದು, ಇಲ್ಲವಾದಲ್ಲಿ ಬಲಿಷ್ಟನಾದ ಆ ವತ್ವ ರಾಜನಿಂದ ನಮಗೆ ಹಾನಿಯು ಸಂಭವಿಸದೆ ಇರದು. ಎಂದು ವಿಜ್ಞಾಪಿಸಲು; ಕಮಲಾವಳೀದೇವಿಯ .. ಎಲೈ ಾಮಿಯೇ, ಈಗ ಪುರೋಹಿತರು ಹೇಳಿದ ವಾಕ್ಯವೂ ಅದಕ್ಕೆ ಮಂತಿ ಯು ಸಹ ಸಮ್ಮತಿಸಿರುವ ನೀತಿಯೂ ಸಹ ಯುಕ್ತವಾ ಗಿಯೇ ಇರುವುವು. ಆದರೂ ನಮ್ಮ ವಾಸವದತ್ತಾ ದೇವಿಯಲ್ಲಿ ಎನಗೆ ಸಂದೇಹ ತೋರುತ್ತಾ ಇರುವ'ದೆಂದು ಬಿನ್ನಿಸಲು; ಪುರೋಹಿತನು-ಎಲೌ ದೇವಿಯೇ, ಲೋಕದಲ್ಲಿ ಯಾವ ಸ್ಥಳದಲ್ಲಿ ವಿಶ್ವಾಸವಿರುವುದೋ ಆ ಸ್ಥಳದಲ್ಲಿ ಮೊದಲಾಗಿ ಜನ ರುಗಳಿಗೆ ಸಂದೇಹವೇ ಬಲವಾಗಿ ತೋರುವುದು ಯುಕ್ತವೇ ಸರಿ. ಆದರೆ ನನ್ನ ವಾಕ್ಯದಲ್ಲಿ ಇನ್ನೂ ನಿಮಗೆ ನಿಶ್ಚಯಜ್ಞಾನವು ಉಂಟಾಗದೇ ಇದ್ದಲ್ಲಿ ಈಗ ಕೌಶಾಂ ಜಿಯ ಪಟ್ಟಣದಿಂದ ಬಂದಿರುವ ಚಾರನಂ ಕರೆದು ಈ ವೃತ್ತಾಂತವನ್ನು ವಿಚಾರಿಸಬ ಹುದು ?” ಎಂದು ನಿರೂಪಿಸಲಾವಾಕ್ಯಕ್ಕೆ ದೇವಿಯ ರಾಯನೂ ಮಂತ್ರಿಯೂ ಸಹ ಸಮ್ಮತಿಸಲು; ರಾಯನು ದ್ವಾರಪಾಲಕಿಯಂ ಕರೆದು - C ಎಲೌ ಕಾಂತೆಯೆ, ಕೌಶಾಂ ಬೀನಗರದಿಂದ ಬಂದಿರುವ ಚಾರನನ್ನು ಇಲ್ಲಿಗೆ ಕರೆದುಕೊಂಡು ಬರುವಳಾಗು' ಎಂದು ಅಪ್ಪಣೆಯನ್ಶಿಯಲು; ಆ ಮಂಜರಿಯು-ಆಜ್ಞಾನುಸಾರವಾಗಿ ನಡೆದುಕೊಳ್ಳುವೆ ನೆಂದು ಪೋಗಿ, ಆ ಚಾರನನ್ನು ಕರೆದುಕೊಂಡು ಬರುತ್ತಾ-II ಎಲೈ ಚಾರನೇ, ಇತರರಾದ ದೊರೆಗಳ ಸವಿಾಪವನ್ನು ಪೊಂದುವಂತೆ ನಮ್ಮ ರಾಯನ ಸನ್ನಿಧಿಯು ಪೊಂದತಕ್ಕುದಲ್ಲ. ನಮ್ಮ ರಾಯನು ಮಹಾತೇಜೋನಿಧಿಯಾಗಿರುವನಾದುದರಿಂದ ಭಯಭಕ್ತಿ ಯುಕ್ತನಾಗಿ ಬರುವನಾಗು ಎಂದು ನುಡಿಯಲು; ಆ ಚಾರನು-1( ಎಲೌ ಸ್ತ್ರೀಯೇ, ದೊರೆಗಳು ದೇವಾಂಶಪುರುಷರಾಗಿರುವರೆಂಬುದನ್ನು ಬಲ್ಲೆನು, ರಾಜ ಸೇವೆಯಿಂದಲೆ ಎನ್ನ ಶರೀರವು ಬಾಲ್ಯದಿಂದಲೂ ಬಳೆದಿರುವುದೆಂದು ತಿಳಿಯುವ ಳಾಗು, ಮತ್ತು ಲೋಕದಲ್ಲಿ ದೊರೆಗಳೂ ಅಗ್ನಿ ಯೂ ಸ್ತ್ರೀಯರೂ ಸಹ ಅತಿದೂ ರವಲ್ಲದೆ ಅತಿಸಮಿಾಪವಲ್ಲದೆ ಮಧ್ಯಭಾಗದಲ್ಲಿ ಸೇವಿಸುವುದಕ್ಕೆ ಯೋಗ್ಯರೆಂಬು ದನ್ನೂ ತಿಳಿದಿರುವೆನು ?” ಎಂದು ನುಡಿಯುತ್ತಾ, ಅಂತಃಪುರವನ್ನು ಪೊಕ್ಕು, ಅಲ್ಲಿರುವ ವಿಚಿತ ತರವಾದ ವಸ್ತುಗಳನ್ನೂ ಎಣಿಕೆಗೂ ಅಳವಡದೆ, ವರ್ಣನೆಗೆ ಒಳಗಾಗದೆ, ಜೀವದಿಂದೊಡಗೂಡಿ ಅಂಗಂಗಳಿಂ ಕೂಡಿ ಸಂಚರಿಸುವ ಮಿಂಚಿನ ಬಳ್ಳಿಗಳೋ ಎಂಬ ಸಂದೇಹಂಬಡಿಸುತ್ತಿರುವ ಸ್ತ್ರೀಯರುಗಳನ್ನೂ, ಮತ್ತು ಅಲ್ಲಲ್ಲಿ ಸಲ್ಲೀಲೆಯಿಂದೊಡ ಗೂಡಿ ಅವರುಗಳು ಮಾಡುವ ನಾಟ್ಯಗಳನ್ನೂ, ಸೇಳುವ ಸಂಗೀತಗಳನ್ನೂ ಸಹ