ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yo - ಕರ್ಣಾಟಕ ಕಾವ್ಯಕಲಾನಿಧಿ, - ಪೂಜಿಸಲೋಸುಗ ಸಮಸ್ಯರಾದ ಸಖಿಯರುಗಳಿಂದ ಕೂಡಿ ಪೋಗುವರೆಂದು ಮೊದಲೆ ವಿಜ್ಞಾಪನೆಯಂ ಗೈದಿರುವೆನಷ್ಟೆ, ಅದೇ ವಸಂತೋತ್ಸವದಿಂ ಪುಟ್ಟದ ಜನದ ಕೋಲಾಹಲಧ್ವನಿಯೆಂದು ಊಹಿಸುತ್ತಿರುವೆನು ?” ಎನಲು; ರಾಯನು- ಎಲೈ ಮಿತ್ರನೇ, ನಾವಿರ ರೂ ಚಂದ್ರಕಾಂತ ಶಿಲೆಯಿಂದ ಸುಂದರವಾದ ಈ ಚಂದ್ರಶಾಲೆ ಯನ್ನೆ ರಿ ಕೋಮಲಾಂಗಿಯರಾದ ಸ್ತ್ರೀ ಯರುಗಳು ಮಾತ್ರ ವಿಲಾಸಗಳನ್ನು ನೋಡು ವ ನಡೆ ಎಂದು ಅವನಿಂದೊಡಗೂಡಿ ಚಂದ್ರಶಾಲೆಯನ್ನೇರಿ ಸುತ್ತಲೂ ನೋಡಿ ಸಂತೋಷಭರಿತನಾಗಿ- ಎಲೈ ಮಿತ್ರನೇ, ಕೇಳು ಎನ್ನ ರಾಜ್ಯವು ಜಯಿಸಲ್ಪಟ್ಟ ಸಮಸ್ತ ಶತ್ರುಗಳುಳ್ಳು ದಾಗಿರುವುದು, ಯೋಗ್ಯನಾಗಿ ಕುಲಕ್ರಮಾಗತನಾಗಿ ನೀತಿ ಶಾಸ್ತ್ರ ಪಾರಂಗತನಾಗಿ ಧಮ್ಮಸೂಕ್ಷವಂ ತಿಳಿದಂಥ ಮಂತ್ರಿಯಲ್ಲಿ ಸಮಸ್ತ ರಾಜ್ಯ ಭಾರವೂ ಎನ್ನಿ೦ದ ಇರಿಸಲ್ಪಟ್ಟರು. ರಾಜಾಧಿರಾಜನಾದ ಪ್ರದ್ಯೋತರಾಯನ ಪುತ್ರಿಯಾದ ವಾಸವದತ್ತೆಯೇ ಎನಗೆ ಧರಪತ್ನಿಯಾಗಿರುವಳು. ಸಕಲವಾದ ಋತುಗಳಿಗೂ ಶ್ರೇಷ್ಟವಾದ ವಸಂತ ಋತುವೂ ಪ್ರಾಪ್ತವಾಗಿರುವುದು, ವಸಂತ ನಾಮಕನಾದ ನೀನೂ ಎನಗೆ ಪಾ ನಾರುಗಿವೆ. ಇದರಮೇಲೆ ವಸಂತೋತ್ಸವವೂ ದೊರಕಿರುವುದು. ಆದುದರಿಂದ ಎನ್ನ ಸಂತೋಷಕ್ಕೆ ಪಾರವೇ ಇಲ್ಲವು ?” ಎಂದು ನುಡಿಯಲು; ವಿದೂಷಕನು- ಅಯ್ಯಾ ರಾಜೇಂದ್ರನೇ, ನಿನಗೂ ಅಲ್ಲ, ಮನ್ಮಥ ನಿಗೂ ಅಲ್ಲ, ಬ್ರಾಹ್ಮಣನಾದ ಎನಗೊಯ್ಯನಿಗೇ ಈ ವಸಂತೋತ್ಸವವು ಪ್ರಾಪ್ತ ವಾಗಿರುವುದು, ಏತಕೆಂದರೆ, ಮಹಾರಾಜನಾದ ನೀನು ಎನ್ನೊಡನೆ ಸರಸಸಲ್ಲಾಪ ವಂ ಗೆಯ್ಯುತ್ತಿರುವೆಯಾದುದರಿಂದ ಎನಗೆ ಬಹಳವಾದ ಉತ್ಸವವುಂಟಾಗಿರುವುದು. ಮತ್ತು ಇದೋ ! ಇತ್ತಲು ಯೌವನದಿಂದ ಮತ್ತರಾಗಿ ಮದ್ದಾನೆಯಂತೆ ಮುದ್ದಾಗಿ ಪಾದಗಳನಿಟ್ಟು ಬರುವ ವಾರಿನಾರಿಯರು ಪಿಡಿದಿರುವ ಕೊಂಬಿನ ಆ೦ಡೆಗಳಲ್ಲಿ ತುಂಬಿದ ಓಕುಳಿಯ ನೀರಿನ ಪೆಟ್ಟಿನಿಂದ ಕುಣಿದಾಡುವ ಎಳಯ ಸೆಣ್ಣುಗಳಿಂದ ವೈ ದ್ವಿಯಂ ಪೊಂದಿಸುತ್ತ ಬಿತ್ತರಿಸಿ ಬಾರಿಸುವ ಮುದ್ದಾದ ಮದ್ದಳೆ ವೀಣಾವೇಣು ಚರರಿ ಯೆಂಬ ವಾದ್ಯಗಳ ಸದ್ದು ಗಳಿ೦ದ ಬೀದಿಯಲ್ಲವಂ ಶಬ್ಬ ಮಯಂಗೆಯ್ದು ಗಲ್ಲದೆ ಗಂಧದ ಹುಡಿಯನ್ನು ಆನಂದದಿಂದ ಚೆಲ್ಲುತ್ತ ಹತ್ತು ದಿಕ್ಕುಗಳಂ ಪರಿಮಳಂಗೊಳಿಸಿ ಬಣ್ಣ ವೇರಿಸುವ ಈ ವಸಂತೋತ್ಸ ವದ ವೃದ್ಧಿಯಂ ಚೆನ್ನಾಗಿ ನೋಡುವನಾಗು ” ಎಂದು ಜಿ ನೈಸಲು; ಆ ವತ್ಸ ರಾಜನು ಸಂತೋಷದಿಂದ ಸುತ್ತಲೂ ನೋಡಿ, ಎಲೈ ಮಿತ್ರನೇ, ಅಂತಃಪುರದ ನಾರಿಯರಿಗೆ ಉಂಟಾಗಿರುವ ಈ ವಸಂತೋತ್ಸವದ ಹೆಚ್ಚುಗೆಯು ಮಸ್ತಕವಂ ಮಿಾರಿ ತೋರುತ್ತಲಿರುವುದು, ಸುತ್ತಲೂ ವಿಸ್ತಾರವಾಗಿ ಏಳುತ್ತಿರುವ ಗಂಧದ ಹುಡಿಯ ವೃದ್ಧಿಯಿಂದ ಆಕಾಶದಲ್ಲಿ ಎಳವಿಸಿಲು ಪಟ್ಟಿ ದಂತೆ ತೋರುತ್ತಲಿ ರುವುದು, ಕುಂಕುಮದ ಹುನ ಚೂರ್ಣಗಳು ಪೂರ್ಣವಾಗಿ ವ್ಯಾಪಿಸಿರುವುದ ರಿಂದ ಸಂಧ್ಯಾರಾಗವು ಸಾಂದ್ರವಾಗಿ ದಿಕ್ಕುಗಳಲ್ಲಿ ವ್ಯಾಪಿಸಿದಂತೆ ತೋರುತ್ತಲಿರು