ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- ವರಾಜನ ಕಥೆ. - ೭೯ ಆ ನಿಪಣಿಕೆಯು ಬರುತ್ತಾ, “ ರಾಯನ ಸಮಸ್ಯ ವೃತ್ತಾಂತವೂ ಎನ್ನಿ೦ದ ತಿಳಿಯಲ್ಪಟ್ಟಿತು, ಆದುದರಿಂದ ಈ ವಾರ್ತೆಯೆಲ್ಲವನ್ನೂ ವಾಸವದತ್ತಾ ದೇವಿಗೆ ವಿಜ್ಞಾ ಪನೆಯಂ ಗೆಯ್ಯುವೆನು ” ಎಂದು ಬರುತ್ತಿರಲು ; ಸುಸಂಗತೆಯು ನಿಪುಣಿಕೆಯಂ ಕುರಿತು,– ಎಲೆ ಬಾಲ್ಯಮಿತ್ರಳಾದ ನಿಪು ಣಿಕೆಯೇ, ಅಧಿಕವಾದ ಆಚ್ಚರದಿಂದ ವ್ಯಾಪ್ತವಾದ ಹೃದಯವುಳ್ಳವಳಾಗಿ ಒತ್ತಿನಲ್ಲಿ ಬರುವ ಎನ್ನ ನ್ನು ತಿರಸ್ಕರಿಸಿ ಕಣ್ಣೆತ್ತಿ ನೋಡದೆ ಪೋಗುತ್ತಿರುವುದಕ್ಕೆ ಕಾರಣವೇನು ? ೨) ಎಂದು ನುಡಿಯಲಾಗಿ ನಿಪುಣಿಕೆಯು ಹಿಂದಿರುಗಿ ನೋಡಿ: ಎಲೆ ಸುಸಂಗತೆಯೇ ಬಹಳ ಆಶ್ಚರದಿಂದ ಯುಕ್ತಳಾಗಿ ಇದ್ದೀಯ ? ಎಂದು ಚೆನ್ನಾಗಿ ನುಡಿದಿರುವೆ. ಆದರೂ ಆಶ್ಚರಕೆ ಕಾರಣವಂ ವೇಳುವೆನು ಕೇಳು, ಶ್ರೀಶೈಲದಿಂದ ಬಂದ ರಾಮಾ ನಂದನೆಂಬ ಸಿದ್ಧ ಪುರುಷನ ದೆಸೆಯಿಂದ ನಮ್ಮ ವತ್ಸ ರಾಜನು ೧೨ ಕಾಲದಲ್ಲಿ ಕುಸುಮ ಸಮೃದ್ಧಿಯು ಉಂಟುಮಾಡುವ ದೊ.ಹಳಕ್ರಿಯೆಯನ್ನು ಅಭ್ಯಾಸವಂ ಗೆಯ್ಯು ತಾನು ಸಂರಕ್ಷಿಸುತ್ತಲಿರುವ ನವಮಾಲಿಕೆಯೆಂಬ ಲತೆಗೆ ಭ್ರಷ್ಟ ಸಮೃದ್ಧಿಯನ್ನು ೦ಟು ಮಾಡಿ ಸಂತುಷ ನಾಗಿರುವ ವಾರ್ತೆಯನ್ನು ಕೇಳಿರುವೆನು. ಈ ವಾರ್ತೆಯನ್ನು ಚೆನ್ನಾಗಿ ತಿಳಿದುಬರುವುದೆಂದು ವಾಸವದತ್ತಾ ದೇವಿಯು ಕಳುಹಿಸಿಕೊಡಲಾಗಿ ಬಂದು ಆ ವೃತ್ತಾಂತವನ್ನು ತಿಳಿದುಬಂದೆನು. ಈಗ ನೀನು ಏನು ನಿಮಿತ್ತದಿಂದ ಈ ಶಾರಿಕಾ ಪಂಜರವನ್ನು ಹಿಡಿದು ಯಾವ ಸ್ಥಳಕ್ಕೆ ಬರುತ್ತಿದ್ದೀಯ, ನೇಳು ?” ಎನಲಾಸುಸಂಗ ತೆಯು – ಎಲೆ ಪ್ರಿಯಸಪಯೇ, ಕೇಳು. ಮಿತ್ರಳಾದ ನಾಗರಿಕೆಯನ್ನು ಹುಡು ಕಿಕೊಂಡು ಪೋಗುತ್ತಲಿರುವೆನು ' ಎಂದು ನುಡಿಯಲು ; ಅವಳು-ಎಲೆ ಸುಸಂಗ ತೆಯೇ, ನಿಮ್ಮ ಸಾಗರಿಕೆಯು ಉರಿಬಡಿದ ಲತೆಯಂತೆ ಕಂದಿದ ಶರೀರವಂ ತಾಳಿ, ಏನೋ ಒಂದು ಸಂತಾಪದಿಂದ ಯುಕ್ತಳಾಗಿ ಸುವರ್ಣದ ಕದಳಿಗೃಹವಂ ಪ್ರವೇ ಶಿಸಿದಳು. ನೀನೂ ಆ ಸ್ಥಳವನ್ನು ಕುರಿತು ಪೋಗುವಳಾಗು. ನಾನು ದೇವಿಯ ಸನ್ನಿ ಧಿಯಂ ಪೊಂದುವೆನು ಎಂದು ನುಡಿದು ಪೋಗಲು ; - ಇತ್ತಲು, ನಾಗರಿಕೆಯು ತನ್ನ ಶರೀರವನ್ನು ಮನ್ಮಥನಿಗೆ ಕೈಗಾಣಿಕೆಯಂ ಗೆಯ್ದು ಅಧಿಕ ಸಂತಾಪದಿಂದ ಯುಕ್ತಳಾಗಿ ತನ್ನ ಮನಸ್ಸನ್ನು ಕುರಿತು, 1 ಎಲೆ ಮನವೇ, ಯಾವ ಪುರುಷನಂ ನೋಡಿದಮಾತ್ರದಿಂದಲೇ ನೀನು ಇಂಥ ಆಯಾಸಕೆ ಪಾತ್ರವಾಗಿರುವೆಯೋ ಆಯಾಸಮಾತ್ರವೇ ಫಲವಾಗಿ ದುರ್ಲಭವಾಗಿರುವ ಅ೦ಥ ಪುರುಷನನ್ನು ಮರಳಿ ಮರಳಿ .ಕೆ ಅಯಾಸಕ್ಕೆ ಪಾತ್ರವಾಗಿ ಅನುಸರಿಸುತ್ತಲಿರುವೆ ? ಅವನಂ ನೋಡುವಂಥ ಪುಣ್ಯವನ್ನು ಸಂಪಾದಿಸಲೇ ಇಲ್ಲ. ಆದರೆ ನಿನ್ನ ಮಧತ್ವ ವನ್ನು ನಾನು ಏನೆಂದು ಬಣ್ಣಿಸಲಿ ? ಹುಟ್ಟಿದ್ದು ಮೊದಲಾಗಿ ಇದುವರೆಗೂ ಸಂಗ ಡಲೇ ಅಭಿವೃದ್ಧಿಯನ್ನು ಪೊಂದಿದಂಥ ಎನ್ನ ನ್ಯೂ ಬಿಟ್ಟು ಕ್ಷಣಮಾತ್ರವು ನೇತ್ರಗ ಳಿಗೆ ಗೋಚರವಾದಂಥ ಆ ರಾಯನನ್ನು ಅನುಸರಿಸಿ ಹೋಗುತ್ತಲಿರುವ ನಿನಗೆ ಸ್ವಲ್ಪ