ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಉ ಪೊ * ಬ್ಲ್ಯಾ ತ ವು . ಪ್ರಬಂಧವು ಶ್ರಾವ್ಯವೆಂದೂ, ದೃಶ್ಯ ವೆಂದೂ ಎರಡು ವಿಧವಾಗಿದೆ. ಕಾವ್ಯ, ಚಂಪೂಭೇದದಿಂದ ಶ್ರಾವ್ಯವು ಎರಡುವಿಧವ, ನಾಟಕ, ಪ್ರಕರಣ, ಬಾಣ, ಪ್ರಹಸನ, ಡಿವ, ವ್ಯಾಯೋಗ ಮುಂತಾದ ಭೇದಗಳಿ೦ದ ದೃಶ್ಯ ಪ್ರಬಂಧವು ಇತ್ತುವಿಧವಾಗಿದೆ. ಈ ಹತ್ತು ಬಗೆಗೂ ರೂಪಕವೆಂದು ಹೆಸರು. ಅವರ ಳೊಳಗೆ ಈ ವಸಂತಮಿತ್ರವಿಜಯವೆಂಬ ಗ್ರಂಥವು ಕಲ್ಪಿತಕಥೆಯುಳ್ಳದ್ದಾಗಿ ಯ, ಮಂತ್ರಿಯನಾಯಕನಾಗಿ ಉಳ್ಳುದಾಗಿಯೂ ಲೋಕವ್ಯಾಪಾರಗಳ ಗಾಶ್ರಯವಾಗಿಯೂ ಇರುವುದರಿಂದ ಲಕ್ಷಣಶಾಸ್ತ್ರದ ಪ್ರಕಾರ ಇದನ್ನು ಪ್ರಕ ರಣವೆಂದು ಬಳಬಹುದು. ಕನ್ನಡಭಾಷೆಯಲ್ಲಿ ವಸ್ತು ವರ್ಣಕವೆಂಬ ಗ್ರಂಥಗಳ ಪ್ರಚಾರವಾಗಿವೆ ಯಲ್ಲದೆ ನಾಟಕಾದಿಗಳೇ ಇಲ್ಲ. ಆದರೆ ಸುಮಾರು ೨೫೦ ವರುಷಗಳ ಹಿಂದೆ ಮೈಸೂರುದೇಶವನ್ನಾಳುತ್ತಿದ್ದ ಚಿಕ್ಕದೇವರಾಜವಡೆಯರಲ್ಲಿ ಆಸ್ಥಾನಕವಿಗ ಳಾಗಿದ್ದ ಸಿಂಗರಾರ್ಯರು ರತ್ತಾ ವಳಿಯೆಂಬ ಸಂಸ್ಕೃತ ನಾಟಕವನ್ನೂ ಮಿತ್ರ ವಿಂದಾ ಗೋವಿಂದೀಯವೆಂಬ ಹೆಸರಿನಿಂದ ಹಳೆಗನ್ನಡಭಾಷೆಯಲ್ಲಿ ತಿರುಗಿಸಿ ದರು. ಇದು ಹೊರತು ಯಾರೂ ನಾಟಕಾದಿಗಳನ್ನು ಕನ್ನಡದಲ್ಲಿ ಮಾಡಿರ ಲಿಲ್ಲ. (೧vv0ನೆ ಇಸವಿಯಲ್ಲಿ ಮೈಸೂರು ಮಹಾರಾಜ ಶ್ರೀ ಚಾಮರಾ ಜೇಂದ್ರವಡೆಯರ ಕಾಲದಲ್ಲಿ ಆಸ್ಥಾನಕವಿಗಳಾಗಿದ್ದ ವೀರಶೈವಮತಸ್ಸ ನಾದ ಬಸಪ್ಪಶಾಸ್ತ್ರಿಗಳು ಮೊದಲು ಕಾಳಿದಾಸಕೃತ ಶಾಕುಂತಲನಾಟಕವನ್ನು ಆ ರಾಜರ ಪ್ರೋತ್ಸಾಹದಿಂದ ಕನ್ನಡದಲ್ಲಿ ಮಾಡಿ, ಅನಂತರ ಉತ್ತರರಾಮಚರಿತ, ಚಂಡಕೌತಿ, ರತ್ನಾವತಿ ಎಂಬ ನಾಟಕಗಳನ್ನು ಕನ್ನಡದಲ್ಲಿ ಮಾಡಿದರು. ಅವರ ಮೇಲ್ಪಟ್ಟಿಯನ್ನು ಹಿಡಿದು ಕನ್ನಡ ಪಂಡಿತರಾದ ಮ? ಸೂರನಾರಾ ಯಣಶಾಸ್ತ್ರಿಗಳು ಮಗ ಅಯ್ಯಾ ಶಾಸ್ತ್ರಿಗಳೂ, ಮ! ಶೀತಾರಾಮಶಾಸ್ತ್ರಿಗಳು ಮುಂತಾದವರು ನಾಗನಿ೦ದ, ವಿಕ್ರಮೋರ್ವಶೀಯ, ಪಾರತೀಪರಿಣಯ ಮುo 3ಾದ ಸಂಸ್ಕೃತ ನಾಟಕಗಳನ್ನು ಕನ್ನಡಭಾಷೆಗೆ ತಿರುಗಿಸಿದರು. ಇನ್ನು ಕೆಲವರು ವಸುಚರಿತ್ರೆ, ಮನುಕರಿತ್ರೆ ಎಂಬ ಆಂಧ್ರಗ್ರಂಥಗಳ ಕಥೆಯನ್ನು ಧಾರವಾಗಿಟ್ಟುಕೊಂಡು ನಾಟಕದಂತೆ ಕನ್ನಡದಲ್ಲಿ ರಚಿಸಿದರು, - ಇದುವರೆಗೆ ಹುಟ್ಟಿರುವ ನಾಟಕಗಳೆಲ್ಲಾ ಪ್ರಾಯಶಃ ಬೇರೆಬೇರೆ ಭಾಷೆಯ ಇದ್ದ ನಾಟಕಗಳಿಂದ ಕನ್ನಡಕ್ಕೆ ತಿರುಗಿಸಿದವುಗಳಾಗಿಯೇ ಇವೆ. ನಾಟಕಾದಿ ರೂಪಗಳು ರಸಭಾವಗಳನ್ನು ಪ್ರತ್ಯಕ್ಷವಾಗಿ ತೋರಿಸಿ, ಸಭಿಕರನ್ನು ರಂಜನೆ ಗೊಳಿಸಬೇಕೆಂಬ ಉದ್ದೇಶದಿಂದಲೇ ಹುಟ್ಟಿದವುಗಳಾಗಿವೆ. ಇವುಗಳನ್ನು ನೋಡಿದವರಿಗೆ ರಸಸ್ವರೂಪವು ಚೆನ್ನಾಗಿ ಗೊತ್ತಾಗುವುದಲ್ಲದೆ ಅವಿದ್ಯಾ ನಂತರ ಬುದಿ ಗಳು ಕೂಡ ಪ್ರೌಢವಾಗುವುದರಲ್ಲೇನೂ ಸಂಶಯವಿಲ್ಲ. ಆದರೆ