ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿತ್ರ ವಿ ಜ ಯ ನಾ ಟ ಕ ೦, ೯೧ ವಸಂತಮಿತ್ರ, ಪ್ರಿಯೆ, ಈಗ ಒಂದು ಯುಕ್ತಿಯನ್ನು ಮಾಡು. ನೀನು ಹೋಗಿ ಇವನ ಎದುರಿನಲ್ಲಿ ನಿಲ್ಲು, ಏನು ಮಾಡುವನೋ ನೋಡೋಣ. - ಶುಭಾಂಗಿ (ಹಾರಕ್ಕೆ ಹೋಗಿ) ಅಯ್ಯ, ನೀನಾರು. ಇಲ್ಲಿಗೆ ಏಕೆ ಬಂದೆ ? ಸ್ತ್ರೀಯರ ಅಂತಃಪುರಕ್ಕೆ ಬರಲು ಕಾರಣವಿಲ್ಲವಲ್ಲ. ಸೌಗಂಧಿಕ ಅಮ್ಮ, ಸತ್ತಿದ್ದವನು ಬದುಕಿದಂತಾಗಿರುವುದು. ನಾನು ಇಲ್ಲಿಗೆ ಹೇಗೆ ಬಂದೆನೋ ಅದೇ ತಿಳಿಯದು ; ಕೋಪಿಸಿಕೊಳ್ಳ ಬೇಡ, ನನ್ನ ಮಾತನ್ನು ಪಾಲಿಸು. - ಶುಭಾಂಗಿ, ಸುಂದರನೆ, ನೀನು ಸತ್ತದ್ದೂ ನಿಜ, ಈಗ ನೀನು ಬದುಕಿರುವುದೂ ನಿಜ. ನಿನ್ನಂತಹ ಅವಿವೇಕಿಯನ್ನು ಪ್ರಪಂಚದ ಲ್ಲೆಲ್ಲೂ ಕಾಣೆ, ಒಳ್ಳೇದು ನೀನುಯಾರು ? ನಗಂಧಿಕ ತಾಯೆ, ನಾನು ವಸಂತಮಿತ್ರನ ಸ್ನೇಹಿತ, ಅವನು ನನ್ನನ್ನು ಪ್ರಣವೆಂದು ಕಾದಾಡಿಕೊಂಡು ಬರುತ್ತಿದ್ದನು. ಶುಭಾಂಗಿ, ನಿನ್ನ ಮದುವೆಯಾದ ಹೆಂಡತಿಯೇ ನಿನ್ನನ್ನು ಕೊಂದು ಹಾಕಿದಳು. ಹೇಗೆ ಜೀವದಿಂದ ಬದುಕಿದೆಯೋ ನನಗೆ ತಿಳಿಯದು. ನನ್ನ ಪತಿಯಾದ ವಸುಮಿತ್ರನು ಬರುವ ಹೊತ್ತಾ ಯಿತು. ಬೇಗ ಹೊರಕ್ಕೆ ಹೋಗು ಸಾಗಂಧಿಕ, ಏನು, ಏನು, ನೀನು ವಸಂತಮಿತ್ರನ ಹೆಂಡತಿಯೆ ? ನೀನು, ನನ್ನ ಸ್ನೇಹಿತನ ಹೆಂಡತಿಯಾದುದರಿಂದ ಪ್ರೀತಿಯಿಂದ ವಂದಿ ಸಿದೆನು. (ನಮಸ್ಕರಿಸಿ) ದಯವಿಟ್ಟು ನನ್ನ ಸ್ನೇಹಿತನನ್ನು ತೋರಿಸಿ ಕೃತಾರ್ಥನನ್ನಾಗಿ ಮಾಡಿದರೆ ಬಹಳ ವಂದಿಸುವೆನು. ಶುಭಾಂಗಿ, ನಿನ್ನ ಸ್ನೇಹಿತನಿಂದಲೇ ನೀನು ಬದುಕಿದೆ. ನಿನ್ನ ಹೆಣ ವನ್ನು ಹೊತ್ತುಕೊಂಡು ಬಂದವನೇ ಆತನು. ಆನೀಚಸ್ತಿಯಿಂದ ಪ್ರಾಣಾಪನಾದ ನಿನ್ನ ಸ್ನೇಹಿತನನ್ನು ದೇಶಭ್ರಷ್ಣನನ್ನಾಗಿ ಮಾಡಿಸಿದೆ ಯಲ್ಲ, ನೀನು ಎಂತಹ ನೀಚ ಮಾರ್ಗವನ್ನು ಅವಲಂಬಿಸಿದೆಯೋ ಅದನ್ನು ಯೋಚಿಸು, ನೀನು ಇಷ್ಟು ಬುದ್ಧಿವಂತನಾದಾಗ್ಯೂ ಆಯು ಗೋಪ್ಯವಾಗಿ ನಿನ್ನ ಸ್ನೇಹಿತನ ಕಿವಿಯಲ್ಲಿ : ಇದನ್ನು ಯಾರೊಡ ನೆಯೂ ಹೇಳಬೇಡ ” ಎಂಬದ್ವಂದ್ವಾರ್ಥವುಳ್ಳ ಶಬ್ದಗಳನ್ನು ಗೋಪ್ಯ