ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನ ಸ ೦ ತ ವಿ ಶ್ರೀ ವಿ ಜ ಯ ನಾ ಟ ಕ ೦ ೦ - ೨೩ ಹಸಿವು ತೃಷೆಗಳೆಂಬ ಶತ್ರುಗಳು ಬಾಧಿಸುತ್ತಿರುವವಲ್ಲ. ಕಂದ | ಅಡಿಯಿಡಲೆನಗೆಡೆತೋರದು ಕಡುದುಗುಡಂಮೇಲೆಮೇಲೆಮನಕಾವಂಕುಂ ! ಜಡಜಾಸನನೇದುರ್ಮತಿ ಗಡಪೊಡವಿಯೊಳೆನ್ನ ನಿಂತುಬಿಡದಳಲಿಸುವಂ |೨೪ ಆತ್ಮಹತ್ಯವನ್ನು ಮಾಡಿಕೊಂಡರೇನು, ಆಹಾ! ಇದು ದೊಡ್ಡ ತಪ್ಪು, ಮಿತ್ರಯೋಗಹೊಂದಿದ ನೀಚನೆ ಸಾಯಿ, (ಎಂದು ಮೂರ್ಛಗತನಾದನು.) - ( ಗಾ ಲ ವ ನ ಪ್ರವೇಶ - ) ಗಾಲವ (ಸ್ವಗತಃ) ಎಂದಿನಂತೆ ನಮ್ಮ ಗುರುಗಳ ದೇವತಾರ್ಚ ನೆಗೆ ಪುಷ್ಪಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವೆನು. (ಅತ್ತಿತ್ತ ನೋಡಿ) ಅದೇನು ಅಲ್ಲಿ ಬಿದ್ದಿರುವುದು. ( ಹುರಕ್ಕೆ ಹೋಗಿ ) ಈತನು ಸುಂದರ, ಯೌವ್ವನಸ್ಥ, ವ್ಯಸನದಿಂದ ಮೂರ್ಛಿತನಾಗಿರು ವಂತಿದೆ. ಕಾರಣವೇನೋ ತಿಳಿಯಲಿಲ್ಲವಲ್ಲ. ಒಳ್ಳೆದು, ಎಬ್ಬಿಸಿ ವೃತ್ತಾಂತವನ್ನು ವಿಚಾರಿಸುವೆನು. ಅಯ್ಯ, ಮಾರ್ಗಸ್ಥನೆ. ಏಳು, ಏಳು. ವಸಂತಮಿತ್ರ. (ಸ್ವಲ್ಪ ಚೇತರಿಸಿಕೊಂಡು) ಮಹಾತರೆ, ಪಾಪಿ, ದೋಹಿಯಾಗಿರುವ ನನ್ನನ್ನು ಮುಟ್ಟಬೇಡಿ, ದೂರದಲ್ಲಿ ನಿಲ್ಲಿ. ಗಾಲವ, ದುಃಖಪಡುವುದೇತಕೆ? ವಸಂತಮಿತ್ರ, ಪೂಜ್ಯರೆ? ಒಬ್ಬ ಯಿಂದುಂಟಾದ ಮಿತ್ರನ ವಿಯೋಗವೇ ದುಃಖಕ್ಕೆ ಕಾರಣ. ಮುಂದಕ್ಕೆ ಹೇಳಲಾರೆನು ಕ್ಷಮಿಸಿ. - ಗಾಲವ, ಆಹಾ! ಆಕಸ್ಮ, ಸ್ತ್ರೀಯಿಂದ ಕೇಡುಂಟೆಂದು ತಿಳಿದು, ಸಂಸಾರವು ನೀರಸವೆಂದು ಭಾವಿಸಿ, ತ್ಯಜಿಸಿ ಈ ಅರಣ್ಯ ದಲ್ಲಿ ಪರಮಾತ್ಮನನ್ನು ಧ್ಯಾನಿಸಿ ನಿಶ್ಚಂಚಲಚಿತ್ತನಾಗಿರುವೆನು. ವಸಂತಮಿತ್ರ ಮಹಾತ್ಮರೆ? ನಾನು ತನ್ನ ಶಿಷ್ಯನಾಗಿರಬೇಕೆಂಬ ಕುತೂಹಲವು ಉಂಟಾಗಿದೆ. ಆದುದರಿಂದ ದಯವಿಟ್ಟು ಪರಿಗ್ರಹಿಸ ಬೇಕೆಂದು ಬೇಡುವೆನು.