ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

- ೭೪ ಚ ತು ಧಾ ೯೦ ಕd . ವಿದ್ಯದಿಂದ ವಿವೇಚನಾಶಕ್ತಿಯುಂಟಾಗಿ ಪಾಪ ಪುಣ್ಯಭೀತಿಯಾ ಗುವುದರಿಂದ ಆತನಲ್ಲಿ ಮತ್ತಾವ ಸದ್ಗುಣಗಳಿದ್ದಾಗ ಚಿನ್ನಕ್ಕೆ ವರ್ತಿಕೊಟ್ಟಂತಿರುವುದು. ಆದುದರಿಂದ ವಿದ್ಯವಿಲ್ಲದ ಅನೇಕ ರಾಜರನ್ನೂ ವರಿಸದೆ ನಿರಾಕರಿಸಿರುವುದಕ್ಕೆ ಇದೇಕಾರಣ. ಚಂಪಕಮಾಲಿನಿ, ಅಂತಹ ವಿದ್ಯಾವಂತನು ಬಂದರೆ ನಿನ್ನನ್ನು ತರಿಸುವನೋ ಇಲ್ಲವೋ ಎಂಬುವ ಸಂಶಯವು ಮಾತ್ರ ನನಗಿ ರುವುದು, ಶುಭಾಂಗಿ, ಸಖಿ, ವಿದ್ಯಾವಂತನು ವರಿಸಬೇಕಾಗಿದ್ದರೆ ಸದಾ ರ್ಥದ ಯೋಗ್ಯತಾ ಯೋಗ್ಯತೆಗಳನ್ನು ಪರಿಶೀಲನೆಮಾಡದೆ ವರಿಸು ವನೆಂದು ತಿಳಿದಿರುವೆಯಾ ? ಆದರೆ ಕೇಳು, ಕಂದ | ಗರಿವೂವಡಗಿರ್ದೊಡವಾ ಅರಲುಣಿಗಳೊಡದೆ ಕಮ್ಮೆಲರಿನದನರಿಗುಂ || ನಿರುಕಿಸಿ ಪವನೊಲವಿಂ ಪರರಿಂಗಿತ ವರಿವನಂತಿರಿಳೆಯಳ್ಳ ದುರಂ ೪೬೧ ಇದೂ ಅಲ್ಲದೆ ತುಂಬಿಯು ತನಗೆ ಎಷ್ಟು ಶ್ರಮವಾದಾಗ ದೂರ ದಲ್ಲಿರುವ ಕಮಲವನ್ನೇ ಹುಡುಕಿಕೊಂಡು ಬರುವುದಲ್ಲವೆ ? ಚಂಪಕಮಾಲಿನಿ, ಸರ್ವರಿಗೂ ಆನಂದಕರವೆನಿಸಿರುವ ಹಾಲು ಯಾರಿಗೆತಾನೆ ಬೇಡ. ಶುಂಭಾಂಗಿ, ಹಾಲೇ ಜೀವನಾಧಾರವಾಗಿರುವಾಗ್ಗೆ ಹೇಳತ ಕುದೇನಿದೆ ? ಚಂಪಕಮಾಲಿನಿ, ನೀನು ವಿದ್ಯಾವಂತಳಾದುದರಿಂದ ನಿನಗೆ ಉತ್ತ ರಹೇಳುವುದಕ್ಕಾಗುವುದಿಲ್ಲ. ಶುಭಾಂಗಿ, ನನ್ನ ಎಡದಹುಬ್ಬು ಹಾರುವುದೇತಕ್ಕೆ ಸಖಿ ? ಚಂಪಕಮಾಲಿನಿ, ನೀನು ಅನುರೂಪನಾದ ಒಬ್ಬ ವರನನ್ನು ಸೇರುವುದಕ್ಕೆ, ಶುಭಾಂಗಿ, ನಿನ್ನ ಪರಿಹಾಸ್ಯವು ಸಾಕು.