ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿ ತ ವಿ ಜ ಯ ನಾ ಟ ಕ ೦ - ೭೯ ರಿಸಿ ಹಾಕಬಹುದಾಗಿತ್ತಲ್ಲಾ, ಹೊರಟೇ ಹೋದಳು. ಮುಂದೇನು ಮಾಡಲಿ. ಒಳ್ಳೇದು ಕಾಳಿಯನ್ನು ಕುರಿತು ಪ್ರಾರ್ಥಿಸುವೆನು. ( ಸೊತ್ರ ಮಾಡುವನು.) " ಸ್ಥಾನ ೪-ದರ್ಬಾರು. (ಸತ್ಯ ನಿಧಿ, ಸ್ನೇಹಿತ ಕುಳಿತಿರುವರು.) ಸ್ನೇಹಿತ, ಮಹಾರಾಜನೆ, ತನ್ನ ಕುಮಾರಿಗೆ ತಕ್ಕ ವರನು ದೊರೆತನೆ ? ಸತ್ಯನಿಧಿ, ಸ್ನೇಹಿತನೆ, ಮಕ್ಕಳಿಲ್ಲವೆಂದು ವ್ಯಥೆಪಡುವ ಜನರ ಮೌಡ್ಯವನ್ನೇನೆಂದು ಹೇಳಲಿ, ಗಂಡುಮಕ್ಕಳಾದರೆ ಅವರಿಗೆ ಗುರು ಮುಖಾಂತರ ತಕ್ಕ ಶಿಕ್ಷೆಯನ್ನ ಕೊಡಿಸಿ, ವಿವೇಕವಂತರನ್ನಾಗಿ ಮಾಡ ದಿದ್ದರೆ ತಂದೆಯು ಜೀವಂತನಾಗಿದ್ದರೂ ಸತ್ತವನಂತೇ ಭಾವಿಸಬೇಕು. ಹೆಣ್ಣು ಮಕ್ಕಳಾದರೆ, ಅವರಿಗೆ ಸಕಾಲದಲ್ಲಿ ಬೆ.ಗ್ಯವಾದ ವರನಿಗೆ ಕೊಟ್ಟು ಅಗ್ನಮಾಡಿ, ಸಂಸಾರಧರ್ಮವನ್ನೂ, ಪತಿ ಶುಶೂಪ್ರಣೆ ಯನ್ನೂ, ಭಕ್ತಿಯನ್ನೂ ತಿಳಿಯಿಸಿ ವಿವೇಕವಂತರನ್ನಾಗಿ ಮಾಡದಿದ್ದರೆ ಮಾತಾ ಪಿತೃಗಳ ಕುಲಗಳಿಗೆ ಅಪಕೀರ್ತಿಯೂ, ವಂಶ ಕ್ಷಯವೂ ಉಂಟಾಗುವುದಲ್ಲದೆ ಆಚಂದ್ರಾರ್ಕವಾಗಿ ಅಪಯಶಸ್ಸೆಂಬ ಲತೆಯು ದುರ್ಜನರ ದುರ್ಬೋಧೆಗಳೆಂಬ ಉದಕದಲ್ಲಿ ಅಭಿವೃದ್ಧಿಯಾಗಿ, ದುರ್ಗುಣಗಳೆಂಬ ಹಣ್ಣುಗಳು ಬಿಡುವುವು. ಆದುದರಿಂದ ನನ್ನ ಮಗಳಿಗೆ ತಕ್ಕ ವರನು ದೇವರು ಯಾವಾಗ ಇಭಿಸುವಂತೆ ಮಾಡು ವನೊ, ಅಂದಿಗೆ ನಾನು ಧನ್ಯನಾಗುವೆನು. - - - - - - - - - - - - --------

  • ರಾಗ-ಹಿಂದುಸ್ಥಾನಿತೋಡಿ.

ಛಾಪು ಸಾರಸಾರಸಮಾನಲೋಚನೆ ಕಾಂತಿಕಾಂತಿಯುತಾನನೆ ! ಭೂರಿಭೂರಿಪ್ರಸಂ ಘಸಂಹೃತಿಶಕ್ತಿಶಕ್ತಿಸಮನ್ವಿತೆ ||ಪಮರಮಾರಣದಕ್ಷದಕ್ಷ ಮದಾಪಹಾಂಕ ವೆರಾಜಿತೆ | ಧಿರಧೀರತಿಪಾಲಪಾಲನಶೀಲೆ ಪಾಲಿಪುದಂಬಿಕೆ !QI