ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವ ಸ೦ತ ಮಿತ್ರ ವಿ ಜ ಯ ನಾ ಟ ಕ ೦ . vn ಸತ್ಯನಿಧಿ, (ಮಗಳನ್ನು ನೋಡಿ) ಕಂದ 1ನಾರಗುಣರೂಪಶೀಲನ ಯೋರಾಜಿತರಾಜವಂಶತಿಲಕ೦ಗೀವೆಂ || ನೀರೇಜಾಯತಲೋಚನೆ ಮಾರಾರಿಯಘಟನಮೆಂತುವೆಂಬುದನರಿಯೆಂ 1೪vil ಸತ್ಯನಿಧಿ, ಸ್ನೇಹಿತನೆ, ನಮಗೇ ಇಷ್ಟು ಕಷ್ಮವಾಗಿರುವಾಗೆ ಬಡವರ ಪಾಡೇನೆಂದು ಹೇಳುವುದಕ್ಕಾದೀತು. ಸ್ನೇಹಿತ. ತಾವು ಧರ್ಮಪ್ರಭುಗಳಾದುದರಿಂದ, ಶಾಸ್ತ್ರ ಸಮ್ಮತವಾಗಿ ನಡೆಯಬೇಕೆಂದು ಪ್ರಯತ್ನಿಸುವಿರಿ, ಬಡವರ ವಿಷಯವನ್ನು ಹೇಳ ತಕ್ಕುದೇನ; ಕನ್ಯಾ ವಿಕ್ರಯವೇ ಅವರ ಧರ್ಮ, ಕುಶಲಮತಿಯ ಪ್ರವೇಶ. ಸತ್ಯನಿಧಿ, ಮಂತ್ರಿಯೆ, ವರಾನ್ವೇಷನಾರ್ಥವಾಗಿ ಹೋಗಿದ್ದ ಕಾರವೇನಾಯಿತು? ಕುಶಲಮತಿ, ತನ್ನ ಕುಮಾರಿಗೆ ಆನುರೂಪನಾದವನೊಬ್ಬನನ್ನು ನೋಡಿಕೊಂಡು ಬಂದಿರುವೆನು. ಸತ್ಯನಿಧಿ, ಆತನು ಈಗ ಎಲ್ಲಿರುವನು ? ಕುಶಲಮತಿ, ಈ ಊರು ಹೊರಗಿರುವ ದಕ್ಷಿಣ ಸ್ಮಶಾನದಲ್ಲಿರು ವನು. ಅವನು ಯತಿವೇಷವನ್ನು ಧರಿಸಿರುವನು. ಶುಭಾಂಗಿ, ತಂದೆಯೆ, ನಿನ್ನೇದಿವಸ ಮಹಾಕಾಳಿಯು ಅಪ್ಪಣೆ ಕೊಡಿಸಿದ ಆ ಮಹಾಪುರುಸನಾಗಿರಬಹುದು. ಆತನಿಗೇ ನನ್ನನ್ನು ಕೊಟ್ಟು ಗಾಣಿಗ್ರಹಣಮಾಡಿಸು. ಸತ್ಯನಿಧಿ, ಒಳ್ಳೇದು, ನೀನು ಅಂತಃಪುರಕ್ಕೆ ಹೋಗು. ಮುಂದಿನ ಯೋಚನೆಗಳನ್ನು ಮಾಡುವೆನು. ಶುಭಾಂಗಿ, ಅಪ್ಪಣೆಯಂತೆ ನಡೆಯುವೆನು. (ಹೋಗುವಳು.] 11