ಈ ಪುಟವನ್ನು ಪ್ರಕಟಿಸಲಾಗಿದೆ

೯೨ / ವಾಗರ್ಥ

ವಿಮರ್ಶಾ ಶಾಸ್ತ್ರಕ್ಕೆ ಇನ್ನೊಂದು ಆಯಾಮವಿದೆ. ಕಲಾಕೃತಿಯ ಸಂಘಟನೆಯನ್ನು, ರಚನೆಯನ್ನು ಅದು ಬಳಸಿರುವ ತಂತ್ರವನ್ನು ಕುರಿತು ಹೇಳುವ ತಾಂತ್ರಿಕ ವಿಮರ್ಶೆಯು ಒಂದು ಮುಖ. ಅದರ ಜೊತೆಗೆ ಕೃತಿಯ ಅಭಿಪ್ರಾಯ, ಆಶಯಗಳೇನು? ಅದು ಹೇಗೆಲ್ಲ ವ್ಯಕ್ತವಾಗಿದೆ? ಅದರ ಸೂಕ್ಷ್ಮಗಳೇನು? ಅಲ್ಲಿ ಏನು ಸೃಜನಶೀಲತೆ ಇದೆ? ಅದು ನಮ್ಮ ಬದುಕಿನ ಕುರಿತು, ಮೌಲ್ಯಗಳ ಕುರಿತು, ತಳೆಯುವ ಧೋರಣೆ ಏನು? ಜೀವನ ಸಿದ್ಧಾಂತವೇನು? ಎಂಬ ಆಶಯ ವಿಮರ್ಶೆ. ಇದೇ ನಿಜವಾದ ವಿಮರ್ಶೆ, ತಾಂತ್ರಿಕ ಸ್ವರೂಪದ ವಿವೇಚನೆಯೆಂಬುದು ಪ್ರಧಾನವಲ್ಲ ಎಂಬ ಅಭಿಪ್ರಾಯವೂ ಉಂಟು.

ಯಕ್ಷಗಾನದ ಸಂದರ್ಭ

ಹೀಗೆ ವಿಮರ್ಶೆಗಿರುವ ವಿಭಿನ್ನ ಮುಖಗಳನ್ನು ಮತ್ತು ತಾತ್ವಿಕ, ಪ್ರಾಯೋಗಿಕ ಅಂಶಗಳನ್ನು ಯಕ್ಷಗಾನದಂತಹ ಒಂದು ಕಲೆಯ, ರಂಗಪ್ರಕಾರದ ಸಂದರ್ಭದಲ್ಲಿ ಪರಿಗಣಿಸಿದಾಗ ವಿಮರ್ಶೆಯ ಅನ್ವಯದ ಬಗೆಗೆ ಕೆಲವು ಮುಖ್ಯ ಪ್ರಶ್ನೆಗಳು ಬರುತ್ತವೆ. ವಿಮರ್ಶೆಯೆಂಬುದು ಸಾರತಃ ಜೀವನಮೀಮಾಂಸೆಯೇ. ಆದರೆ, ಸಾಹಿತ್ಯವಿಮರ್ಶೆ ಯಲ್ಲಿರುವಂತೆ, ವಿಮರ್ಶೆಯ ಸಂಪೂರ್ಣ ಅನ್ವಯವು, ಯಕ್ಷಗಾನಕ್ಕೆ ಇದೆಯೆ? ಎಂಬುದೊಂದು ಪ್ರಶ್ನೆ, ಯಕ್ಷಗಾನದ ತಾಂತ್ರಿಕ ವಿಭಾಗ ಗಳಾದ ವೇಷ, ಗಾನ, ನೃತ್ಯಗಳಿಗೆ ಸಂಬಂಧಿಸಿದ ನಿಯಮಗಳು ವಿಮರ್ಶೆ ಯಲ್ಲಿ ಮುಖ್ಯವೊ? ಅಥವಾ ಕಲಾವಿದರ ಪ್ರತಿಭಾಪೂರ್ಣವಾದ ಪ್ರದರ್ಶನವೊ? ಎಂಬುದು ಇನ್ನೊಂದು ಪ್ರಶ್ನೆ. ಇನ್ನೊಂದು ರೀತಿಯಲ್ಲಿ ಈ ಪ್ರಶ್ನೆಗಳನ್ನು ಕೇಳುವುದಾದರೆ, ಯಕ್ಷಗಾನ ವಿಮರ್ಶೆಯು ಪ್ರಧಾನ ವಾಗಿ ರಸವಿಮರ್ಶೆ ಮತ್ತು ತಾಂತ್ರಿಕ ವಿಮರ್ಶೆಯೋ ಎಂಬುದು. ಅಂದರೆ, ಯಕ್ಷಗಾನದಲ್ಲಿ ನಾವು ನೋಡಬೇಕಾದುದು ವೇಷವಿಧಾನದ ಅಂದ, ಹಾಡು ವಾದ್ಯಗಳ ಪ್ರಾವೀಣ್ಯ, ಮಾತುಗಾರಿಕೆಯ ಸೊಗಸು, ಪ್ರಸಂಗ ಎಷ್ಟು ಸೂಕ್ತವಾಗಿ ಮೂಡಿಬಂತು ಮತ್ತು ರಸಾವಿಷ್ಕಾರ ಎಷ್ಟರಮಟ್ಟಿಗೆ : ಸಫಲವಾಯಿತು ಎಂಬ ಸೀಮಿತ ವಿಷಯಗಳನ್ನು ಮಾತ್ರವೋ? ಅಥವಾ, ವಸ್ತುವಿನ ಆಶಯ, ಅದಕ್ಕೆ ಕಲಾವಿದನು ನೀಡಿರುವ ಹೊಸ ಅರ್ಥ, ಕಥೆಯ ಕಲ್ಪನೆಗಳಲ್ಲಿನ ಔಚಿತ್ಯ ಇವೂ ಮುಖ್ಯವೋ ಎಂಬ ಪ್ರಶ್ನೆ, ಯಕ್ಷಗಾನದ ಪ್ರದರ್ಶನದ ವಸ್ತುವನ್ನೂ, ಅದು ಪ್ರಕಟಪಡಿಸುವ ಆಶಯವನ್ನೂ ಇರುವಂತೆ ಒಪ್ಪಿಕೊಂಡು ಅದು