ಈ ಪುಟವನ್ನು ಪ್ರಕಟಿಸಲಾಗಿದೆ

೧೦೨ | ವಾಗರ್ಥ

ಮಾತ್ರವಲ್ಲ, ಕಲಾರಂಗಕ್ಕೆ ಅದರಿಂದ ಲಾಭವಾಗುವುದಿಲ್ಲ. ವಿಶಾಲ ವಾಗಿರುವ, ಬೇರೆ ಬೇರೆ ಮಟ್ಟಗಳ, ಹೆಚ್ಚಾಗಿ ವಿದ್ಯಾವಂತರಲ್ಲದ, ಬೇರೆ ಬೇರೆ ಪ್ರಭಾವ, ಒತ್ತಡಗಳಿಗೆ ಒಳಗಾಗಿ ಇರುವ, ಕಲಾವಿದನನ್ನು 'ಆದರ್ಶ'ಗಳ ನೆಲೆಯಲ್ಲಿ ಆಕ್ಷೇಪಿಸಿಬಿಡುವುದು ಸೂಕ್ತವಾಗದು. “ಹೀಗಲ್ಲ" ಎಂಬುದಕ್ಕಿಂತಲೂ, "ಹೇಗೆ ಸರಿ” ಎಂಬುದಕ್ಕೆ ಒತ್ತು ಹೆಚ್ಚು ಇರಬೇಕು. ನಯವಾಗಿ ತಿಳಿಹೇಳುವ ಕ್ರಮವೇ ಸರಿಯಾದುದು. ಕಲಾರಂಗದಲ್ಲಿನ ಉತ್ತಮ ಪ್ರವೃತ್ತಿಗಳನ್ನು ಗುರುತಿಸಿ, ಪ್ರೋತ್ಸಾಹಿಸು ವುದು ವಿಮರ್ಶೆಯ ಒಂದು ಮುಖ್ಯ ಕರ್ತವ್ಯವಾಗಿದೆ.

ಇದಕ್ಕೆ ವಿಮರ್ಶಕನು ಕಲೆಯ ಅಂಗೋಪಾಂಗಗಳ ಜ್ಞಾನದೊಂದಿಗೆ, ತಾನು ಆ ಕಲೆಯ ಆಗುಹೋಗುಗಳಲ್ಲಿ ಒಳಗೊಳ್ಳುವ ತನ್ನ ನಿಲುಮೆ ಯನ್ನು ಬಿಡದೆ ಸಹಾನುಭೂತಿ ತಾಳಬಲ್ಲ ಗುಣ ಹೊಂದಿರಬೇಕು. ಸಾಮಾಜಿಕರಿಗೆ, ಕಲಾವಿದರಿಗೆ, ಸಂಘಟಕರಿಗೆ ಆತನು ತನ್ನ ಅಭಿಪ್ರಾಯ ವನ್ನು ಮನದಟ್ಟು ಮಾಡಿಕೊಡುವ, ಒಲಿಸಿ ಹೇಳುವ, ಆದರೆ ನಿರ್ಭೀತಿಯಿಂದ ಹೇಳುವ ಸಾಮರ್ಥ್ಯ ಹೊಂದಿರಬೇಕು. (He should involve himself, he should be sympathetic, fearless, yet convincing).

ಪುನರ್ವ್ಯಾಖ್ಯಾನ - ಪುನಾರಚನೆ - ಪುನಸ್ಸಂಧಾನ

ಸೃಷ್ಟಿಶೀಲ ಕಲೆ ಪಾರಂಪರಿಕವಾಗಿದ್ದೂ, ಪರಂಪರೆಗೆ ಹೊಸ ಕೊಡುಗೆ ನೀಡಬಲ್ಲುದು, ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತ ಗೊಳಿಸಬಲ್ಲುದು. ಇದೇ ಮಾತು ವಿಮರ್ಶೆಗೂ ಅನ್ವಯಿಸುತ್ತದೆ. ವಿಮರ್ಶೆಯು ಸಂಸ್ಕೃತಿಯಲ್ಲೂ, ಸಂಸ್ಕೃತಿಯ ಅಭಿವ್ಯಕ್ತ ರೂಪಗಳಲ್ಲಿ ಪ್ರಮುಖವಾದ ಕಲೆಯಲ್ಲೂ, ಪರಂಪರೆಯ ಪುನರ್ವ್ಯಾಖ್ಯಾನವನ್ನು ಸಾಧಿಸುವ ಗುರಿ ಹೊಂದಿರಬೇಕು. ಹೀಗೆ ಮಾಡುವಾಗ, ತಾನು ಅದರದೇ ಅಂಗವಾಗಿದ್ದು ಮಾಡಬೇಕು. ಹೊರಗಿನಿಂದ ಅಭಿಮತವನ್ನುಪದೇಶಿಸು ವವನಾಗಬಾರದು. ಸಿದ್ಧ ರಚನೆ, ಸಿದ್ಧ ಅರ್ಥಗಳಾಚೆ ತುಡಿಯುವ ಕಲಾಸೃಷ್ಟಿಯನ್ನು ಹುರಿದುಂಬಿಸುವ, ಪ್ರೇರಿಸುವ ಕೆಲಸ ಅವನಿಗುಂಟು.

ಪರಂಪರೆಯಾಗಲಿ, ಸಂಪ್ರದಾಯವಾಗಲಿ ನಿರ್ದೋಷವಲ್ಲ, ಪರಿಪೂರ್ಣವೂ ಅಲ್ಲ. ಮುಗಿದುಹೋದದ್ದಲ್ಲ. ಅದರಲ್ಲಿ ಸಮಸ್ಯೆಗಳು, ಅತಾರ್ಕಿಕತೆಗಳು, ವೈರುಧ್ಯಗಳು, ದುರ್ಬಲ ಸ್ಥಾನಗಳು, ಸಂಕರಗಳು