ಈ ಪುಟವನ್ನು ಪ್ರಕಟಿಸಲಾಗಿದೆ

೧೧೬ / ವಾಗರ್ಥ

ಮೌಲ್ಯಗಳ ಕನಸು ಕಾಣುವ ಯತ್ನಗಳನ್ನು ಹಲವು ಪ್ರಸಂಗಕರ್ತರು ಮಾಡಿದ್ದು, ಇವು ನಮ್ಮ ಮುಂದಿನ ಯುಗಕ್ಕೆ ಹೆಚ್ಚು ಪ್ರಸ್ತುತವಾದ ಯತ್ನಗಳಾಗಿವೆ. ಯಕ್ಷಗಾನರಂಗಕ್ಕೆ ಹೊಂದುವ, ಪೌರಾಣಿಕ ಅಥವಾ ಪೌರಾಣಿಕ ಆವರಣವುಳ್ಳ ಕತೆಯನ್ನು ಆಯ್ದು ಅದನ್ನು ಸೃಷ್ಟಿಶೀಲವಾಗಿ ಅಭಿವ್ಯಕ್ತಿಸುವ ರಚನೆಗಳು ಆಗಿದ್ದು. ಆವುಗಳ ಪರ೦ಪರೆ ಬಲಗೊಂಡರೆ, ಮುಂದಿನ ಶತಮಾನದಲ್ಲಿ ಪ್ರಸಂಗ ರಚನೆಗೆ ಒಳ್ಳೆಯ ಹಿನ್ನೆಲೆ ದೊರಕಿದಂತಾಗುತ್ತದೆ.

ಸಾಂಪ್ರದಾಯಿಕ ಚೌಕಟ್ಟಿನ ವಸ್ತುವನ್ನೇ ಬಳಸಿ, ಅದನ್ನು ನವೀನ ಆಶಯದೊಂದಿಗೆ ಮಂಡಿಸುವ ರೀತಿಯಲ್ಲಿ ಗಂಭೀರವಾದ ಪ್ರಯತ್ನ ಗಳನ್ನು ಕೆಲವರು ಮಾಡಿದ್ದಾರೆ. ಈ ದಾರಿ ಯಕ್ಷಗಾನದಂತಹ ಶೈಲಿಬದ್ಧ ಕಲೆಗೆ ಬಹಳ ಮುಖ್ಯವಾದುದು. ಭಾಸ, ಕಾಳಿದಾಸರು ಮಾಡಿದಂತೆ ಇರುವ ವಸ್ತುವಿನ ನವೀನ ಮಂಡನೆ ಎಷ್ಟು ಸೃಷ್ಟಿಶೀಲವಾಗುವುದು ಎಂಬುದು ಮುಖ್ಯ. ಯಕ್ಷಗಾನಕ್ಕೆ ಇಂತಹ ಭಾಸ ಕಾಳಿದಾಸ ಪರಂಪರೆ ಬೇಕಾಗಿದೆ. ಅದರ ಸಾಧ್ಯತೆಗಳು ಕಾಣಿಸಿಕೊಂಡಿವೆ. 'ಪರಂಪರೆಯ ಪುನರ್ವ್ಯಾಖ್ಯಾನ'ದ ವಿಚಾರದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ೧೯ನೆಯ ಶತಮಾನದಲ್ಲಿ ಕಾಣಿಸಿಕೊಂಡ ಒಲವು-ನಿಲುವುಗಳು ಈಗ ಯಕ್ಷಗಾನ ದಲ್ಲಿ ಕಾಣಸಿಗುತ್ತವೆ- ಎಂದು ವಿಮರ್ಶಕರೊಬ್ಬರು ಗುರುತಿಸಿದ್ದಾರೆ (ಡಾ| ಪುರುಷೋತ್ತಮ ಬಿಳಿಮಲೆ).

ಒಟ್ಟಿನಲ್ಲಿ ನಮ್ಮ ಸಾಹಿತ್ಯ ಮತ್ತು ಕಲಾಪ್ರಕಾರಗಳು ಪೌರಾಣಿಕತೆ ಯಿಂದ, ಮತೀಯತೆಯಿಂದ ದೂರ ಸಾಗುತ್ತ ಹೆಚ್ಚು ಹೆಚ್ಚು ಲೌಕಿಕ, ಇಹ ಜೀವನಪರವಾಗುತ್ತ ಬಂದುದು ಕಾಣುತ್ತದೆ. ಇಡಿಯ ಸಾಹಿತ್ಯ ಕಲಾಚರಿತ್ರೆಯನ್ನು ಈ ದೃಷ್ಟಿಯಿಂದ ನೋಡಬಹುದು. ಈಗ ಬರು ತ್ತಿರುವ ಪೌರಾಣಿಕ ಕಾದಂಬರಿಗಳು, ಕೃಷ್ಣ, ರಾಮರ ಬಗೆಗಿನ ಮಹಾ ಕಾವ್ಯಗಳು 'ಅಲೌಕಿಕ' 'ಪೌರಾಣಿಕ ಪಾತ್ರಗಳನ್ನು ಲೌಕಿಕವಾಗಿ, ಸಾಮಾಜಿಕ ನೆಲೆಯಲ್ಲಿ ಚಿತ್ರಿಸುತ್ತಿವೆ. ಈ ಪ್ರವೃತ್ತಿ ಮುಂದಿನ ಶತಮಾನದ ಯಕ್ಷಗಾನ ಕೃತಿಗಳ ರಚನೆಯಲ್ಲಿ ಹೊಸ ದಾರಿಗಳಿಗೆ ಪ್ರೇರಣೆ ನೀಡಬಹುದು.

ನಮ್ಮ ಸಾಮಾಜಿಕ ರಚನೆ, ರಾಜಕೀಯ ಸ್ಪಂದನ, ಆರ್ಥಿಕ ಜೀವನ- ಇವು ವೇಗವಾಗಿ ಬದಲಾಗುತ್ತಿವೆ. ಭಾರತದಲ್ಲಿ ಸಾಂಪ್ರದಾಯಿಕ ಮೌಲ್ಯ ಮತ್ತು ಆಧುನಿಕ ತಂತ್ರಜ್ಞಾನಾಧಾರಿತ ಜೀವನ ಕ್ರಮಗಳ ನಡುವೆ, ಈಗ