ಈ ಪುಟವನ್ನು ಪ್ರಕಟಿಸಲಾಗಿದೆ

೧೧೮ | ವಾಗರ್ಥ

ಮೌಖಿಕತೆಗೆ, ಜಾನಪದಕ್ಕೆ, ಪರಂಪರೆಗೆ ಗಟ್ಟಿಯಾದ ನೆಲೆ ಇರುವ ಸಂಸ್ಕೃತಿ ನಮ್ಮದು. ಹಾಗಾಗಿ ಯಕ್ಷಗಾನದಂತಹ ಕಲೆ ಅಷ್ಟು ಸುಲಭ ವಾಗಿ ನಾಶವಾಗಲಾರದು. ಅಲ್ಲದೆ ಕೃತಕ, ದಾಖಲಿತ ಮನೋರಂಜನೆ ಏನೇ ಇದ್ದರೂ, ಜೀವಂತ (live) ಕಲೆಗೆ ಸಮಾಜದಲ್ಲಿ ಪ್ರತ್ಯೇಕ ಸ್ಥಾನವಿದೆ.

ಮುಂದಿನ ಶತಮಾನದ ಯಕ್ಷಗಾನ ಪ್ರಸಂಗ ಸಾಹಿತ್ಯವು ಪ್ರೌಢವೂ, ಕಲಾತ್ಮಕವೂ ಆಗಬೇಕಾದರೆ, ಮಾಧ್ಯಮದ ಹಿಡಿತವುಳ್ಳ, ಸಮಗ್ರ ದೃಷ್ಟಿಯುಳ್ಳ ಕವಿಗಳು ಇದಕ್ಕೆ ತಮ್ಮ ಕೊಡುಗೆ ನೀಡಬೇಕು. ಇಂತಹ ಕೆಲಸಕ್ಕೆ ಸೂಕ್ತ ಭೂಮಿಕೆ ಕಲ್ಪಿಸುವ ಒಳ್ಳೆಯ ವಿಮರ್ಶೆ, ಸಂವಾದಗಳು ರೂಪುಗೊಳ್ಳಬೇಕು.






(ಯಕ್ಷವಿಂಶತಿ : ಭಂಡಾರಕಾರ್ಸ್ ಆರ್ಟ್ಸ್ ಎಂಡ್ ಸೈನ್ಸ್ ಕಾಲೇಜು ಕುಂದಾಪುರ ೧೯೯೫)