ಈ ಪುಟವನ್ನು ಪ್ರಕಟಿಸಲಾಗಿದೆ

೧೮ / ವಾಗರ್ಥ

ತಾಳಮದ್ದಳೆಯ ಮಾತುಗಾರಿಕೆ ಹೆಚ್ಚು ಸವಿವರ, ದೀರ್ಘ ಮತ್ತು ಪ್ರೌಢ, ಅಲ್ಲದೆ, ಆಟದ ವೇಷಗಳು, ನೃತ್ಯ, ಚಲನೆ, ರಂಗತಂತ್ರಗಳು ನಿರ್ಮಿಸುವ ಆವರಣ ಮತ್ತು ಬೀರುವ ಮಿತಿಗಳಿಂದಲೂ ಎರಡು ಪ್ರಕಾರಗಳ ಮಾತುಗಾರಿಕೆಯ ಸ್ವರೂಪವು ಭಿನ್ನವಾಗಿರುತ್ತದೆ. ಎರಡೂ ಪ್ರಕಾರಗಳಲ್ಲಿ ಪಾತ್ರವಹಿಸುವ ಕಲಾವಿದರು ಮಾತಾಡುವಾಗಲೂ, ಈ ವ್ಯತ್ಯಾಸದ ಎಚ್ಚರ ಗಮನಕ್ಕೆ ಬರುತ್ತದೆ. ಒಂದು ಉದಾ: 'ವಾಲಿ ಸಂಹಾರ' ಪ್ರಸಂಗದಲ್ಲಿ ಸುಗ್ರೀವನು ಯುದ್ಧಕ್ಕೆ ಕರೆದಾಗ, ವಾಲಿಯು ಪೀಠಿಕೆ ಹೇಳಿ, ಯುದ್ಧಕ್ಕೆ ಬರುವುದು ತಾಳಮದ್ದಳೆಯ ಕ್ರಮವಾದರೆ, ನೇರವಾಗಿ ಯುದ್ಧಕ್ಕೆ ಬಂದು ಸಂವಾದದ ಪದ್ಯವನ್ನು ಎತ್ತುಗಡೆ ಮಾಡುವುದು ಆಟದ ಕ್ರಮ, ತಾಳಮದ್ದಳೆಯ ಮಾತುಗಾರಿಕೆಯು ಸಾಧಿಸಿರುವ ಜಾಣೆ, ಸೂಕ್ಷ್ಮ, ಸಾಹಿತ್ಯಗುಣ, ವಾಙ್ಮಯಗುಣಗಳ ಔನ್ನತ್ಯ ಅಸಾಧಾರಣವಾಗಿದ್ದು, ಕನ್ನಡದ ಶ್ರೇಷ್ಠ ಸಿದ್ಧಿಗಳಲ್ಲಿ ಗಣನೆಗೆ ಅರ್ಹವಾಗಿದೆ.

೧೨

ಯಕ್ಷಗಾನ ಪದ್ಯ- ಅರ್ಥ ಸಂಬಂಧದ ಚಲನಶೀಲ ಆಯಾಮಗಳು (dynamics) ಸಂಕೀರ್ಣವಾದುವು. ಅರ್ಥಧಾರಿಗೆ ಮುಖ್ಯ ಆಧಾರವು ಪ್ರಸಂಗದ ಹಾಡುಗಳು, ಅರ್ಥಾತ್ ಪ್ರಸಂಗಪಾಠ, ಅದಕ್ಕೆ ಹಿನ್ನೆಲೆಯಾಗಿ ಕನ್ನಡದ ಆಕರಕಾವ್ಯ, (ಉದಾ: ಗದುಗುಭಾರತ) ಅದಕ್ಕೆ ಹಿನ್ನೆಲೆಯಾಗಿ ಸಂಸ್ಕೃತ, ಕನ್ನಡ ಕಾವ್ಯಗಳು, ಕಥಾನಕಗಳು ಇವೆ. ರಂಗದ ಪರಂಪರೆ ಇದೆ. ಅವನೊಳಗಿನ ಅಧ್ಯಯನ, ಸಂಸ್ಕಾರ, ಚಿಂತನಗಳು ಒಂದೆಡೆ. ಸಹಕಲಾವಿದರು ಒದಗಿಸುವ ಪ್ರೇರಣೆಗಳು, ಒಡ್ಡುವ ಸವಾಲುಗಳು, ಪ್ರೇಕ್ಷಕನ ನಿರೀಕ್ಷೆ, ಪ್ರತಿಕ್ರಿಯೆಗಳು, ಸಮಕಾಲೀನ ಸಮಾಜ, ವಿದ್ಯಮಾನ ಘಟನೆಗಳು ಮತ್ತೊಂದೆಡೆ, ಇವೆಲ್ಲ ಸೆಳೆತಗಳು, ಆಕರಗಳು ಸೇರಿ ಅವನ ಅರ್ಥಗಾರಿಕೆಯನ್ನು ರೂಪಿಸುತ್ತವೆ. ಪ್ರದರ್ಶನದ ಕಾಲಘಟ್ಟ, ಅವಧಿ, ಪ್ರದರ್ಶನ ಸಂದರ್ಭಗಳೂ ಅದರ ಮೇಲೆ ಪರಿಣಾಮ ಬೀರುತ್ತವೆ. ಇವೆಲ್ಲದರ ಪರಿಣಾಮವಾಗಿ ಅರ್ಥಗಾರಿಕೆಯಲ್ಲಿ ಸಂಯುಕ್ತ ಪಠ್ಯ ನಿರ್ಮಾಣವಾಗುತ್ತದೆ.

ಅರ್ಥಗಾರಿಕೆ, ಅನುವಾದ ಕ್ರಿಯೆಯಲ್ಲ. ಅದು ಪ್ರಸಂಗವನ್ನಾ ಧರಿಸಿದ ಪ್ರತಿಕಾವ್ಯ ಸೃಷ್ಟಿ; ಅದು ಪ್ರಸಂಗದ ಅರ್ಥೈಸುವಿಕೆಯನ್ನಾ ಧರಿಸಿದ ಆಶುನಾಟಕ ರಚನೆ. ಸಮಗ್ರ ಸಂಸ್ಕೃತಿ ಪ್ರವಾಹವೇ ಅಲ್ಲಿ