ಈ ಪುಟವನ್ನು ಪ್ರಕಟಿಸಲಾಗಿದೆ

ತಾಳಮದ್ದಳೆ : ಕೆಲವು ಗ್ರಹಿಕೆಗಳು|೨೯

ಇವಿಷ್ಟರಿಂದ ತಯಾರಾಗುತ್ತ ಹೋಗುವ ವಿನ್ಯಾಸದ ಅಭ್ಯಾಸವು ತಾಳಮದ್ದಳೆಯು ಸಾಧಿಸಿರುವ, ಸಾಧಿಸುತ್ತಿರುವ ಸೃಷ್ಟಿಕ್ರಿಯೆಯ ಈ ಸ್ವಾರಸ್ಯವನ್ನು ವಿಶದಪಡಿಸಿತು. ಮತ್ತು " ಈ ಅಭ್ಯಾಸಕ್ಕೆ ಈ ಮಾಧ್ಯಮದ ಅತ್ಯಂತ ಸೃಷ್ಟಿಶೀಲ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆ ಮಾದರಿಯಾಗಬಲ್ಲುದು.

ತಾಳಮದ್ದಳೆಗೆ ಅನ್ವಯಿಸಿ (ಹಾಗೆಯೇ ಬಯಲಾಟಕ್ಕೂ ಈ ಮಾತು ಅನ್ವಯ) ಎರಡು ಕೌತುಕದ ದ್ವಂದ್ವಗಳನ್ನಿಲ್ಲಿ ಪ್ರಸ್ತಾವಿಸಬಹುದು. ಕಲೆಯೆಂಬುದು . (ಸಾಹಿತ್ಯವೆಂಬುದನ್ನು 'ಕಲೆ'ಯಿಂದ ಹೊರಗಿಟ್ಟು ಹೇಳುವುದಾದರೆ- ಭಾಷೆ ಅಥವಾ ಶಬ್ದ ಪ್ರಪಂಚ ಮುಟ್ಟಲಾರದ್ದನ್ನು ಅಥವಾ ಭಾಷಾ ಮಾಧ್ಯಮ ಮೂಲಕವಾದ ಅಭಿವ್ಯಕ್ತಿ ಗೌಣವಾಗಿರುವು ದನ್ನು ತಲವುವ ಯತ್ನ, ಚಿತ್ರ, ನಾದ, ಶಿಲ್ಪ ಚಲನೆ, ಸಂಕೇತ ಹೀಗೆ ವಿವಿಧ ಉಪಾಧಿಗಳ ಮೂಲಕ, ಆದರೆ, ತಾಳಮದ್ದಳೆ ಎಂಬ- ಕಲೆ- ಶಬ್ದಪ್ರಪಂಚದ ಮೂಲಕವೇ ಶಬ್ದಗಳು ಮುಟ್ಟಲಾರದುದನ್ನು ತಲಪುವ ಯತ್ನ ಮಾಡುತ್ತದೆ. (ಈ ವಿಚಾರವನ್ನು ನನಗೆ ಸೂಚಿಸಿದವರು ವಿಮರ್ಶಕ: ಲಕ್ಷ್ಮೀಶ ತೋಳ್ಳಾಡಿ). ಅಂದರೆ ಭಾಷಾಶಕ್ತಿ, ವಾಕ್‌ಶಕ್ತಿ ಗಳನ್ನು ವಸ್ತುವಿನ ಮೂಲಕ ದುಡಿಸಿ, ಅದು ಕಲೆಯ ಕೆಲಸವನ್ನು ಮಾಡುತ್ತದೆ, ಇಲ್ಲಿ ಗಮನಿಸಬೇಕಾದ ಮಹತ್ವದ ಒಂದು ಅಂಶವೆಂದರೆ- ನಾವು ಉತ್ತಮ ಅರ್ಥಗಾರಿಕೆ ಎಂದು ಕೇಳುಗರಾಗಿ ಗುರುತಿಸುವ ಎಷ್ಟೋ ಅಂಶಗಳು ಲಿಖಿತರೂಪಕ್ಕಿಳಿಸಿದರೆ ಅಷ್ಟು ಸತ್ವಪೂರ್ಣ ಅನಿಸದಿರಬಹುದು.. ಇದಕ್ಕೆ ಕಾರಣ, ವಾಕ್‌ಶಕ್ತಿಯ, ಅಂದರೆ ವಾಚಿಕ ಅಭಿನಯದ ವಿಶಿಷ್ಟ ಸಾಮರ್ಥ್ಯವನ್ನು ಬಳಸಲು ಈ ಪ್ರಕಾರದಲ್ಲಿರುವ ಅವಕಾಶ, ಅದರಲ್ಲೂ ಇಲ್ಲಿನ ಮಾತಿನ ಸಾಹಿತ್ಯ ಅರ್ಥಧಾರಿಯೇ ರೂಪಿಸುವಂತಹದು. ನಾಟಕದ ಮಾತುಗಳಂತೆ, ಮತ್ತೊಬ್ಬನ ಮಾತು ಗಳಿಗೆ ಜೀವತುಂಬುವ ಕೆಲಸ ಇದಲ್ಲ. ಹಾಗಾಗಿ- ಭಾಷೆ, ಭಾವ, ವಿಷಯಗಳು ಸೃಷ್ಟಿಕಾಲದಲ್ಲಿ ಒಂದು ಎರಕವಾಗಿ ಮೂಡಿರುತ್ತವೆ. ಇದು ನೈಜ 'ವಾಗರ್ಥ' ಸಿದ್ಧಿ.

ಇನ್ನೊಂದು ಮುಖ್ಯವಾದ ದ್ವಂದ್ವವೆಂದರೆ, ಪುರಾಣ ಮತ್ತು ತಾರ್ಕಿಕತೆಗಳಿಗೆ ಸಂಬಂಧಿಸಿದ್ದು. ಪುರಾಣದ ಕತಗಳ (ರಾಮಾಯಣ