ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ : ಕೆಲವು ಗ್ರಹಿಕೆಗಳು / ೩೩

ಜಗತ್ತಿಗೆ ತಿಳಿಯದೆ ಹೋದ ವಿರೋಧಾಭಾಸ, ಇವುಗಳನ್ನು ವಿವರಿಸು ತ್ತಾನೆ: 'ಬಹುದಾನಂಗಳಂ ವಿಪ್ರ ಜನಕಿತ್ತು ತನ್ನನ್ನು ಸೂತಪುತ್ರನೆನ್ನುವ ಬ್ರಾಹ್ಮಣರೇ : ತನ್ನಿಂದ ದಾನವನ್ನು ಬಹುವಾಗಿ ಸ್ವೀಕರಿಸುವುದು, 'ಬಹುದಾನ': ಬುದ್ಧಿಯಿಂದ ತನ್ನ ಬದುಕಿನಲ್ಲಿ ಬಂದ ಸಂದರ್ಭಗಳು (ಇಂದ್ರನಿಗೆ ಮಾಡಿದ ಕವಚದಾನ) ಮುಂತಾದವುಗಳ ಪ್ರಸ್ತಾವ, ಕೊನೆಗೆ ಬಹುದಾನ ಎಂಬುದಕ್ಕೆ- ಇನ್ನು ದಾನ ಮಾಡಲಿಕ್ಕಿಲ್ಲ ಎಂಬಂತೆ ಭವಿಷ್ಯದ ಮರಣ ಸೂಚನೆ, ಇಂದ್ರನಿಗೆ ಕವಚದಾನ, ಇಂದ್ರನ ಮಗನಿಗೆ (ಅರ್ಜುನ) ಬಹುಶಃ ಜೀವವನ್ನೆ ಕೊಡಬೇಕಾಗಿ ಬರಬಹುದು- ಹೀಗೆ ತನ್ನ ಪೀಠಿಕೆಯನ್ನು ಬೆಳೆಸುತ್ತಾನ. (ಇದು ಈ ಲೇಖಕನ ಅರ್ಥಗಾರಿಕೆ ಯನ್ನು ಆಧರಿಸಿದೆ). ಮತ್ತೊಬ್ಬ ಕಲಾವಿದ ಬೇರೊಂದು ರೀತಿಯಲ್ಲಿ ಬಳಸಬಹುದು: ಬಳಸಬಹುದು.

ಗದಾಪರ್ವದ ದುರ್ಯೋಧನನ ಒಂದು ಪದ್ಯ : (ಹೆಚ್ಚಾಗಿ ಇದನ್ನೆ ಪ್ರವೇಶದ ಪದ್ಯವಾಗಿ ತೆಗೆದುಕೊಳ್ಳಲಾಗುತ್ತದೆ),

“ಕುರುರಾಯನದನೆಲ್ಲ | ಕಂಡು ಸಂತಾಪದಲಿ
ಮರುಗಿ ತನ್ನಯ ಭಾಗ್ಯವೆನುತ...”

ಇಲ್ಲಿ. 'ಕುರುರಾಯನದನೆಲ್ಲ' ಎಂಬ ಒಂದು ಪದಪ್ರಯೋಗವನ್ನು ಆಧರಿಸಿ ಕೌರವನ 'ಅದು' ಅಂದರೆ ಹಿಂದಿನ ಸಾರ್ವಭೌಮತ್ವ ಮತ್ತು 'ಇದು' ಅಂದರೆ ಆತನ ಇಂದಿನ ಸ್ಥಿತಿ, ಅದಕ್ಕಾಗಿ ಅವನಿಗಾದ ಸಂತಾಪ, ಅಂದರೆ ನೋವಿಗಾಗಿ ಪಶ್ಚಾತ್ತಾಪವಲ್ಲ, ತಾನು ಮೋಸಹೋದೆ ಎಂಬ ಮೊಂಡುತನ ಇವುಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸುವುದು. (ಶೇಣಿ ಗೋಪಾಲಕೃಷ್ಣ ಭಟ್ಟರ ದುರ್ಯೋಧನ),

ಭೀಷ್ಮಪರ್ವದಲ್ಲಿ ದುರ್ಯೋಧನನು ಭೀಷ್ಮರಲ್ಲಿಗೆ ಹೋಗುವ ಸನ್ನಿವೇಶದ ಪದ್ಯ ಹೀಗಿದೆ :

"ಆ ದಿವಸ ರಾತ್ರಿಯಲಿ ಕೌರವ | ನೈದೆ ಭೀಷ್ಮಗೆ ನಮಿಸಿ ನಿಂದಿರ
ಮೇದಿನಿಪ ಬಾರೆನುತಲಪ್ಪಿ ವಿ | ನೋದದಿಂದ|| ”

ಇಲ್ಲಿ ದುರ್ಯೋಧನನಿಗೆ ಭೀಷ್ಮನು ಬಳಸಿದ ಪದ 'ಮೇದಿನಿಪ' ಎಂಬುದು ಇದನ್ನೇ ಆಧರಿಸಿ, ರಾಜನಾಗಲು ಆತನ ಅರ್ಹತೆ, ಅವನ ಹುಟ್ಟು, ರಾಜತ್ವ, ಮುಂದೆಯೂ ಉಳಿಯಬೇಕಾದರ -ಶಾಂತಿಯ ಆವಶ್ಯಕತೆ, ಪಾಂಡವರಿಗೆ ಮೇದಿನಿಪತಿತ್ವವನ್ನು ನಿರಾಕರಿಸುವ ಆತನ