ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ / ೪೩

ಮತ್ತು ಭಾಗಶಃ ಪಾತ್ರ ಮತ್ತು ವ್ಯಕ್ತಿಯ ಅಂತರ ಇಲ್ಲದಾಗುತ್ತದೆ. ಪ್ರಸಂಗದ ಪದ್ಯಗಳಿಗೆ ನೇರವಾಗಿ ವಿರುದ್ಧವಾಗದ ಕ್ರಮದಿಂದ, ಅರ್ಥದಾರಿಯು ಎಷ್ಟೆಷ್ಟೋ ಸಂಗತಿಗಳನ್ನು ತರುತ್ತಾನೆ. ಇದರಿಂದಾಗಿ ಪುರಾಣಕ್ಕೆ ವ್ಯತಿರಿಕ್ತವಾಗಿ, ಅರ್ಥದಾರಿ ಮಾತಾಡಬಹುದೆ?” ಎಂಬಂತಹ ಪ್ರಶ್ನೆಗಳನ್ನು ಅವನು ಎದುರಿಸಬೇಕಾಗುತ್ತದೆ. ಈ ಪ್ರಶ್ನೆಯ ವ್ಯಾಪಕ ಚರ್ಚೆ ಇಲ್ಲಿ ಪ್ರಸ್ತುತವಲ್ಲ. ಆದರೆ, ಪುರಾಣಕ್ಕೆ ವಿರುದ್ಧವಾಗಿ ಮಾತಾಡುವುದು ಎಂದರೇನು ಎಂಬ ಬಗ್ಗೆ ಸರಳವಾಗಿ ತೀರ್ಮಾನಿಸಲು ಸಾಧ್ಯವಿಲ್ಲ.

ವಾಲಿ-ರಾಮರೊಳಗೆ ನಡೆಯುವ ಪ್ರಸಿದ್ಧವಾದ ಚರ್ಚೆಯನ್ನೆ ತಗೆದುಕೊಂಡರೆ, ರಾಮಾಯಣದಲ್ಲಿ ರಾಮ, ವಾಲಿ ಎಂಬ ಎರಡು ಪಾತ್ರಗಳ ಕಲ್ಪನೆಯಲ್ಲಿ ಒಪ್ಪಿಕೊಂಡ ತಾರತಮ್ಯವಿದೆ, ಅಂತರವಿದೆ. “ತಿಳಿದವರನ್ನು, ದೊಡ್ಡವರನ್ನು ನೀನು ಹೀಗೆಲ್ಲ ಆಕ್ಷೇಪಿಸಬಾರದು' ಎಂದು ರಾಮನು ನೇರವಾಗಿಯೇ ಹೇಳುತ್ತಾನೆ. ಎಂದರೆ, ಇಲ್ಲಿ ರಾಮ ಹೇಳಲಿಕ್ಕಿದ್ದವನು, ಜ್ಞಾನಿ, ವಾಲಿ ಅದನ್ನು ಆಕ್ಷೇಪಿಸದೆ ಒಪ್ಪಬೇಕಾ ದವನು. (ರಾಜಾನೋ ವಾನರಶ್ರೇಷ್ಠ ಪ್ರದಾತಾರೋ ನ ಸಂಶಯಃ | ತಾನ್ನ ಹಿಂಸ್ಯಾನ್ನ ಚಾಕ್ರೋಶೇನ್ನಾಕ್ಷಿಪೇತ್ ನಾ ಪ್ರಿಯಂವದೇತ್ - ವಾಲ್ಮೀಕಿ, ಕಿಂಷ್ಕಿoಕಾಂಡ, ೧೮/೪೩) ಅದನ್ನು ವಾಲಿ ಒಪ್ಪುತ್ತಾನೆ ಕೂಡ. (ಪ್ರತಿವಕ್ತುಂ ಪ್ರಕೃಷ್ಟೇಹಿ ನಾಪಕೃಷ್ಟಸ್ತು ಶಕ್ಷುಯಾಮ್- ಅಲ್ಪನು ಮಹಾಪುರುಷನಿಗೆ ಪ್ರತಿಹೇಳಲು ಶಕ್ಯವಿಲ್ಲ! (೧೮/೪೮), ಇಷ್ಟು ಸುಲಭದ ಪೂರ್ವನಿಧೃತ ತಾರತಮ್ಯವಾಗಲಿ, ಒಪ್ಪಿಗೆಯಾಗಲಿ ತಾಳಮದ್ದಳೆ ವೇದಿಕೆಯಲ್ಲಿ ನಿರೀಕ್ಷಿಸಲಾಗದ ವಿಷಯ. ಇಲ್ಲಿ ವಾಲಿಯು ರಾಮನ ಸಮಾನಸ್ಕಂಧನಾಗಿ, ಬಲವಾಗಿ ಆಕ್ಷೇಪಿಸುವನು. ಹೀಗೆ ಪಾತ್ರಗಳ ಸ್ಥಾನದಲ್ಲಿ ಮುಖ್ಯವಾದ ಪರಿವರ್ತನ (status shift) ಆಗುವುದು ಈ ರಂಗದ ದೊಡ್ಡ ಅಂಶವಾಗಿದೆ.

ಇದೇ ರೀತಿಯ ಸ್ಥಿತ್ಯಂತರ, ಸ್ಥಾನಾಂತರವು ಅಮುಖ್ಯವೆನಿಸಿದ್ದ ಪಾತ್ರಗಳ ಅಭಿವ್ಯಕ್ತಿಯಲ್ಲೂ (ಉದಾ: ಗದಾಪರ್ವದ ಧರ್ಮರಾಜ, ಕೃಷ್ಣ ಸಂಧಾನದ ಧರ್ಮರಾಜ) ಸ್ತ್ರೀಪಾತ್ರಗಳ ಚಿತ್ರಣದಲ್ಲೂ ಕಂಡು ಬಂದಿದೆ: : ಸಾಹಿತ್ಯ ಚರಿತ್ರೆಯನ್ನು ಗಮನಿಸಿವಿಶ್ಲೇಷಿಸುವಂತೆ; ಅರ್ಥಗಾರಿಕೆಯ ಚರಿತ್ರೆಯನ್ನು ವಿಶ್ಲೇಷಿಸುವುದು ಸಾಧ್ಯವಾದರೆ ಇಂತಹ