ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳೆನುಡಿ

ಡಾ. ಎಂ. ಪ್ರಭಾಕರ ಜೋಶಿ ಅವರು ನಾಡಿನ ಸಾಂಸ್ಕೃತಿಕ ವಕ್ತಾರರಲ್ಲಿ ಒಬ್ಬರಾಗಿದ್ದಾರೆ. ಬಹುಮುಖ ಪ್ರತಿಭೆಯ, ವೈವಿಧ್ಯಪೂರ್ಣ ಆಸಕ್ತಿಯ ಶ್ರೀಯುತರು, ಪ್ರಾಧ್ಯಾಪಕರಾಗಿ, ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಲೇಖಕರಾಗಿ, ಭಾಷಣಗಾರರಾಗಿ, ಸಂಭಾಷಣ ಪಟುವಾಗಿ, ಚಿಂತಕರಾಗಿ ಆಯಾ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಯಕ್ಷಗಾನದಂಥ ಜೀವಂತ ಕಲೆಯಲ್ಲಿ ಎಳವೆಯಿಂದಲೇ ತಮ್ಮನ್ನು ತೊಡಗಿಸಿಕೊಂಡು, ಅದರೊಂದಿಗೆ ತಾವೂ ಬಳೆದಿದ್ದಾರೆ. ಆ ಕಲೆಯ ಜೀವನಾಡಿಯನ್ನು ಹಿಡಿದಿದ್ದಾರೆ. ಮಿಡಿದಿದ್ದಾರೆ. ಆ ಕಲೆಯ ರಂಗದ ಒಳಗಿನವರಾಗಿಯೂ ಇವರು ಅದರ ವಿಶ್ವರೂಪದರ್ಶನ ಮಾಡಬಲ್ಲರು, ಮಾಡಿಸಬಲ್ಲರು. ಹಾಗೆಯೇ ಕಲೆಯ ಚೌಕಟ್ಟಿನ ಹೊರಗೆ ವಿಮರ್ಶಕನ ನೆಲೆಯಲ್ಲಿ ನಿಂತು ವೈಚಾರಿಕ ನಿರ್ಲಿಪ್ತತೆಯಿಂದಲೂ ಇವರು ಕಲೆಯ ಆಗುಹೋಗುಗಳನ್ನು ವಿಶ್ಲೇಷಿಸಬಲ್ಲರು. ಈ ವಸ್ತುನಿಷ್ಠತೆ ಅವರನ್ನು ಯಕ್ಷಗಾನದ ಶ್ರೇಷ್ಠ ವಿಮರ್ಶಕರನ್ನಾಗಿ ಮಾಡಿದೆ.
ಈ ಮೊದಲಿನ, ತಮ್ಮ ಗ್ರಂಥಗಳಾದ 'ಕೇದಗೆ', 'ಜಾಗರ', “ಮಾರುಮಾಲೆ ', 'ಪ್ರಸ್ತುತ'ಗಳಲ್ಲಿ ಯಕ್ಷಗಾನದ ಹಲವು ಮಗ್ಗುಲುಗಳಿಗೆ ಇವರು ವಿಚಾರದ ಬೆಳಕನ್ನು ಹಾಯಿಸಿದ್ದಾರೆ, ಹೊಸ ಹೊಳಹನ್ನು ನೀಡಿದ್ದಾರೆ. ಇವರ ಪಿಹಚ್.ಡಿ. ಸಂಶೋಧನಾ ಮಹಾಪ್ರಬಂಧ 'ಯಕ್ಷಗಾನ ಕೃಷ್ಣಸಂಧಾನ ಪ್ರಸಂಗ ಮತ್ತು ಪ್ರಯೋಗ' ಪ್ರಕಟವಾದಾಗ ಇವರ ಸಂಶೋಧನ ಸಾಹಸದ ಇನ್ನೊಂದು ಸಮರ್ಥ ಮುಖದ ವಿಶೇಷ ಪರಿಚಯ ವಾಗಬಹುದು. ಇವರ 'ಯಕ್ಷಗಾನ ಪದಕೋಶ' ಈ ಕ್ಷೇತ್ರದ ಅಧ್ಯಯನ ಶೀಲರಿಗೆ ಒಂದು ಅಪೂರ್ವ ಕೈಪಿಡಿ; ಆಕರ ಗ್ರಂಥ.
ಯಾವುದೇ ಕಲೆಯು ಬೆಳೆಯಬೇಕಾದರೆ ಅಥವಾ ಅದರ ಸತ್ವ, ಸ್ವಲ್ಪಗಳು ಉಳಿಯಬೇಕಾದರೆ ಬರೇ ಗತಾನುಗತಿಕತೆ ಸಾಲದು; ಆ ಕ್ಷೇತ್ರದಲ್ಲಿ ಪ್ರಯೋಗ ಶೀಲತೆ ಊರ್ಜಿತವಾಗಿರಬೇಕು; ಅಂತೆಯೇ ಕಲೆಯು ಹೊಲಬು ತಪ್ಪದಂತೆ