ಈ ಪುಟವನ್ನು ಪ್ರಕಟಿಸಲಾಗಿದೆ

೮೪ / ವಾಗರ್ಥ

ಬೇರೊಂದು ಆಕರದಿಂದ ಬಳಸಿಕೊಳ್ಳಬಹುದು. ಕೃಷ್ಣ ಸಂಧಾನ ಪ್ರಸಂಗ ದಲ್ಲಿ ಕೃಷ್ಣನು ಧೃತರಾಷ್ಟ್ರನೊಂದಿಗೆ, ಮಾತಾಡುವ ಸನ್ನಿವೇಶ, ದುರ್ಯೋಧನನು ಮಧ್ಯೆ ಸಭಾತ್ಯಾಗ ಮಾಡುವ ಸನ್ನಿವೇಶಗಳು ಇಲ್ಲ. ವ್ಯಾಸಭಾರತದಲ್ಲಿ ಇವೆ. ಹಾಗಾಗಿ ಅದನ್ನು ಹೊಂದಿಸಿ ಉಲ್ಲೇಖಿಸು ವುದರಿಂದ, ಪ್ರದರ್ಶನಕ್ಕೆ ಪ್ರಯೋಜನವಿರುವುದಾದರೆ, ಅದನ್ನು ಹೇಳಬಹುದು. ಪ್ರಸಂಗವೊಂದು ಕುಮಾರವ್ಯಾಸ ಭಾರತದ ಆಧಾರದಲ್ಲಿ ರಚಿತವಾಗಿದ್ದರೂ, ಅದಕ್ಕೆ ಪೂರಕವಾಗಿ ಪಂಪನಿಂದಲೊ, ಭಾಸ ನಿಂದಲೊ, ಆಧುನಿಕ ಸಂವೇದನೆಯಿಂದಲೋ ತಂದು ಪೋಣಿಸಬಹುದು. ಅಂತಹ ಪೋಣಿಕೆಯನ್ನು ಹೊರುವ ಸಾಮರ್ಥ್ಯ ಪ್ರಸಂಗಕ್ಕೆ, ಆ ಸನ್ನಿವೇಶಕ್ಕೆ ಇರಬೇಕು. ಅದಿಲ್ಲವಾದರೆ, ಹೊಂದಾಣಿಕೆಯಲ್ಲಿ ಬಿರುಕು ಕಾಣಿಸುತ್ತದೆ. 'ಕೃಷ್ಣಾರ್ಜುನ'ದಂತಹ ಪ್ರಸಂಗದ ಉದಾಹರಣೆಯಿಂದ ಇದನ್ನು ನೋಡಬಹುದು. ಕೃಷ್ಣಾರ್ಜುನದ ಕತೆಯ ವ್ಯಾಪ್ತಿಯೇ ಸೀಮಿತ, ಭಾರತದ ಒಟ್ಟು ಕತೆಯು ನಡೆಗೂ, ಮೌಲ್ಯಕ್ಕೂ ಭಿನ್ನ ದಿಕ್ಕಿನಲ್ಲಿ ಈ ಕತೆ ಇದೆ.

ಪಾಂಡವರ-ಕೃಷ್ಣನ ಸಂಬಂಧ ಇಲ್ಲಿ ತಿರುವು-ಮುರುವಾಗಿರುತ್ತದೆ. ಇಂತಹ ಕತೆಯಲ್ಲಿ ಕೃಷ್ಣನು, "ಪಾಂಡವರಾದ ನೀವು ಕಷ್ಟ-ಸುಖಗಳನ್ನು ನನ್ನಲ್ಲಿ ಹಂಚಿಕೊಳ್ಳುವವರು. ನನ್ನ ವೈರಿಯೇ ನಿಮ್ಮ ಆಶ್ರಯ ಪಡೆದಾಗ ಮುಂದೇನು ಎಂದು ನನ್ನಲ್ಲಿ ಸಮಾಲೋಚಿಸಬೇಡವೆ?” ಎಂದು ಕೇಳಿದರೆ, ಆ ಪ್ರಶ್ನೆಯನ್ನು ಹೊರುವ ಸಾಮರ್ಥ್ಯವೇ ಆ ಕತೆಗೆ ಇಲ್ಲ. ಮಹಾಭಾರತದ ಒಟ್ಟು ನೆಲೆಯಲ್ಲಿ ಈ ಪ್ರಶ್ನೆ ಸಮಂಜಸವೆನಿಸಿ ದರೂ ಈ ಪ್ರಸಂಗದಲ್ಲಿ ಅದು ಹೊಂದುವುದಿಲ್ಲ.

ಪ್ರಸಂಗಗಳ ರಚನೆಯ ಆಕರಗಳಿಗೂ, ಅರ್ಥಗಾರಿಕೆಗೂ ನೇರ ಸಂಬಂಧವಿದೆ. ಪ್ರತಿಯೊಂದು ಕಥಾನಕ- ಎಂದರೆ ಒಂದು ಸ್ವತಂತ್ರ ಕತೆ ಅದರ ದೊಡ್ಡ ಕಾವ್ಯವೊಂದರ ಭಾಗ ಯಾ ಉಪಾಖ್ಯಾನವು ಕಾಲಕಾಲಕ್ಕೆ ಬೇರೆ ಬೇರೆ ಅಂಶಗಳನ್ನು ಸೇರಿಸಿಕೊಳ್ಳುತ್ತ ಬೆಳೆಯುವುದಷ್ಟೆ? ಅದರಲ್ಲಿ ಸೇರ್ಪಡೆಯಾಗುವ, ಪರಿವರ್ತಿತವಾಗುವ ಅಂಶಗಳು, ಅದರ ಕರ್ತೃವಿನ, ಕವಿಯ ಹಿನ್ನೆಲೆ, ಆತನು ತರುವ ಬದಲಾವಣೆಗಳ ಉದ್ದೇಶಗಳನ್ನು ಹೊಂದಿಕೊಂಡಿವೆ. ರಾಮ, ಕೃಷ್ಣ, ಕರ್ಣ ಮೊದಲಾದ ವ್ಯಕ್ತಿಗಳ ಸುತ್ತ ಇರುವ ಕತೆಗಳು ಅದೆಷ್ಟೋ ರೂಪಗಳಲ್ಲಿ ಬೆಳೆದಿರುವುದು ಹೀಗೆಯೇ. ಮೂಲ ಆಕರಕ್ಕಿಂತ ಭಿನ್ನವಾಗಿ, ಒಂದು ಕಾವ್ಯ ಯಾ ಪ್ರಸಂಗ ಬೆಳೆದರೆ,