ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮತ್ತು ಶಂಕರರನ್ನು ಸ್ತುತಿಸಿದರು; ಆದರೆ ರತಿಕ್ರೀಡೆಯಲ್ಲಿ ದೇವತೆಗಳು ವ್ಯತ್ಯಯ ವನ್ನುಂಟುಮಾಡಿದ ಕಾರಣ ಉಮೆಗೆ ಕೋಪ ಬಂದಿತು.


           ಸಮನ್ಯುರಶಪತ್ಸರ್ವಾನ್ಕ್ರೋಧಸಂರಕ್ತಲೋಚನಾ |
           ಯಸ್ಮಾನ್ನಿವಾರಿತಾ ಚಾಹಂ ಸಮಗತಾಪುತ್ರಕಾಮ್ಯಯಾ ‖೨೧‖
           ಅಪತ್ಯಂ ಸ್ವೇಷು ದಾರೇಷು ನೋತ್ಪಾದಯಿತುಮರ್ಹಥ |
           ಅದ್ಯಪ್ರಭೃತಿ ಯುಷ್ಮಾಕಮಪ್ರಜಾಃ ಸಂತು ಪತ್ನಯಃ ‖೨೨‖


“ಪುತ್ರಪ್ರಾಪ್ತಿಯ ಅಪೇಕ್ಷೆಯಿಂದ ಪತಿಯನ್ನು ಒಡಗೂಡಿದ ನನ್ನನ್ನು ಸಮಾಗಮದಿಂದ ನಿವೃತ್ತಗೊಳಿಸಿದ್ದೀರಿ; ಕಾರಣ ನಿಮ್ಮ ಸ್ತ್ರೀಯರಿಂದ ನಿಮಗೆ ಸಂತಾನಪ್ರಾಪ್ತಿಯಗಲಾರದು; ನಿಮ್ಮ ಸ್ತ್ರೀಯರು ಬಂಜೆಯರಾಗುವರು.”
ಉಮೆಯ ಈ ಶಾಪದಿಂದ ದೇವತೆಗಳೆಲ್ಲರೂ ದುಃಖಿತರಾದರು.

೧೦. ಉಮಾ < ಪೃಥ್ವಿ

ಬಾಲಕಾಂಡ/೩೬

ವಿಶ್ವಾಮಿತ್ರನು ಉಮೆಯ ಕಥೆಯನ್ನು ರಾಮನಿಗೆ ಹೇಳುತ್ತಾನೆ.
ಶಾಪ-ಉಮಾ < ದೇವತೆಗಳು, ಶಾಪ ಕ್ರಮಾಂಕ ೯ ನೋಡಿರಿ.
ದೇವತೆಗಳ ತೋರಿಕೆಯ ಮೇರೆಗೆ ಪೃಥ್ವಿಯು ಶಂಕರನ ತೇಜಸ್ಸನ್ನು ಧರಿಸಿದಳು. ಆಗ ಉಮೆ ಮತ್ತು ಶಂಕರ ಇವರ ರತಿಕ್ರೀಡೆಯಲ್ಲಿ ಅಡ್ಡಿ ಉಂಟಾದ ಕಾರಣ, ಈ ರೀತಿ ಸಮಸ್ತ ದೇವತೆಗಳನ್ನು ಶಪಿಸಿ ಪೃಥ್ವಿಯನ್ನೂ ಈ ರೀತಿ ಶಪಿಸಿದಳು:


           ಏವಮುಕ್ತ್ವಾ ಸುರಾನ್ಸರ್ವಾನ್ಯಶಾಪ ಪೃಥಿವೀಮಪಿ |
           ಅವನೇ ನೈಕರೂಪಾ ತ್ವಂ ಬಹುಭಾರ್ಯಾ ಭವಿಷ್ಯಸಿ ‖೨೩‖
           ನ ಚ ಪುತ್ರಕೃತಾಂ ಪ್ರೀತಿಂ ಮತ್ಕ್ರೋಧಕಲುಷೀಕೃತಾ ‖
           ಪ್ರಾಪ್ಸ್ಯಸಿತ್ವಂ ಸುದುರ್ಮೇಧೇ ಮಮ ಪುತ್ರಮನಿಚ್ಛತೀ ‖೨೪‖


“ಹೇ ಪೃಥ್ವಿಯೇ! ನಿನ್ನ ಸ್ವರೂಪವು ಯಾವಾಗಲೂ ಒಂದೇ ಇರಲಾರದು. ನೀನು ಬಹುಜನರ ಪತ್ನಿಯಾಗುವೆ; ಎಲೈ ದುರ್ಮತಿಯೇ< ನನಗೆ ಪುತ್ರಪ್ರಾಪ್ತಿಯಗಬಾರದೆಂದು ನೀನು ಯಾವ ರೀತಿ ಬಯಸಿದೆಯೋ ಅದೇ ರೀತಿ ನನ್ನ ಕ್ರೋಧದಿಂದ ಕಲುಷಿತಳಾದ ನಿನಗೆ ಪುತ್ರಸುಖವು ದೊರೆಯಲಾರದು.”