ಈ ಪುಟವನ್ನು ಪ್ರಕಟಿಸಲಾಗಿದೆ

೧೨೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ದವರಿಗೆ ಯಜ್ಞದ ಆಹ್ವಾನವನ್ನು ಕಳುಹಿಸಿದನು. ನನ್ನ ಆಹ್ವಾನದ ಬಗ್ಗೆ ಯಾರು ಯಾವ ರೀತಿ ಮಾತನಾಡುವರೋ, ಅದು ನಿಂದೆಯೇ ಇರಲಿ, ಸತುತಿಯೇ ಇರಲಿ ಇದ್ದಹಾಗೆ ತನಗೆ ವಿವರಿಸಬೇಕೆಂದು ಆಜ್ಞಾಪಿಸಿದನು. ವಿಶ್ವಾಮಿತ್ರನ ಆಹ್ವಾನದನುಸಾರ ಅನೇಕ ಬ್ರಹ್ಮಜ್ಞರು ಯಜ್ಞಕ್ಕೆ ಆಗಮಿಸಿದರು. ಮಹೋದಯಾದಿ ವಸಿಷ್ಠಪುತ್ರರು ಮಾತ್ರ ಬರಲಿಲ್ಲ. ವಸಿಷ್ಠಪುತ್ರರು ಆಡಿದ ಮಾತುಗಳನ್ನು ವಿಶ್ವಾಮಿತ್ರರ ಶಿಷ್ಯಂದಿರು ಅದೇ ರೀತಿಯಲ್ಲಿ ತಿಳಿಸಿದರು: “ಚಾಂಡಾಲನ ಯಜ್ಞದ ಯಾಜಕನು ಕ್ಷತ್ರಿಯನಿದ್ದ ಕಾರಣ, ದೇವತೆಗಳು ಮತ್ತು ಋಷಿಗಳು ಹವಿರ್ಭಾಗವನ್ನು ಹೇಗೆ ತಾನೆ ಗ್ರಹಿಸಬಲ್ಲರು? ವಿಶ್ವಾಮಿತ್ರನು ರಕ್ಷಕನಾಗಿದ್ದರೂ ಚಾಂಡಾಲನ ಅನ್ನವನ್ನು ಭಕ್ಷಿಸಿ ಮಹಾತ್ಮರಾದ ಬ್ರಾಹ್ಮಣರು ಹೇಗೆ ಸ್ವರ್ಗಕ್ಕೆ ಹೋಗಬಹುದು?” ಎಂಬ ನುಡಿಗಳನ್ನು ಕೇಳಿ ವಿಶ್ವಾಮಿತ್ರನು ಕೋಪದ ಕೆಂಡವಾದನು. ಈ ರೀತಿ ಉದ್ಗರಿಸಿದನು-


          ಯದ್ ದೂಷಯಂತ್ಯದುಷ್ಟಂ ಮಾಂ ತಪ ಉಗ್ರಂ ಸಮಾಸ್ಥಿತಮ್ ‖೧೭‖
          ಭಸ್ಮೀಭೂತಾ ದುರಾತ್ಮಾನೋ ಭವಿಷ್ಯಂತಿ ನ ಸಂಶಯಃ |
          ಅದ್ಯ ತೇ ಕಾಲಪಾಶಶೇನ ನೀತಾ ವೈವಸ್ವತಕ್ಷಯಮ್ ‖೧೮‖
          ಸಪ್ತಜಾತಿಶತಾನ್ಯೇವ ಮೃತಪಾಃ ಸಂಭವಂತು ತೇ |
          ಶ್ವಮಾಂಸನಿಯತಾಹಾರಾ ಮುಷ್ಟಿಕಾ ನಾಮ ನಿರ್ಘೃಣಾಃ ‖೧೯‖
          ವಿಕೃತಾಶ್ವ ವಿರೂಪಾಶ್ವ ಲೋಕಾನನುಚರಂತ್ವಿಮಾನ್ |
          ಮಹೋದಯಶ್ಚ ದುರ್ಬುದ್ದಿರ್ಮಾಮದೂಷ್ಯಂ ಹ್ಯದೂಷಯತ್ ‖೨೦‖
          ದೂಷಿತಃ ಸರ್ವಲೋಕೇಷು ನಿಷಾದತ್ವಂ ಗಮಿಷ್ಯತಿ |
          ಪ್ರಾಣಾತಿಪಾತನಿರತೋ ನಿರನುಕ್ರೋಶತಾಂ ಗತಃ ‖೨೧‖
          ದೀರ್ಘಕಾಲಂ ಮಮ ಕ್ರೋಧಾದ್ ದುರ್ಗತಿಂ ವರ್ತಯಿಷ್ಯತಿ ‖೨೨‖


“ಉಗ್ರತಪಸ್ಸನ್ನು ಆಚರಿಸುವ ನನ್ನಂಥ ದೋಷರಹಿತ ಮುನಿಯನ್ನು ಇವರು ದೂಷಿಸುತ್ತಿದ್ದಾರೆ; ಆದ್ದರಿಂದ, ಈ ದುರಾತ್ಮರು ಸುಟ್ಟು ಬೂದಿಯಾಗಲಿ! ಕಾಲ ಪಾಶದಿಂದ ಅವರು ಯಮಲೋಕಕ್ಕೆ ಹೋಗಲಿ! ಮೃತರಾದವರನ್ನು ಭಕ್ಷಿಸಿ ಬಾಳಲಿ! ಏಳು ನೂರು ಜನಗಳನ್ನು ಈ ಪರಿಯಾಗಿ ಕಳೆಯಲಿ! ನಾಯಿಯ ಮಾಂಸವೇ ಅವರ ಮುಖ್ಯ ಆಹಾರವಾಗಲಿ! ಕ್ರೂರ, ಅಕರಾಳವಿಕರಾಳ ಚಾಂಡಾಲರಾಗಿ ಅವರು ಈ ಲೋಕದಲ್ಲಿ ಸಂಚರಿಸಲಿ! ನಾನು ದೂಷಣಾರ್ಹ ನಿರದಿದ್ದರೂ ದುರ್ಬುದ್ಧಿಗಳಾದ ಇವರು ನನ್ನನ್ನು ನಿಂದಿಸಿದ್ದಾರೆ. ಮಹೋದಯನು