ಈ ಪುಟವನ್ನು ಪ್ರಕಟಿಸಲಾಗಿದೆ

೧೩೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಕೊಂದಿರುವೆ; ಆದ್ದರಿಂದ ನಾನು ನಿನಗೆ ಅತಿದುಃಖಕಾರಕ, ಭಯಂಕರವಾದ ಶಾಪವನ್ನು ಕೊಡುತ್ತೇನೆ.”


       ಪುತ್ರವ್ಯಸನಜಂ ದುಃಖಂ ಯದೇತನ್ಮಮ ಸಾಂಪ್ರತಮ್ |
       ಏವಂ ತ್ವಂ ಪುತ್ರಶೋಕೇನ ರಾಜನ್ ಕಲಂ ಕರಿಷ್ಯತಿ ǁ೫೪ǁ
       ಅಜ್ಞಾನಾತ್ತು ಹತೋ ಯಸ್ಮಾತ್ ಕ್ಷತ್ರಿಯೇಣ ತ್ವಯಾಮುನಿಃ |
       ತಸ್ಮಾತ್ತ್ವಾಂ ನಾವಿಶತ್ಯಾಶು ಬ್ರಹ್ಮಹತ್ತ್ಯಾ ನರಾಧಿಷ ǁ೫೫ǁ
       ತ್ವಾಮಪ್ಯೇತಾದೃಶೋ ಭಾವಃ ಕ್ಷಿಪ್ರಮೇವ ಗಮಿಷ್ಯತಿ |
       ಜೀವಿತಾಂತಕರೋ ಘೋರೋ ದಾತಾರಮಿವ ದಕ್ಷಿಣಾಮ್ ǁ೫೬ǁ
       ಏವಂ ಶಾಪಂ ಮಯಿ ನ್ಯಸ್ಯ ವಿಲಪ್ಯ ಕರುಣಂ ಬಹು |
       ಚಿತಾಮಾರೋಪ್ಯ ದೇಹಂ ತನ್ಮಿಥುನಂ ಸ್ವರ್ಗಮಭ್ಯಯಾತ್ ǁ೫೭ǁ


“ನನಗೆ ಸದ್ಯದಲ್ಲಿ ಯವ ರೀತಿ ಪುತ್ರಮರಣದಿಂದ ದುಃಖವಾಗಿದೆಯೋ ಅದೇ ರೀತಿ ಪುತ್ರಶೋಕದಿಂದ ನಿನಗೆ ಮರಣವುಂಟಾಗುವದು. ಕ್ಷತ್ರಿಯನಾದ ನೀನು ನನ್ನ ಪುತ್ರನ ವಧೆಯನ್ನು ಅಜ್ಞಾನದಿಂದ ಮಾಡಿರುವೆ; ಕಾರಣ ಎಲೈ ಪ್ರಜಾಧಿಪತಿಯೇ, ನಿನಗೆ ಬ್ರಹ್ಮಹತ್ಯೆಗೆ ಸಮಾನವಾದ ಪಾತಕವು ಅಂಟಲಾರದು. ಒಮ್ಮೆ ಕೊಟ್ಟ ದಕ್ಷಿಣೆಯ ಫಲವು ದಾತೃವಿಗೆ ಪರಲೋಕದಲ್ಲಿ ಪುನೈ ಪ್ರಾಪ್ತವಾಗುತ್ತದೆ. ಅದೇ ರೀತಿಯಾಗಿ, ಪ್ರಾಣನಾಶಕವಾದ ಘೋರ ಅವಸ್ಥೆಯು ನಿನಗೆ ಇದ್ದಕ್ಕಿದ್ದ ಹಾಗೆ ಬಂದೊದಗುವದು.” ಈ ರೀತಿ, ಕರುಣಸ್ವರದಿಂದ ಪ್ರಲಾಪಿಸಿ ಆ ತಾಯಿ- ತಂದೆಯರು ದಶರಥನಿಗೆ ಶಾಪವನ್ನಿತ್ತರು. ಚಿತೆಯನ್ನೇರಿ ಆ ದಂಪತಿಗಳು ಸ್ವರ್ಗಕ್ಕೆ ಹೋದರು.
ದಶರಥನು ಅಜ್ಞಾನದಿಂದ ಶ್ರಾವಣನ ವಧೆ ಮಾಡಿದ್ದರಿಂದ ಶಾಪದ ಸ್ವರೂಪವು ಸೌಮ್ಯವಾಗಿದೆ. ಈ ವಧೆಯು ಬುದ್ಧಿಪೂರ್ವಕವಾಗಿ ನಡೆದಿದ್ದರೆ ಶಾಪವು ಎಷ್ಟೊಂದು ಘೋರವಾಗಬಹುದಿತ್ತೆಂಬುದರ ಸ್ಪಷ್ಟ ಕಲ್ಪನೆಯನ್ನು ಕೊಡಲಾಗಿದೆ.

೨೩. ಭರತ < ಕೈಕೇಯಿ

ಅಯೋಧ್ಯಾಕಾಂಡ/೭೪

ಭರತನು ಕೈಕೇಯಿಯನ್ನು ಧಿಕ್ಕರಿಸುತ್ತಿದ್ದಾನೆ.
ಕೈಕೇಯಿಯು, ದಶರಥನಿಂದ ವರಗಳನ್ನು ಪಡೆದು ರಾಮನನ್ನು ಕಾಡಿಗೆ ಕಳುಹಿಸಿದಳು. ಪುತ್ರವಿಯೋಗವನ್ನು ಸಹಿಸಲಾರದೆ ದಶರಥನು ಮರಣ