ಈ ಪುಟವನ್ನು ಪ್ರಕಟಿಸಲಾಗಿದೆ

೧೩೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


('ಭ್ರೂಣಹತ್ಯೆ' ಶಬ್ದದ ಬದಲಾಗಿ ರಂಗನಾಥ ಶರ್ಮಾರವರ ಕನ್ನಡ ಅನುವಾದ, ಕಾಶೀನಾಥ ಶಾಸ್ತ್ರೀ ಲೇಲೆಯವರ ಮರಾಠಿ ಅನುವಾದದಲ್ಲಿ 'ಬ್ರಹ್ಮಹತ್ಯೆ' ಎಂಬ ಶಬ್ದವನ್ನು ಬಳಸಿದ್ದಾರೆ.)

೨೪. ವೈಶ್ರವಣ < ತುಂಬರೂ (ವಿರಾಧ)

ಅರಣ್ಯಕಾಂಡ/೪

ವಿರಾಧನು ತನ್ನ ಪೂರ್ವವೃತ್ತಾಂತವನ್ನು ತಾನು ಸಾಯುವ ಮೊದಲು ರಾಮನಿಗೆ ಹೇಳುತ್ತಾನೆ:
ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದ ರಾಮಲಕ್ಷ್ಮಣಸೀತೆಯರನ್ನು ಕಂಡು ಪರ್ವತದಷ್ಟು ಮಹಾಕಾಯನಾದ ವಿರಾಧ ರಾಕ್ಷಸನು, ಭಯಂಕರವಾಗಿ ಗರ್ಜಿಸುತ್ತ ರಾಮನ ಮೈಮೇಲೆ ಧಾವಿಸಿದನು. ಉನ್ಮತ್ತನಾದ ಆತನು ಈ ರೀತಿ ಅಂದನು: “ಋಷಿಗಳ ಮಾಂಸವನ್ನು ಭಕ್ಷಿಸಿ ನಾನು ಈ ಭೀಕರವಾದ ಕಾನನದಲ್ಲಿ ವಾಸಿಸಿರುವೆನು. ವಿವಾಹವಾಗಲು ಯೋಗ್ಯಳಾದ ಈ ನಾರಿಯು- ಸೀತೆಯು. ನನ್ನ ಭಾರ್ಯೆಯಾಗುವಳು. ಯುದ್ದದಲ್ಲಿ ನಾನು ನಿಮ್ಮಿಬ್ಬರ ನೆತ್ತರನ್ನು ಕುಡಿಯುವೆ.” ಹೀಗೆಂದು ಸೀತೆಯನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡನು. ಆಗ ರಾಮನಿಗೆ ಅತಿಶಯ ವ್ಯಥೆಯಾಯಿತು. ಲಕ್ಷ್ಮಣನ ಸಿಟ್ಟು ನೆತ್ತಿಗೇರಿತು. ಆದರೆ, ವಿರಾಧನಿಗೆ ಬ್ರಹ್ಮದೇವನ ವರವಿತ್ತು. ವಿರಾಧ ಯಾರಿಂದಲೂ ಗಾಯಗೊಳ್ಳು ವಂತಿರಲಿಲ್ಲ, ಸಾಯುವಂತಿರಲಿಲ್ಲ, ಸೋಲುವಂತಿರಲಿಲ್ಲ; ಆದ್ದರಿಂದ ವಿರಾಧನನ್ನು ಕೊಲ್ಲುವದು ರಾಮಲಕ್ಷ್ಮಣರಿಗೆ ಕಠಿಣವಿತ್ತು. ರಾಮಲಕ್ಷ್ಮಣರನ್ನು ವಿಚಾರಿಸಿ ಸೀತೆಯ ಸಹಿತವಾಗಿ ಅವರಿಬ್ಬರನ್ನೂ ವಿರಾಧನು ಬಿಟ್ಟುಕೊಟ್ಟನು. ಆದರೂ ಪರಸ್ತ್ರೀಯನ್ನು ಸ್ಪರ್ಶಿಸಿದ ವಿರಾಧರಾಕ್ಷಸನಿಗೆ ಶಿಕ್ಷೆಯಾಗಲೇಬೇಕೆಂದು ರಾಮನಿಗೆ ಎನಿಸಿತು. ರಾಮನು ಯುದ್ದಕ್ಕೆ ಅಣಿಯಾದುದನ್ನು ಕಂಡು ವಿರಾಧನು ಅಪಹಾಸ್ಯ ಮಾಡಿ ಮಾತನಾಡಲಾರಂಭಿಸಿದನು. ಸೀತೆಯ ಕಣ್ಣು ಮುಂದೆಯೇ ರಾಮ ಲಕ್ಷ್ಮಣರನ್ನು ಹೆಗಲ ಮೇಲೆ ಕೂಡಿಸಿಕೊಂಡು ಓಡತೊಡಗಿದನು. ಭಯಗೊಂಡ ಸೀತೆಯು ಆಕ್ರೋಶಿಸಿದಳು. ಆಗ ರಾಮಲಕ್ಷ್ಮಣರು ರಾಕ್ಷಸನ ಎರಡು ಭುಜಗಳನ್ನು ತುಂಡರಿಸಿದರು; ಆದರೆ ವಿರಾಧನನ್ನು ಕೊಲ್ಲುವದು ಅವರಿಂದಾಗಲಿಲ್ಲ. ಆಗ ವಿರಾಧನನ್ನು ಸಾಕಷ್ಟು ಒದೆತ ಗುದ್ದು ಕೊಟ್ಟು ಒಂದು ಗುಂಡಿಯಲ್ಲಿ ಹೂತು ಬಿಡಬೇಕೆಂದು ನಿಶ್ಚಯಿಸಿದರು. ಒಂದು ಪ್ರಚಂಡ ಆನೆಯನ್ನು ಹೂಳುವಷ್ಟು ದೊಡ್ಡ ಗುಂಡಿಯನ್ನು ತೋಡಬೇಕೆಂದು ಲಕ್ಷ್ಮಣನಿಗೆ ರಾಮನು