ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೩೯


         ಕಾಮಂ ತಪಃಪ್ರಭಾವೇಣ ಶಕ್ತಾ ಹಂತುಂ ನಿಶಾಚರಾನ್ ॥೧೩॥
         ಚಿರಾರ್ಜಿತಂ ನ ಚೇಚ್ಛಾಮಸ್ತಪಃ ಖಂಡಯಿತುಂ ವಯಮ್ |
         ಬಹುವಿಘ್ನೋಂ ತಪೋ ನಿತ್ಯಂ ದುಶ್ಚರಂ ಚೈವ ರಾಘವ ॥೧೪॥
         ತೇನ ಶಾಪಂ ನ ಮುಂಚಾಮೋ ಭಕ್ಷ್ಯಮಾಣಾಶ್ಚ ರಾಕ್ಷಸೈಃ ॥೧೫॥


“ತಪೋಬಲದಿಂದ ಆ ರಾಕ್ಷಸರನ್ನು ವಧಿಸಲು ಸಮರ್ಥರಾಗಿದ್ದೇವೆ; ಆದರೆ ಬಹಳ ಕಾಲಾವಧಿಯಿಂದ ಗಳಿಸಿದ ತಪಃಸಿದ್ದಿಯನ್ನು ವ್ಯಯಗೊಳಿಸುವ ಇಚ್ಛೆ ನಮಗಿಲ್ಲ. ಆದ್ದರಿಂದ ಹೇ ರಾಘವನೇ, ನಮ್ಮ ತಪಸ್ಸಿನಲ್ಲಿ ಅನೇಕ ವಿಘ್ನ ಗಳುಂಟಾಗುತ್ತಿವೆ; ತಪಸ್ಸನ್ನಾಚರಿಸುವದು ದುಸ್ತರವಾಗಿದೆ. ರಾಕ್ಷಸರು ನಮ್ಮನ್ನು ತಿಂದುಹಾಕಿದರೂ ನಾವು ಅವರನ್ನು ಶಪಿಸುವುದಿಲ್ಲ” ಎಂದು ಮುನಿಗಳ ಹೇಳಿಕೆಯಾಗಿದೆ.
ರಾಮನು ಮುನಿಗಳ ರಕ್ಷಣೆಯನ್ನು ಪ್ರತಿಜ್ಞೆಯನ್ನು ಮಾಡಿದ್ದನು. ಮತ್ತು ಸೀತೆಗೆ ಇದನ್ನೆಲ್ಲ ವಿವರಿಸಿದನು.
ಪ್ರತ್ಯಕ್ಷದಲ್ಲಿ ಶಾಪವನ್ನು ಕೊಟ್ಟಿಲ್ಲ. ಶಾಪವನ್ನು ಕೊಡುವ ಸಾಮರ್ಥ್ಯವಿದ್ದರೂ ಅದನ್ನು ತಡೆಹಿಡಿಯಲಾಗಿದೆ. ಶಾಪದ ಸ್ವರೂಪವು ಸ್ಪಷ್ಟವಾಗಿಲ್ಲ.


೨೬. (ಯತಿಯ ವೇಷ ಧರಿಸಿದ) ರಾವಣ < ಸೀತೆ

ಅರಣ್ಯಕಾಂಡ/೪೭

ಸೀತೆಯ ಆಸೆಯನ್ನು ಪೂರೈಸಲೆಂದು ಸುವರ್ಣಮೃಗವನ್ನು ಹುಡುಕುತ್ತ ರಾಮನು ಅರಣ್ಯದಲ್ಲಿ ಹೊಕ್ಕನು; ಹೊರಡುವ ಮೊದಲು ಸೀತೆಯ ರಕ್ಷಣೆಯನ್ನು ಮಾಡಲು ಲಕ್ಷ್ಮಣನಿಗೆ ಹೇಳಿದನು. ಯಾವ ಪರಿಸ್ಥಿತಿಯಲ್ಲಿಯೂ ಅವಳನ್ನು ಒಂಟಿಯಾಗಿ ಬಿಡಬಾರದೆಂದು ಆಜ್ಞಾಪಿಸಿದನು. ಮಾರೀಚನು, ರಾಮನ ಧ್ವನಿಯಂತೆ ಕೂಗಿ ಸೀತೆಯ ಮನಸ್ಸಿನಲ್ಲಿ ಗೊಂದಲವನ್ನುಂಟುಮಾಡಿದನು. ಸೀತೆಯು, ಲಕ್ಷ್ಮಣನಿಗೆ ಕೂಡಲೇ ರಾಮನನ್ನು ಹುಡುಕಲು ಹೋಗಬೇಕೆಂದು ಹೇಳಿದಳು. ಯಾವುದೇ ಸಂಕಟವನ್ನು ಎದುರಿಸುವ ಸಾಮರ್ಥ್ಯವು ರಾಮನಲ್ಲಿರುವುದರಿಂದ ಅವನ ಕ್ಷೇಮದ ಬಗ್ಗೆ ಯೋಚಿಸುವದು ಬೇಡ ಎಂದು ಲಕ್ಷ್ಮಣನು ಪರಿಪರಿಯಾಗಿ ಹೇಳಿದರೂ ಸೀತೆಗೆ ಸಮಾಧಾನವಾಗಲಿಲ್ಲ. ಅವಳು ಕೋಪಗೊಂಡು ಲಕ್ಷ್ಮಣನಿಗೆ ವಿಪರೀತವಾಗಿ ಬೈದಳು. ಆತನ ಚಾರಿತ್ರ್ಯದ ಬಗ್ಗೆ ಸಂಶಯ ಪಟ್ಟಳು. ಸೀತೆಯ ಮಾತಿನಿಂದ ಲಕ್ಷ್ಮಣನಿಗೆ ವ್ಯಥೆಯಾಯಿತು. ರಾಮನ ಆಜ್ಞೆಯನ್ನು