ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೫೧


ಹನುಮಂತನ ಕ್ರೋಧದಿಂದ ಮತ್ತು ಬಲದಿಂದ ಪೀಡಿತವಾದ ಅ ಲಂಕಾ ನಗರವು ಅಗ್ನಿಜ್ವಾಲೆಗಳಿಂದ ಮುಸುಕಿಹೋಯಿತು. ಯೋಧರೆಲ್ಲರೂ ಚೆಲ್ಲಾಪಿಲ್ಲಿಯಾದರು. ಲಂಕಾನಗರವು ಶಾಪದಗ್ಧವಾದಂತೆ ಕಂಡಿತು.
'ಶಾಪೋಪಹತ'ವೆಂದು ಲಂಕೆಯ ಉಲ್ಲೇಖವು ರಾಮಾಯಣದಲ್ಲಿ ಬಂದಿದ್ದರೂ, ಅದಕ್ಕೆ ಯಾರು ಶಾಪ ಕೊಟ್ಟರು? ಏಕೆ ಕೊಟ್ಟರು? ಎಂಬ ಸಂಗತಿಗಳು ಸ್ಪಷ್ಟವಾಗಿಲ್ಲ. ಶಾಪಮುಕ್ತಿಯ ಸಮಯವು ನಿರ್ಧರಿತವಿದ್ದರೂ ಶಾಪದ ಸ್ವರೂಪವು ಏನಿತ್ತೆಂಬುದು ಸ್ಪಷ್ಟವಗಿಲ್ಲ.

೩೫. ಬ್ರಹ್ಮದೇವನು < ರಾವಣ

ಯುದ್ಧಕಾಂಡ/ ೧೩

ರಾವಣನು ತನ್ನ ಜೀವನದಲ್ಲಿಯ ಒಂದು ಅತಿಗೌಪ್ಯವಿದ್ದ ಘಟನೆಯನ್ನು ಮಹಾಪಾರ್ಶ್ವನ ಮುಂದೆ ಹೇಳುತ್ತಾನೆ:
ಸೀತೆಯನ್ನು ಅಪಹರಿಸಿ ತಂದನಂತರ ಆಕೆಯನ್ನು ಭದ್ರವಾದ ಕಾವಲಿನಲ್ಲಿ ಇಡಲಾಗಿತ್ತು. ಸೀತೆಯ ವಿಷಯದಲ್ಲಿ ರಾವಣನು ಕಾಮಾತುರನಾಗಿ ಪೀಡಿತನಾಗಿದ್ದನು. ಆಗ ಆತನು ರಾಜಸಭಿಕರನ್ನು ಕರೆದು ತನ್ನ ಮನೋಗತವನ್ನು ಪ್ರಕಟಿಸಿದನು. ಆಗ ಆತನ ನಿಷ್ಠೆಯಲ್ಲಿದ್ದವರು ಆತನ ಇಚ್ಛೆಗೆ ತಲೆದೂಗಿದರು. ರಾಮನನ್ನು ವಧಿಸಿ, ಸೀತೆಯು ಸದಾವಕಾಲವೂ ರಾವಣನ ಭೋಗಕ್ಕೆ ದೊರಕುವಂತೆ ಮಾಡುವ ಪ್ರತಿಜ್ಞೆಯನ್ನು ಕುಂಭಕರ್ಣನು ಮಾಡಿದನು. ಒಬ್ಬ ಮಂತ್ರಿಯಾದ ಮಹಾಪಾರ್ಶ್ವನೆಂಬಾತನು, ರಾವಣನು ಸೀತೆಯನ್ನು ಬಲಾತ್ಕರಿಸಬೇಕೆಂದು ಪ್ರೋತ್ಸಾಹಿಸಿದನು. ಆ ಸಂದರ್ಭದಲ್ಲಿ ರಾವಣನು ಆತನಿಗೆ ಈ ರೀತಿ ಹೇಳಿದನು: 'ಹಿಂದೊಮ್ಮೆ ಗಗನದಲ್ಲಿಯ ಅಗ್ನಿಜ್ವಾಲೆಯಂತಿದ್ದ ಪುಂಜಿಕಸ್ಥಲೆ ಎಂಬ ಅಪ್ಸರೆಯು ನನ್ನ ಭೀತಿಯಿಂದ ಮರೆಮರೆಯಾಗಿ, ಬ್ರಹ್ಮದೇವನ ಸ್ಥಾನಕ್ಕೆ ಹೋಗುತ್ತಿರುವದನ್ನು ನಾನು ಕಂಡೆನು; ಕೂಡಲೇ ನಾನು ಅವಳನ್ನು ಬಲಾತ್ಕಾರದಿಂದ ಭೋಗಿಸಿ ವಸ್ತ್ರಹೀನಳನ್ನಾಗಿ ಮಾಡಿಬಿಟ್ಟೆನು. ಆಗ ಕಮಲಿನಿಯಂತೆ ಕಂಪಿಸುತ್ತ ಅವಳು ಬ್ರಹ್ಮಲೋಕಕ್ಕೆ ಹೋದಳು. ನನ್ನ ಕೃತ್ಯವು ಬ್ರಹ್ಮನಿಗೆ ತಿಳಿದಾಗ ಆತನು ಸಿಟ್ಟಿನಿಮದ ಈ ರೀತಿ ನುಡಿದನು-


            ಅದ್ಯಪ್ರಭೃತಿ ಯಾಮನ್ಯಾಂ ಬಲಾನ್ನಾರೀಂ ಗಮಿಷ್ಯಸಿ |
            ತದಾ ತೇ ಶತಧಾ ಮೂರ್ಧಾ ಫಲಿಷ್ಯತಿ ನ ಸಂಶಯಃ ‖೧೪‖