ಈ ಪುಟವನ್ನು ಪ್ರಕಟಿಸಲಾಗಿದೆ



ಶಾಪವಾಣಿ

೧೬೩


ಯುದ್ಧಕಾಂಡ/೬೦

ರಾಮನ ಬಾಣಗಳಿಂದ ತ್ರಸ್ತನಾದ ರಾವಣನಿಗೆ ಹಿಂದೆ ಪಡೆದ ಶಾಪಗಳ
ಸ್ಮರಣೆಯಾಯಿತು. 'ನಂದೀಶ್ವರನು ಕೊಟ್ಟ ಶಾಪದ ಸ್ಮರಣೆಯೂ ಆಯಿತು'
ಎಂಬ ಉಲ್ಲೇಖವು ಕೆಳಗಿನ ಶ್ಲೋಕದಲ್ಲಿದೆ.
ಉಮಾ ನಂದೀಶ್ವರಶ್ಚಾಪಿ ರಂಭಾ ವರುಣಕನ್ಯಕಾ‖|೧೧‖
ಯಥೋಕ್ತಾಸ್ತನ್ಮಯಾ ಪ್ರಾಪ್ತಂ ನ ಮಿಥ್ಯಾ ಋಷಿಭಾಷಿತಮ್ ‖೧೨‖

ಪೂರ್ವದಲ್ಲಿ ಉಮೆಯು, ನಂದಿಕೇಶ್ವರನು, ರಂಭೆಯು ಮತ್ತು ವರುಣ
ಕನ್ಯೆಯರು ರಾವಣನಿಗೆ ಶಾಪವನ್ನು ಕೊಟ್ಟ ಉಲ್ಲೇಖವಿದೆ.

೪೩. ವೇದವತಿ < ರಾವಣ

ಉತ್ತರಕಾಂಡ/೧೭

ವೇದವತಿಯು ರಾವಣನ ಸಂದರ್ಭದಲ್ಲಿ ಮಾಡಿದ ಪ್ರತಿಜ್ಞೆಯ ವೃತ್ತಾಂತವನ್ನು
ಅಗಸ್ತ್ಯಮುನಿಯು ರಾಮನಿಗೆ ನಿರೂಪಿಸುದ್ದಾನೆ:
ಹಿಮಾಲಯದ ಅರಣ್ಯದಲ್ಲಿ ರಾವಣನು ಸುತ್ತುತ್ತಿದ್ದಾಗ, ತಪಸ್ಸಿನಲ್ಲಿ
ತೊಡಗಿದ ಬಹಳ ಚೆಲುವೆಯಾದ ತರುಣಿಯನ್ನು ಕಂಡನು. ಆಕೆಯನ್ನು ನೋಡಿ
ಕಾಮ ಮೋಹಿತನಾದನು; ಅವಳ ರೂಪಯೌವನಗಳನ್ನು ಬಣ್ಣಿಸಿ ಅವಳನ್ನು
ತಪಸ್ಸಿನಿಂದ ಪರಾವೃತ್ತಗೊಳಿಸಲು ಯತ್ನಿಸಿದನು. ಕುಶಲಪ್ರಶ್ನೆಗಳನ್ನು ಕೇಳಿದ
ರಾವಣನಿಗೆ ಅವಳು ಯಥೋಚಿತ ಆದರಾತಿಥ್ಯಗಳನ್ನು ಸಲ್ಲಿಸಿದಳು. ಅವಳ
ಪಿತನು ಆಕೆಯನ್ನು ವಿಷ್ಣುವಿಗೆ ಅರ್ಪಿಸುವವನಿದ್ದನು; ಆಗ 'ಶಂಭು' ಎಂಬ
ದೈತ್ಯನು ಕೋಪಗೊಂಡು ಇವಳ ತಂದೆಯನ್ನು ಕೊಂದು ಹಾಕಿದನು. ಈಕೆಯ
ತಾಯಿಯು ಸತ್ತುಹೋದಳು. ತಂದೆಯ ಮನೋರಥವನ್ನು ಪೂರ್ಣಗೊಳಿಸಲು
ತಪಸ್ಸನ್ನಾಚರಿಸುತ್ತಿರುವೆನೆಂದು ಹೇಳಿದಳು. ಇದನ್ನು ಕೇಳಿ ರಾವಣನು
ವಿಷ್ಣುವಿನ ಬಗ್ಗೆ ತುಚ್ಛವಾಗಿ ಮಾತನಾಢಿದನು ಮತ್ತು ಈ ತರುಣಿಗೆ ತನ್ನ
ಭಾರ್ಯೆಯಾಗಲು ವಿನಂತಿಸಿದನು. ವಿಷ್ಣುವನ್ನು ತುಚ್ಛೀಕರಿಸಿ ಮಾತನಾಡುವ
ರಾವಣನನ್ನು ಅವಳು ನಿಂದಿಸಿದಳು. ಆಗ ರಾವಣನು ಅವಳ ಜಡೆ ಹಿಡಿದು
ಎಳೆದನು. ವೇದವತಿಯು ತನ್ನ ಕೈಯಿಂದ ತನ್ನ ಕೂದಲನ್ನು ತಾನೇ ಕಿತ್ತುಹಾಕಿ
ಬಿಡಿಸಿಕೊಂಡಳು. ಸಿಟ್ಟಿನಿಂದ ಬೆಂಕಿಯಂತೆ ಸುಡುವ ಶಬ್ದಗಳಲ್ಲಿ “ಎಲೈ ದುಷ್ಟನೇ!
ನೀನು ನನ್ನನ್ನು ಎಳೆದಾಡಿ ಅವಮಾನಿಸಿರುವೆ; ಆದ್ದರಿಂದ ಇನ್ನು ನನಗೆ