ಈ ಪುಟವನ್ನು ಪ್ರಕಟಿಸಲಾಗಿದೆ

೧೮೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಯೋನಿಯ ಅವಸ್ಥೆಯು ನನಗೆ ಒದಗಿದೆ. ಆದಕಾರಣ ಕೋಪಿಷ್ಠನಾದೆ,
ಧರ್ಮವನ್ನು ತ್ಯಜಿಸಿದೆ, ಪ್ರಾಣಿಗಳ ಅಹಿತವನ್ನು ಕೋರುವ ಆ ವಿಪ್ರನಿಗೆ ಅಂಥ
ಅವಸ್ಥೆಯೇ ಬರಲಿ! ಕೋಪಿಷ್ಠ ನಾದವನು, ದುಷ್ಟನಾದವನು, ನಿರ್ದಯನು,
ವಿದ್ಯೆಯಿಲ್ಲದವನು, ಅಧಾರ್ಮಿಕ ಪುರುಷನು, ತನ್ನ ಹಿಂದಿನ ಮತ್ತು ನಂತರದ
ಏಳು ಪೀಳಿಗೆಗಳನ್ನು ನರಕಕ್ಕೆ ತಳ್ಳುತ್ತಾನೆ. ಯಾವ ಅವಸ್ಥೆ ಬಂದರೂ ಕುಲಪತಿಯ
ಅಧಿಕಾರವನ್ನು ಸ್ವೀಕರಿಸ ಬಾರದು. ಪುತ್ರ, ಪಶು ಮತ್ತು ಬಾಂಧವರ ಸಮೇತ
ನರಕವನ್ನು ಸೇರಲಿಚ್ಛಿಸು ವವರಿಗೆ, ದೇವತೆಗಳ, ಹಸುಗಳ ಮತ್ತು ಬ್ರಾಹ್ಮಣರ
ಸೇವಾಧಿ ಕಾರಿಯಾಗಿ ನೇಮಿಸಬೇಕು. ಬ್ರಾಹ್ಮಣರಿಗೆ, ದೇವರಿಗೆ, ಸ್ತ್ರೀಯರಿಗೆ
ಮತ್ತು ಬಾಲಕರಿಗೆ ಕೊಟ್ಟ ದ್ರವ್ಯವನ್ನು ಯಾರು ಅಪಹರಿಸುತ್ತಾರೋ ಅಂಥ
ಪುರುಷನು 'ವೀಚಿಸಂಜ್ಞಕ' ಎಂಬ ಘೋರ ನರಕದಲ್ಲಿ ಬೀಳುತ್ತಾನೆ. ಇಷ್ಟೇ
ಅಲ್ಲದೇ ದೇವರ ಮತ್ತು ಬ್ರಾಹ್ಮಣರ ಹಣವನ್ನು ಅಪಹರಿಸುವ ವಿಚಾರವನ್ನು
ಮನಸ್ಸಿನಲ್ಲಿ ತಂದ ನರಾಧಮನು ಒಂದರ ನಂತರ ಇನ್ನೊಂದು ನರಕದಲ್ಲಿ
ಬಿದ್ದಿರುತ್ತಾನೆ.”
ವರವಾಗಿ ಕಾಣುವ ಈ ಶಾಪವು ಬೇರೆ ರೀತಿಯದಾಗಿದೆ.

೫೬. ಗೌತಮ < ಬ್ರಹ್ಮದತ್ತ

ಉತ್ತರಕಾಂಡ/ಪ್ರಕ್ಷಿಪ್ತ೩/೫೯-೬೦

ಒಂದು ದುರ್ಬುದ್ದಿಯ ರಣಹದ್ದು ಒಂದು ಗೂಬೆಯ ಮನೆಯನ್ನು ಹೊಕ್ಕು
ಅದು ತನ್ನದೇ ಎಂದು ಜಗಳ ಕಾಯ್ದಿತು. ಈ ಎರಡು ಪಕ್ಷಿಗಳು ಒಂದನ್ನೊಂದು
ದ್ವೇಷಿಸಹತ್ತಿದವು. ಮನೆಯ ಒಡೆತನದ ತೀರ್ಮಾನವನ್ನು ಜಗತ್ತಿನ ರಾಜನಾದ
ರಾಮನಿಂದ ಪಡೆಯಬೇಕೆಂದು ಆ ಎರಡೂ ಪಕ್ಷಿಗಳು ಒಮ್ಮತಕ್ಕೆ ಬಂದವು.
ಅವು ರಾಮನನ್ನು ಅದನ್ನು ಕೇಳಿಕೊಂಡನು. ವಿಚಾರವಿನಿಮಯ ನಡೆಯಿಸಿ ಆ
ಮನೆಯು ಗೂಬೆಯದು ಎಂಬ ತೀರ್ಪನ್ನಿತ್ತನು. ಗೂಬೆಯ ಮನೆಯನ್ನು
ರಣಹದ್ದು ಅಪಹರಿಸಿತ್ತೆಂಬದು ನಿಖರವಾದ್ದರಿಂದ ಆ ರಣಹದ್ದಿಗೆ ಶಾಸನವಾಗ
ಬೇಕೆಂದು ನಿಶ್ಚಿತವಾಯಿತು. ಆಗ 'ಆಕಾಶವಾಣಿ'ಯಾಯಿತು: “ಹೇ ರಾಮನೇ,
ತಪೋಬಲದಿಂದ ಪೂರ್ವದಲ್ಲಿ ದಗ್ಧವಾದ ಈ ರಣಹದ್ದನ್ನು ನೀನು ವಧಿಸಬೇಡ!
ಕಾಲರೂಪ ಗೌತಮ ಮುನಿಯು ಇದನ್ನು ದಹಿಸಿರುವನು. ಈ ರಣಹದ್ದು,
ಪೂರ್ವದಲ್ಲಿ ಬ್ರಹ್ಮದತ್ತನೆಂಬ ಹೆಸರಿನಿಂದ ಖ್ಯಾತನೂ, ಶೂರನೂ, ಸತ್ಯನಿಷ್ಠನೂ,
ಶುಚಿರ್ಭೂತನೂ ಆದ ರಾಜನಾಗಿದ್ದನು. ಒಮ್ಮೆ ಈ ರಾಜನ ಮನೆಗೆ ಒಬ್ಬ