ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಪಥ, ಸತ್ಯಕ್ರಿಯೆ 4 . ೧. ಶಪಥ : ರಾಮ < ಲಕ್ಷಣ ಅರಣ್ಯಕಾಂಡ ಖರನೆಂಬ ರಾಕ್ಷಸನ ಸೈನ್ಯದೊಡನೆ ತುಮುಲಯುದ್ಧವು ನಡೆದಾಗ ಖರನು ರಾಮನ ಆಶ್ರಮದತ್ತ ಸಾಗಿಬರುತ್ತಿದ್ದನು. ಆಗ ರಾಮನಿಗೆ, ಪ್ರಜೆಗಳಿಗೆ ಅನಿಷ್ಟ ಕರವಾದ ಅನೇಕ ಉತ್ಪಾತಗಳು ಕಂಡುಬಂದಿದ್ದರಿಂದ ಆತನು ಬಹಳ ಖಿನ್ನನಾಗಿದ್ದನು. ಆಗಸದಲ್ಲಿ ರಕ್ತದ ಸುರಿಮಳೆಗರೆಯುವ ಧೂಸರ ಬಣ್ಣದ ಮೋಡಗಳು ನೆರೆದಿದ್ದವು. ಕೆಲವು ಶುಭಶಕುನಗಳು ವಿಜಯವನ್ನು ಸೂಚಿಸುತ್ತಿದ್ದರೂ, ಆಗಬಹುದಾದ ಅನರ್ಥವನ್ನು ತಪ್ಪಿಸಲು ರಾಮನು, ಲಕ್ಷ್ಮಣನಿಗೆ ಧನುಷ್ಯ ಬಾಣಗಳನ್ನು ಎತ್ತಿಕೊಂಡು, ಸೀತೆಯನ್ನು ಕರೆದುಕೊಂಡು, ದಟ್ಟಮರಗಳಲ್ಲಡಗಿದ ಪರ್ವತದಲ್ಲಿಯ ಗುಪ್ತವಾದ ಗುಹೆಗೆ ಹೋಗಿ ಅವಿತುಕೊಳ್ಳಲು ಹೇಳಿದನು. ಈ ಆಜ್ಞೆಯನ್ನು ಲಕ್ಷ್ಮಣನು ಚಾಚೂ ತಪ್ಪದೇ ಪಾಲಿಸಬೇಖೆಂದು ಹೇಳುವಾಗ ರಾಮನು ಹೀಗೆಂದನು- ಪ್ರತಿಕೂಲಿತುಮಿಚ್ಛಾಮಿ ನ ಹಿ ವಾಕ್ಯಮಿದಂ ತ್ವಯಾ | ಶಾಪಿತೋ ಮಮ ಪಾದಾಭ್ಯಾಂ ಗಮ್ಯತಾಂ ವತ್ನ ಮಾ ಚಿರಮ್ |೧೩|| “ನನ್ನ ಹೇಳಿಕೆಗೆ ನೀನು ಪ್ರತಿಕೂಲನಾಗಿರುವದು ನನಗೆ ಇಷ್ಟವಿಲ್ಲ; ವತ್ರನೇ, ನನಗೆ ನನ್ನ ಪಾದದ ಶಪಥವಿದೆ: ನೀನು ಸೀತೆಯನ್ನು ಕರೆದುಕೊಂಡು ಹೋಗು; ತಡಮಾಡಬೇಡ?” ಈ ಎಲ್ಲ ರಾಕ್ಷಸರನ್ನು ವಧಿಸಲು ಲಕ್ಷ್ಮಣನು ಶಕ್ತನಿದ್ದ ಸಂಗತಿಯು ರಾಮನಿಗೆ ಗೊತ್ತಿದ್ದರೂ, ರಾಮನು ಈ ಕಾರ್ಯವನ್ನು ತಾನೇ ಸ್ವತಃ ಕೈಕೊಂಡನು. ಲಕ ಣನಿಗೆ ಮಾತನಾಡಲು ಯಾವ ಅವಸರವ ೨. ಶಪಥ: ಸೀತಾ < ಅಗ್ನಿ ಸುಂದರಕಾಂಡ/೫೩ ಸಭೆಯಲ್ಲಿ ಕರೆತರಲಾದ ಹನುಮಂತನನ್ನು ಕಂಡು ರಾವಣನು ಅಳುಕಿದನು. ಪೂರ್ವದಲ್ಲಿ ನಂದಿಕೇಶ್ವರನು ಕೊಟ್ಟ ಶಾಪದ ಸ್ಮರಣೆ ರಾವಣನಿಗಾಯಿತು. ಹನುಮಂತನನ್ನು ವಧಿಸಬೇಕೆಂದು ಯೋಚಿಸಿದನು. ಆಗ ಹನುಮಂತನು ತಾನು