ಈ ಪುಟವನ್ನು ಪರಿಶೀಲಿಸಲಾಗಿದೆ

೨೦೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಕುಮಾರರಿಗೆ ಸಂಭಾವನಾ ದ್ರವ್ಯವನ್ನು ಮತ್ತು ಅವರಿಗೆ ಇಷ್ಟವಿದ್ದುದನ್ನು ಕೊಡಲು ರಾಮನು ಅಪ್ಪಣೆ ಕೊಟ್ಟನು. ಆ ಕುಮಾರರು ಅದು ಯಾವದನ್ನೂ ಸ್ವೀಕರಿಸಲು ನಿರಾಕರಿಸಿದರು.
ಈ ಕಾವ್ಯವನ್ನು ಯಾರಿಂದ ಪಡೆದಿರುವಿರಿ? ಈ ಕವಿಯು ಯಾರು? ಈ ಕವಿಯ ನಿವಾಸಸ್ಥಾನದಲ್ಲಿದೆ? ಕಾವ್ಯಶ್ಲೋಕಗಳ ಸಂಖ್ಯೆ ಎಷ್ಟು? ಎಂದು ಮುಂತಾಗಿ ರಾಮನು ಕೇಳಿದ ಪ್ರಶ್ನೆಗಳಿಗೆ ಈ ಕುಮಾರರು-
"ಈ ಕಾವ್ಯದಲ್ಲಿ ನಿನ್ನ ಚರಿತ್ರೆಯನ್ನು ಸಂಪೂರ್ಣವಾಗಿ ರೂಪಿಸಲಾಗಿದೆ. ಈ ಕಾವ್ಯವನ್ನು ರಚಿಸಿದ ಕವಿಗಳೆಂದರೆ ಭಗವಾನ್ ವಾಲ್ಮೀಕಿ ಮುನಿಗಳು; ಅವರು ಸಾಂಪ್ರತ ಯಜ್ಞಭೂಮಿಗೆ ಬಂದಿದ್ದಾರೆ. ಈ ಕಾವ್ಯಖಂಡದಲ್ಲಿ ಉತ್ತರ ಕಾಂಡವನ್ನೊಳಗೊಂಡು ಏಳು ಕಾಂಡಗಳು, ಐದುನೂರು ಸರ್ಗಗಳು, ಇಪ್ಪತ್ತು ನಾಲ್ಕು ಸಹಸ್ರ ಶ್ಲೋಕಗಳು ರಚಿತವಾಗಿವೆ. ಇದು ಪೂರ್ಣ ರಾಮಚರಿತ್ರೆಯಾಗಿದೆ” ಎಂದು ತಿಳಿಸಿದರು. ಅದನ್ನು ಕೇಳುವ ಇಚ್ಛೆಯನ್ನು ರಾಮನು ಪ್ರಕಟಿಸಿದಾಗ ಅವರು ಸಂಪೂರ್ಣ ರಾಮಾಯಣವನ್ನು ಹಾಡಿ ತೋರಿಸಿದರು. ಈ ಲವ-ಕುಶರು ಸೀತೆಯ ಪುತ್ರರು ಎಂದು ತಿಳಿದಬಂದ ನಂತರ, ರಾಮನು ವಾಲ್ಮೀಕಿಮುನಿಗಳಿಗೆ ಸೇವಕರಿಂದ ಸಂದೇಶವನ್ನು ಕಳುಹಿಸಿದನು.

ಯದಿ ಶುದ್ಧಸಮಾಚಾರಾ ಯದಿ ವಾ ವೀತಕಲ್ಮಷಾ |
ಕರೋತ್ವಿಹಾತ್ಮನಃ ಶುದ್ಧಿ ಮನುಮಾನ್ಯ ಮಹಾಮುನಿಮ್ ॥೪॥


“ಸೀತೆಯ ಆಚರಣೆಯು ಮೂಲತಃ ಶುದ್ಧವಾಗಿದ್ದರೆ ಅಥವಾ ಆಶ್ರಮದಲ್ಲಿ ವಾಸ ಮಾಡಿದ್ದರಿಂದ ದೋಷರಹಿತಳಾಗಿದ್ದರೆ, ಮಹರ್ಷಿಗಳ ಅನುಜ್ಞೆಯನ್ನು ಪಡೆದು ಅವಳು ತನ್ನ ಪಾವಿತ್ರ್ಯದ ಬಗ್ಗೆ ಇಲ್ಲಿ ಶಪಥ ಮಾಡಬೇಕು!”
ವಾಲ್ಮೀಕಿ ಮುನಿಗಳ ಮತ್ತು ಸೀತೆಯ ಅಭಿಪ್ರಾಯಗಳನ್ನು ಅರಿತುಕೊಂಡ ನಂತರ ರಾಮನು ಮತ್ತೆ ಹೇಳಿಕಳುಹಿಸಿದನು:

ಶ್ವಃ ಪ್ರಭಾತೇ ತು ಶಪಥಂ ಮೈಥಿಲೀ ಜನಕಾತ್ಮಜಾ |
ಕರೋತು ಪರಿಷನ್ಮಧ್ಯೇ ಶೋಧನಾರ್ಥಂ ಮಮೈವ ಚ ǁ೬ǁ


“ನಾಳೆಯ ಬೆಳಿಗ್ಗೆ ಜನಕನ ಕನ್ಯೆಯಾದ ಮೈಥಿಲಿಯು ಸಭೆಗೆ ಬಂದು ನನ್ನ ಮತ್ತು ನನ್ನ ಮೇಲೆ ಬಂದ ಆಪಾದನೆಯನ್ನು ದೂರಮಾಡಲು ಶಪಥ ಮಾಡಬೇಕು!” ಈ ಶಪಥವನ್ನು ಕೇಳಲು ಗುರುಜನರು, ರಾಜರುಗಳು, ಶಿಷ್ಯಂದಿರ