ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೩. ಮುನಿಗಳು < ಕುಶ-ಲವ ಬಾಲಕಾಂಡ/೪ ಒಮ್ಮೆ ಸಕಲಗುಣಸಂಪನ್ನರಾದ, ಭಾಗ್ಯವಂತರಾದ ಕುಶ-ಲವರು ಋಷಿಗಳ ಸಭೆಯಲ್ಲಿ ರಾಮಾಯಣ ಕಾವ್ಯವನ್ನು ಹಾಡಲು ಉಪಕ್ರಮಿಸಿದಾಗ ಶೋತೃಗಳ ನೇತ್ರಗಳು ಬಾಷ್ಪಭರಿತವಾದವು. ಎಲ್ಲರೂ ಆ ಬಾಲಕರನ್ನು ಬಲು ಅಕ್ಕರೆಯಿಂದ ಶ್ಲಾಘಿಸಿದರು. ತಮ್ಮ ಹತ್ತಿರ ಇದ್ದುದನ್ನು ಅವರಿಗೆ ಕೊಟ್ಟರು. ಯಾರ ಬಳಿ ಕೊಡಲು ಯಾವ ಸಂಗತಿಯೂ ಇರದವರು ಬಾಯಿತುಂಬ ಆಶೀರ್ವದಿಸಿದರು. ಈ ಬಾಲಕರಿಗೆ ದಿರ್ಘಾಯುಸ್ಸನ್ನು ಕೋರಿದರು. ದದುಶ್ಚಿಮ ವರಾನ್ಸರ್ವೇ ಮುನಯ: ಸತ್ಯವಾದಿನಃ ೨೬|| ಯಾರ ಮಾತು ಎಂದಿಗೂ ಸುಳ್ಳಾಗುವುದಿಲ್ಲವೋ ಅಂಥ ಮುನಿಗಳೆಲ್ಲರೂ ವರಗಳನ್ನು ಕೊಟ್ಟರು. ಈ ವರಗಳು ಯಾವವು? ಅವುಗಳ ಸ್ವರೂಪ ಯಾವದು? ಎಷ್ಟು ವರಗಳನ್ನು ಕೊಟ್ಟರು? ಎಂಬುದು ನಿಶ್ಚಿತವಿಲ್ಲ. ಇವು `ಅಯಾಚಿತ” ವರಗಳಾಗಿವೆ. ೪. ಬ್ರಹ್ಮದೇವ < ರಾವಣ ಬಾಲಕಾಂಡ/೧೫ ದಶರಥನ ಬಿನ್ನಹವನ್ನು ಮನ್ನಿಸಿ ಋಷ್ಯಶೃಂಗಮುನಿಯು ಪುತ್ರಪ್ರಾಪ್ತಿಯ ಸಾಧನವಾಗುವ ಇಷ್ಟಿಯನ್ನು (ಯಾಗ) ಆರಂಭಿಸಿದನು. ಅಗ್ನಿಯಲ್ಲಿ ಮಂತ್ರ ಸಹಿತವಾಗಿ ಹವನ ಮಾಡಿದನು. ಹವ್ಯವನ್ನು ಯಥಾವಿಧಿಯಾಗಿ ಪ್ರತಿಗ್ರಹಿಸಲು ದೇವತೆಗಳು, ಗಂಧರ್ವರು, ಸಿದ್ದರು, ಮಹರ್ಷಿಗಳು ಅಲ್ಲಿ ಸೇರಿದರು. ತನ್ನ ಆಂತರಿಕ ಶಕ್ತಿಯಿಂದ ಬ್ರಹ್ಮನು ಯಾರ ಕಣ್ಣಿಗೂ ಗೋಚರನಾಗದೇ ಆ ಯಜ್ಞ ಮಂಟಪದಲ್ಲಿ ಉಪಸ್ಥಿತನಾಗಿದ್ದನು. ಅಲ್ಲಿ ಸೇರಿದವರೆಲ್ಲರೂ ಬ್ರಹ್ಮನಿಗೆ ಈ ರೀತಿ ವಿನಯಪೂರ್ವಕವಾಗಿ ಬೇಡಿಕೊಂಡರು. - “ಹೇ ಭಗವಾನ್, ನಿಮ್ಮ ಕೃಪಾಪ್ರಸಾದದಿಂದ ಉನ್ಮತ್ತನಾದ ರಾವಣನೆಂಬ ರಾಕ್ಷಸನು ತನ್ನ ಬಲದಿಂದ ನಮ್ಮನ್ನೆಲ್ಲ ಪೀಡಿಸುತ್ತಿದ್ದಾನೆ. ತ್ವಯಾ ತಸ್ಯೆ ನೋ ದತ್ತ: ಪ್ರೀತೇನ ಭಗಮಸ್ತದಾ || ಮಾನಯಂತಶ್ಚ ತು ನಿತ್ಯಂ ಸರ್ವಂ ತಸ್ಯ ಉಮಾಮಹೇ ||೭||