ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವರದಾನ

೨೩೫


ಹೀಗೆಂದು ಮರುತ ರಾಜನು ಯುದ್ಧಕ್ಕೆ ಸಿದ್ಧನಾದನು. ಆಗ ಪುರೋಹಿತನಾದ ಸಂವರ್ತನು ಆತನನ್ನು ಪರಾವೃತ್ತಗೊಳಿಸಿದನು; ಏಕೆಂದರೆ ಯಜ್ಞದೀಕ್ಷೆಯನ್ನು ಸ್ವೀಕರಿಸಿದವನಿಗೆ ಯುದ್ದದ ಅಧಿಕಾರ ಉಳಿಯುವದಿಲ್ಲ. ಗುರುವಿನ ಆಜ್ಞೆಯನ್ನು ಮನ್ನಿಸಿ ಆ ಮರುತರಾಜನು ಧನುಸ್ಸನ್ನು ಬಿಚ್ಚಿಹಾಕಿದನು.

ಬ್ರಹ್ಮದೇವ ಉತ್ತರಕಾಂಡ೨೨ ಧರ್ಮರಾಜ ಯಮ ಮತ್ತು ರಾವಣ ಇವರಲ್ಲಿ ಯುದ್ಧ ನಡೆದಾಗ ರಾಕ್ಷಸನನ್ನು ನಿರ್ಮೂಲಗೊಳಿಸಲು ಯಮನು ಅಮೋಘವಾದ ಕಾಲದಂಡವನ್ನು ಎತ್ತಿಕೊಂಡನು. ಕೇವಲ ದೃಷಿಕ್ಷೇಪದಿಂದ ಪ್ರಾಣಾಪಹರಣವನ್ನು ಮಾಡುವ ಶಕ್ತಿಯು ಆ ಕಾಲದಂಡದಲ್ಲಿತ್ತು. ಅಂತಹ ಕಾಲದಂಡದಿಂದ ರಾವಣನನ್ನು ದಹಿಸಲು ಯಮನು ಸಿದ್ದನಾದಾಗ ಬ್ರಹ್ಮದೇವನು ಪ್ರತ್ಯಕ್ಷನಾಗಿ ಈ ರೀತಿ ಅಂದನು ವೈವಸ್ವತ ಮಹಾಬಾಹೋ ನ ಖಲ್ವಮಿತವಿಕ್ರಮ | ನ ಹಂತವ್ಯಸ್ತೇನ ದಂಡೇನೈಷ ನಿಶಾಚರಃ ॥೩೯॥ ವರಃ ಖಲು ಮಯ್ತಸ್ಯೆ ದತ್ತÀದಶಪುಂಗವ | ಸ ತ್ವಯಾ ನಾನೃತಃ ಕಾರ್ಯೋ ಯನ್ಮಯಾ ವ್ಯಾಹೃತಂ ವಚಃ ॥೪॥ “ಹೇ ಮಹಾಪರಾಕ್ರಮಿಯಾದ ವೈವಸ್ವತನೇ, ಹೇ ಅತುಲವಿಕ್ರಮನೇ, ಈ ದಂಡದಿಂದ ನೀನು ಈ ರಾಕ್ಷಸನನ್ನು ವಧಿಸಬೇಡ! ಎಲೈ ಸುರಶ್ರೇಷ್ಠನೇ, ಹೀಗೆ ಮಾಡುವದರಿಂದ ನಾನು ನಿಜವಾಗಿ ರಾವಣನಿಗೆ ಕೊಟ್ಟ ವರವು ಅಸತ್ಯವೆನಿಸುವದು. “ನನ್ನ ವಚನವನ್ನು ಅಸತ್ಯಗೊಳಿಸುವವನು ದೇವತೆಯೇ ಆಗಿರಲಿ, ಮಾನವನೇ ಆಗಿರಲಿ, ಆತನು ತ್ರೈಲೋಕ್ಯವನ್ನು ಅಸತ್ಯಗೊಳಿಸಿದ ಪಾಪಕ್ಕೆ ಗುರಿಯಾಗುವನು. ಈ ದಂಡದ ಏಟಿನಿಂದ ಯಾರೂ ಕ್ಷಣಮಾತ್ರವೂ ಬದುಕಿರ ಲಾರರು; ಆದ್ದರಿಂದ ನೀನು ರಾವಣನ ತಲೆಯ ಮೇಲೆ ಈ ದಂಡದ ಪ್ರಹಾರವನ್ನು ಮಾಡಬೇಡ! ಇದರಿಂದ ರಾಕ್ಷಸನು ಸತ್ತರೆ ಇಲ್ಲವೇ ಒಂದುವೇಳೆ ಸಾಯದಿದ್ದರೂ ನನ್ನ ವಚನವು ಸುಳ್ಳಾಗುವದು ಖಂಡಿತ; ಆದ್ದರಿಂದ ನೀನು ಈ ದಂಡವನ್ನು ಹಿಂತೆಗೆದುಕೊ!” ಬ್ರಹ್ಮದೇವನ ವಿನಂತಿಯ ಮೇರೆಗೆ ಯಮನು ಕಾಲದಂಡವನ್ನು ಹಿಂದೆ ತೆಗೆದುಕೊಂಡನು. ಬ್ರಹ್ಮದೇವನಿಗೆ ಯಮನು ಈ ರೀತಿ ಹೇಳಿದನು