ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೫೯


ಹನುಮಾನ

ಯುದ್ಧಕಾಂಡ/೫೯

ಮೌಲ್ಯವಾನನು ಸೂಚಿಸಿದಂತೆ ಹನುಮಂತನು ಸಹ ರಾವಣನಿಗೆ ಆತನ
ವರದ ಮಿತಿ ಮೇರೆಗಳ ಅರಿವನ್ನು ಮಾಡಿಕೊಟ್ಟಿದ್ದಾನೆ. ಬಾಣಗಳ ಸುರಿಮಳೆಯಿಂದ
ಲಕ್ಷಣನನ್ನು ಸುತ್ತುವರೆದ ರಾವಣನನ್ನು ಎದುರಿಸಿ, ಹನುಮಂತನು ಹೀಗೆಂದನು:
ದೇವದಾನಗಂಧರ್ವೈರ್ಯಕ್ಷೈಶ್ಚ ಸಹ ರಾಕ್ಷಸೈಃ |
ಅವಧ್ಯತ್ತ್ವಂ ತ್ವಯಾ ಪ್ರಾಪ್ತಂ ವಾನರೇಭ್ಯಸ್ತು ತೇ ಭಯಾಮ್ ‖೫೫‖

ದೇವ, ದಾನವ, ಗಂಧರ್ವ, ಯಕ್ಷ ಮತ್ತು ರಾಕ್ಷಸರಿಂದ ನಿನಗೆ ಮರಣದ
ಭಯವಿರದಿದ್ದರೂ ವಾನರರಿಂದ ನಿನಗೆ ಮೃತ್ಯುವಿನ ಭಯವಿದೆ.

ವಿಭೀಷಣ

ಯುದ್ಧಕಾಂಡ/೧೬

ಶರಣಾಗತನಾದ ವಿಭೀಷಣನಿಗೆ ರಾಮನು ಅಭಯವನ್ನಿತ್ತನು. ರಾಕ್ಷಸರ
ಬಲಾಬಲ ಎಷ್ಟಿದೆ ಎಂಬುದನ್ನು ನಿಜ ಹೇಳಬೇಕೆಂದು ರಾಮನು ವಿಭಿಷಣನನ್ನು
ವಿನಂತಿಸಿದಾಗ ವಿಭೀಷಣನು ಈ ರೀತಿ ಹೇಳಿದನು:
ಅವಧ್ಯಃ ಸರ್ವಭೂತಾನಾಂ ಗಂಧರ್ವೋಗರರಪಕ್ಷಿಣಾಮ್ |
ರಾಜಪುತ್ರ ದಶಗ್ರೀವೋ ವರದಾನಾತ್ಸ್ವಯಂಭುವಃ ‖೯‖

“ಹೇ ರಾಜಪುತ್ರನೇ, 'ಗಂಧರ್ವ, ಉರಗ, ಪಕ್ಷಿ ಮುಂತಾದ ಯಾವ
ಪ್ರಾಣಿಗಳಿಂದಲೂ ರಾವಣನು ಸಾಯುವಂತಿಲ್ಲ' ಎಂಬ ವರವು ಬ್ರಹ್ಮನಿಂದ
ರಾವಣನಿಗೆ ದೊರೆತಿದೆ.” ಇದನ್ನು ಹೇಳಿ ವಿಭೀಷಣನು ಇನ್ನಿತರ ರಾಕ್ಷಸರ ಸಾಮರ್ಥ್ಯದ ಬಗ್ಗೆ ಯಥಾಸ್ಥಿತವಾಗಿ ವಿವರಿಸಿದನು.

ರಾವಣನ ಉದ್ವಿಗ್ನತೆ

ಯುದ್ಧಕಾಂಡ/೬೦

ರಾಮನ ಶರಗಳಿಂದ ಗ್ರಸ್ತನಾದ ರಾವಣನು ಇತರ ರಾಕ್ಷಸರಿಗೆ
ಇಂತೆಂದನು- “ಮಹೇಂದ್ರನಿಗೆ ಸಾಟಿಯಾದ ನನ್ನನ್ನು ಈ ಮಾನವನು
ಪರಾಭವಗೊಳಿಸಿದ್ದಾನೆ. ನಾನ ಅಚರಿಸಿದ ತಪಸ್ಸು ವ್ಯರ್ಥವಾಯಿತು. 'ಮಾನವರಿಂದ