ಈ ಪುಟವನ್ನು ಪ್ರಕಟಿಸಲಾಗಿದೆ

೨೪೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ರಾಕ್ಷಸರಲ್ಲಿಯ ಶ್ರೇಷ್ಠರೆನಿಸುವ ಮಂತ್ರಿಗಳ ಸಮೇತ ಸುಮಾಲಿಯು ರಾವಣನ
ಬಳಿಗೆ ಹೋದನು. ರಾವಣನು ಆನಂದದಿಂದ ಅಪ್ಪಿಕೊಂಡು ಇಂತೆಂದನು-
ದಿಷ್ಟ್ಯಾ ತೇ ವತ್ಸ ಸಂಪ್ರಾಪ್ತಶ್ಚಿಂತಿತೋಯಂ ಮನೋರಥಃ |
ಯಸ್ತ್ವಂ ತ್ರಿಭುವನಶ್ರೇಷ್ಠಾಲಬ್ಧ ವಾನ್ವರಮುತ್ತಮಮ್ ‖೪‖

“ಹೇ ವತ್ಸನೇ, ತ್ರೈಲೋಕದಲ್ಲಿ ಶ್ರೇಷ್ಠನೆನಿಸುವ ಬ್ರಹ್ಮನಿಂದ ನಿನಗೆ ಉತ್ತಮ
ವಾದ ವರವು ದೊರಕಿದೆ. ಬಹುದಿನದಿಂದ ಇದ್ದ ನಮ್ಮ ಮನೋವಾಂಛಿತವನ್ನು
ನೀನು ಪಡೆದಿರುವಿ. ವಿಷ್ಣುವಿನ ಭಯದಿಂದ ನಾವು ರಸಾತಳದಲ್ಲಿ ಅಡಗಿದ್ದೆವು.
ಇನ್ನು ಆ ಭಯವು ಉಳಿಯಲಿಲ್ಲ. ವಿಶ್ವಪ್ರಯತ್ನವನ್ನಾದರೂ ಮಾಡಿ ಲಂಕಾ
ನಗರವನ್ನು ಕುಬೇರನಿಂದ ಪಡೆದುಕೊಳ್ಳಬೇಕು!” ಎಂದು ಸುಮಾಲಿಯು
ರಾವಣನಿಗೆ ಸಲಹೆ ಇತ್ತನು.


ವಿಶ್ವಾಮಿತ್ರ

ಬಾಲಕಾಂಡ/೨೦

ಯಜ್ಞದಲ್ಲಿ ವಿಘ್ನಗಳನ್ನುಂಟುಮಾಡುತ್ತಿದ್ದ ರಾಕ್ಷಸರನ್ನು ಸದೆಬಡೆಯಲು
ರಾಮನನ್ನು ಸಹಾಯಕ್ಕಾಗಿ ಕಳುಹಿಸಬೇಕೆಂದು ವಿಶ್ವಾಮಿತ್ರನು ದಶರಥನಿಗೆ
ಬಿನ್ನವಿಸಿದನು. ಮೊದಲು ಅನುಮತಿಯನ್ನು ಕೊಟ್ಟಿದ್ದರೂ ವಿಶ್ವಾಮಿತ್ರನ ಪ್ರತ್ಯಕ್ಷ
ಈ ಬೇಡಿಕೆಯನ್ನು ಕೇಳಿ ದಶರಥನ ಮನಸ್ಸು ವಿಚಲಿತವಾಯಿತು. ಆತನು
ಇದೊಂದನ್ನು ಬಿಟ್ಟು ಬೇರೆ ಯಾವದನ್ನಾದರೂ ಬೇಡಬಹುದೆಂದು ವಿನಯ
ಪೂರ್ವಕವಾಗಿ ವಿಶ್ವಾಮಿತ್ರನಿಗೆ ಹೇಳಿದನು. ದಶರಥನ ಮಾತುಗಳನ್ನು ಕೇಳಿ
ವಿಶ್ವಾಮಿತ್ರನು ಹೀಗೆಂದನು-
ಪೌಲಸ್ತ್ಯ ವಂಶಪ್ರಭುವೋ ರಾವಣೋ ನಾಮ ರಾಕ್ಷಸಃ |
ಸ ಬ್ರಹ್ಮಣಾ ದತ್ತವರಸ್ತ್ರೈಲೋಕ್ಯಂ ಬಾಧತೇ ಭೃಶಮ್ ॥೧೬॥

“ರಾವಣನೆಂಬ ರಾಕ್ಷಸನು ಪೌಲಸ್ತ್ಯವಂಶದಲ್ಲಿ ಜನಿಸಿದ್ದಾನೆ. ಬ್ರಹ್ಮದೇವನಿಂದ
ವರವನ್ನು ಪಡೆದು ಆತನು ತ್ರೈಲೋಕವನ್ನು ಅತಿಶಯವಾಗಿ ಪೀಡಿಸುತ್ತಿದ್ದಾನೆ.
ಆತನು ವಿಶ್ರವಾ ಮುನಿಯ ಪುತ್ರನಾಗಿದ್ದು ಕುಬೇರನ ತಮ್ಮನಾಗಿದ್ದಾನೆ. ಈ
ರಾವಣನು ಅತಿ ಬಲಾಢ‍್ಯನಾಗಿದ್ದುದರಿಂದ ತಾನು ಸ್ವತಃ ಯಜ್ಞದಲ್ಲಿ ವಿಘ್ನಗಳನ್ನು
ತರುವದು ಕನಿಷ್ಠ ಭಾವವೆಂದು ಭಾವಿಸಿ, ಅಂಥ ಕೆಲಸಗಳನ್ನು ಸುಬಾಹು,