ಈ ಪುಟವನ್ನು ಪ್ರಕಟಿಸಲಾಗಿದೆ

೨೫೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ತತೋ ದೇಶಸ್ಯ ಸುಪ್ರೀತೋ ವರಂ ಪ್ರಾದಾದನುತ್ತಮಮ್ |
ಇಮೌ ಜನಪದೌ ಸ್ಫೀತೌ ಖ್ಯಾತಿಂ ಲೋಕೇ ಗಮಿಷ್ಯತಃ ‖೨೨‖

“ನನ್ನ ದೇಹದ ಕೊಳೆಯನ್ನು ಮತ್ತು ಹಸಿವನ್ನು ಇಂಗಿಸಿದ ಈ ಪ್ರದೇಶಗಳು
'ಮಲದ' ಮತ್ತು 'ಕರುಷ'ವೆಂದು ಖ್ಯಾತಿಪಡೆದು ಸಮೃದ್ಧಗೊಳ್ಳುವವು; ಮತ್ತು
ಪೃಥ್ವಿಯಲ್ಲಿ ಇವು ಪ್ರಸಿದ್ಧಿಯನ್ನು ಪಡೆಯುವವು” ಎಂಬ ಅತ್ಯುತ್ತಮ ವರವನ್ನು
ಇಂದ್ರನು ಕೊಟ್ಟನು. ಆ ದೇಶಗಳಲ್ಲಿ ಗೌರವಿಸಿದ ಸಂಗತಿಯನ್ನು ದೇವತೆಗಳು
ಕಂಡು ಇಂದ್ರನಿಗೆ ಅನುಮೋದಿಸಿದರು.
ಇದು 'ಅಯಾಚಿತ' ವರವಾಗಿದೆ.

೮. ಬ್ರಹ್ಮದೇವ < ಸುಕೇತು, ತಾಟಕಾ

ಬಾಲಕಾಂಡ/೨೫

ವಿಶ್ವಾಮಿತ್ರನು ರಾಮನಿಗೆ ತಾಟಕಿಯ ವೃತ್ತಾಂತವನ್ನು ಹೇಳುತ್ತಿದ್ದಾನೆ.
ಪೂರ್ವದಲ್ಲಿ ಸುಕೇತು ಎಂಬ ದೊಡ್ಡ ಯಕ್ಷನು ಆಗಿಹೋದನು. ಆತನು
ವೀರನಾಗಿದ್ದರೂ ಆತನಿಗೆ ಸಂತತಿಯಿರಲಿಲ್ಲ. ಸದಾಚಾರಿಯಾದ ಆ ಯಕ್ಷನು
ಮಕ್ಕಳನ್ನು ಪಡೆಯಬೇಕೆಂದು ಮಹಾತಪಸ್ಸನ್ನು ಆಚರಿರಿಸಿದನು. ಆಗ
ಸಂತೋಷಗೊಂಡ ಬ್ರಹ್ಮದೇವನು ಯಕ್ಷಾಧಿಪತಿಗೆ ತಾಟಕಿ ಎಂದು ಖ್ಯಾತಿಗೊಂಡ
ಕನ್ಯೆಯನ್ನು ಕೊಟ್ಟನು.
ವರದಾನಕೃತಂ ವೀರ್ಯಂ ಧಾರಯತ್ಯಬಲಾ ಬಲಮ್ ‖೪‖

ಈ ಅಬಲೆಯು ವರಪ್ರದಾನದಿಂದ ಇಂಥ ಬಲ ಮತ್ತು ವೀರ್ಯವನ್ನು
ಧರಿಸುತ್ತಿದ್ದಾಳೆ.
ದದೌ ನಾಗಸಹಸ್ರಸ್ಯ ಬಲಂ ಚಾಸ್ಯಾಃ ಪಿತಾಮಹಃ ‖೭‖

ಸಾವಿರ ಆನೆಗಳ ಬಲವನ್ನ ಕೊಟ್ಟನು.
ಬ್ರಹ್ಮದೇವನು ಯಕ್ಷಾಧಿಪತಿಗೆ ಕೇವಲ ಕನ್ಯಾರತ್ನವನ್ನು ಕೊಟ್ಟನೇ ಹೊರತು
ಪುತ್ರರತ್ನವನ್ನು ಕರುಣಿಸಲಿಲ್ಲ. ಪುತ್ರನನ್ನು ಕೊಟ್ಟಿದ್ದರೆ ಆತನು ಜನರಿಗೆ ಅತಿಯಾಗಿ
ಪೀಡಿಸಬಹುದಿತ್ತು; ಕನ್ಯೆಯಿಂದಲೂ ಪೀಡೆ ಕಡಿಮೆಯಾಯಿತೆಂತಲ್ಲ; ಕೊನೆಗೆ
ಅವಳನ್ನು ವಧಿಸುವ ಉಪಾಯವನ್ನು ಬ್ರಹ್ಮನೇ ಕಂಡುಹಿಡಿಯಬೇಕಾಯಿತು.