ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೬೫


೧೯. ಋಷಿ < ಕೈಕೇಯಿ

ಅಯೋಧ್ಯಾಕಾಂಡ/೩೫

ರಾಮನನ್ನು ವನವಾಸಕ್ಕೆ ಕಳುಹಿಸಲೇಬೇಕೆಂದು ಕೈಕೇಯಿಯು ಹಟ
ಹಿಡಿದಳು. ಆಗ ಸುಮಂತ್ರನು ಅವಳನ್ನು ಅತ್ಯಂತ ಕಟುವಾಗಿ ಜರಿಯುತ್ತಿದ್ದಾನೆ.
ಪರಿಣಾಮಗಳ ಪರಿವೆಯಿಲ್ಲದೆ ಕೈಕೇಯಿಯು ತನ್ನ ವರಗಳ ಪರಿಪೂರ್ತಿ
ಗಾಗಿ ಹಟ ಹಿಡಿದಾಗ ದಶರಥ, ಲಕ್ಷ್ಮಣ, ವಸಿಷ್ಠಾದಿಗಳು ಆಕೆಗೆ ತಿಳಿಹೇಳುವ
ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. ಆಕೆಯನ್ನು ಹಳಿದರು. ಇಷ್ಟಾದರೂ
ಅವಳ ದುರಾಗ್ರಹವು ಕಳೆಯಲಿಲ್ಲ. ಸುಮಂತ್ರನಿಗೆ ತಡೆಯಲಾಗದ ಕೋಪ
ಬಂದಿತು. ಅವನು ಅವಳ ಅಂತರಂಗಕ್ಕೆ ತಾಗುವಂಥ ಮಾತುಗಳನ್ನು ಈ ರೀತಿ
ನುಡಿದನು-
“ಎಲೈ ಕೈಕೇಯಿ, ನೀನು ನಿನ್ನ ಪತಿಯ ಮತ್ತು ಸಮಸ್ತ ಕುಲದ ಧ್ವಂಸಿನಿ
ಯಾಗಿರುವೆ. ನಿನ್ನ ನಡತೆಯಿಂದ ನೀನು ದಶರಥನನ್ನು ದಳ್ಳುರಿಯಲ್ಲಿ ಹಾಕಿರುವೆ.
ವಯಸ್ಸಿನ ಕ್ರಮವನ್ನು ಅನುಸರಿಸಿ ರಾಜನ ಮೃತ್ಯುವಿನ ನಂತರ ಆತನ ಮಕ್ಕಳಿಗೆ
ರಾಜ್ಯಗಳು ದೊರೆಯುತ್ತಿರುತ್ತವೆ; ಆದರೆ ಇಕ್ಷ್ವಾಕು ಕುಲೋತ್ಪನ್ನನಾದ ದಶರಥ
ರಾಜನು ಜೀವಿತವಿದ್ದರೂ ಆ ಕ್ರಮವನ್ನು ತಪ್ಪಿಸುವ ಇಚ್ಛೆ ನನಗಿದೆ. ನಿನ್ನ ಮಗನಾದ
ಭರತನು ರಾಜನಾಗಿ ಪೃಥ್ವಿಯನ್ನು ಪರಿಪಾಲಿಸಲಿ! ಆದರೆ ಎಲ್ಲಿ ರಾಮನಿರುವನೋ
ಅಲ್ಲಿಗೆ ನಾವೆಲ್ಲರೂ ಹೋಗುತ್ತೇವೆ. ನಿನ್ನ ದೇಶ ಯಾವ ಬ್ರಾಹ್ಮಣನೂ ವಾಸವಿರಲು
ಯೋಗ್ಯವೆನಿಸದು; ಅಂಥ ಕುಕರ್ಮವನ್ನು ನೀನು ಮಾಡುತ್ತಿರುವೆ. ಕಹಿಬೇವಿನ
ಮರದಿಂದ ಜೇನು ತೊಟಕಲಾರದು- ಎಂಬುದೇ ನಿಜ. ನಿನ್ನ ಕುಲೀನತೆಯು
ನಿನ್ನ ತಾಯಿಯಂತೆಯೇ ಇರುವದೆಂಬುದನ್ನು ನಾನು ಬಲ್ಲೆ; ನಿನ್ನ ತಾಯಿಯ
ಪಾಪಕರ್ಮದ ಆಸಕ್ತಿಯನ್ನು ಸಂಪೂರ್ಣವಾಗಿ ಕೇಳಿ ತಿಳಿದಿರುವೆನು.
ಪಿತುಸ್ತೇ ವರದಃ ಕಶ್ಚಿದ್ದದೌ ವರಮನುತ್ತಮಮ್ ॥೧೮॥
ಸರ್ವಭೂತರುತಂ ತಸ್ಮಾತ್ಸಂಜಜ್ಞೇ ವಸುಧಾಧಿಪಃ |
ತೇನ ತೀರ್ಯಗ್ಗತಾನಾಂ ಚ ಭೂತಾನಾಂ ವಿದಿತಂ ವಚಃ ‖೧೯‖

“ಒಮ್ಮೆ ಒಬ್ಬ ಋಷಿಯು ನಿನ್ನ ತಂದೆಗೆ ಒಂದು ಅನುಪಮವಾದ ವರವನ್ನು
ಕೊಟ್ಟನು. ಆ ವರದ ಪ್ರಭಾವದಿಂದ ಎಲ್ಲ ಪ್ರಾಣಿಗಳ ಭಾಷೆಯ ಅರ್ಥವು
ಆತನಿಗೆ ತಿಳಿದು ಬರಹತ್ತಿತು. ಎಲ್ಲ ಪಶುಪಕ್ಷಿಗಳ ಸಂಭಾಷಣೆಯು ಆತನಿಗೆ
ಅರ್ಥವಾಗುತ್ತಿತ್ತು.