ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭೬ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಸ ತೇ ಪ್ರತಿ ಗ್ರಹೀತವ್ಯ: ಸೌಮಿತ್ರಿಸಹಿತೋsತಿಥಿಃ | ತಂ ಚ ದೃಷ್ಟಾ ವರಾಂಲ್ವೇಕಾನಕ್ಷಯಾಂಷ್ಟ್ರಂ ಗಮಿಷ್ಯತಿ ೧೬ “ನೀನು ಚಿತ್ರಕೂಟ ಪರ್ವತವನ್ನು ತಲುಪಿದ ಕ್ಷಣವೇ, ನಾನು ಸೇವೆಗೈದ ತಪಸ್ವಿಗಳು ಕಾಂತಿಮಯ ವಿಮಾನದ ಸಹಾಯದಿಂದ ಸ್ವರ್ಗದತ್ತ ಸಾಗಿದರು. ಹೋಗುವಾಗ ಆ ಧರ್ಮಜ್ಞ ಮಹಾಭಾಗ್ಯವಾನರಾದ ಮಹರ್ಷಿಗಳು ನಗನೆ: 'ಈ ನಿನ್ನ ಪುಣ್ಯಭೂಮಿಯಲ್ಲಿ ಲಕ್ಷ್ಮಣನೊಡಗೂಡಿ ರಾಮನು ಬರಲಿರುವನು; ನೀನು ಆತನಿಗೆ ಸ್ವಾಗತಿಸು! ಆತನ ದರ್ಶನದಿಂದ ನಿನಗೆ ಅಕ್ಷಯವಾದ ಉತ್ತಮ ಲೋಕಗಳು ಪ್ರಾಪ್ತವಾಗುವವು.” ” - ಹೀಗೆ ಅವರು ಹೇಳಿದ್ದರಿಂದ ರಾಮನ ಸ್ವಾಗತಕ್ಕಾಗಿ ಅನೇಕ ವನ್ಯಪದಾರ್ಥ ಗಳನ್ನು ಸಂಗ್ರಹಿಸಿಟ್ಟಿದ್ದನ್ನು ಆತನಿಗೆ ತಿಳಿಸಿ ಅವುಗಳನ್ನು ಸ್ವೀಕರಿಸಬೇಕೆಂದು ವಿನಂತಿಸಿದಳು. ಶಬರಿಯು ಅರ್ಪಿಸಿದ ಕಾಡಿನ ಫಲಗಳನ್ನು ಸ್ವೀಕರಿಸಿ ರಾಮನು ಅವಳಿಗೆ ಈ ರೀತಿ ನುಡಿದನು: “ಹೇ ಕಲ್ಯಾಣೀ, ನೀನು ನನ್ನನ್ನು ಪೂಜಿಸಿರುವೆ. ಈಗ ನಿನ್ನ ಮನೋರಥವು ವಿನಾಯಾಸವಾಗಿ ಪೂರ್ಣಗೊಳ್ಳುವದು.” ರಾಮನ ಅನುಜ್ಞೆಯನ್ನು ಪಡೆದು ಶಬರಿಯು ಅಗ್ನಿಯಲ್ಲಿ ತನ್ನ ಹವನವನ್ನು ಪೂರೈಸಿ ಸ್ವರ್ಗವನ್ನು ಸೇರಿದಳು. ಆಗ ದಿವ್ಯಾಲಂಕಾರ, ದಿವ್ಯಪುಷ್ಟ ದಿವ್ಯಚಂದನ ಮತ್ತು ದಿವ್ಯವಸ್ತ್ರಗಳಿಂದ ಅವಳು ಶೋಭಿತಳಾಗಿದ್ದಳು.

  • ತಪಸ್ವಿಗಳ ಹೇಳಿಕೆಯು ಸದಿಚ್ಚೆಯೋ? ವರವೋ? ವರವಾಗಿದ್ದರೆ

“ಅಯಾಚಿತವಾಗಿದೆ. ದಿವ್ಯಪುಷ್ಪ, ಚಂದನ ಮತ್ತು ವಸ್ತಗಳು ವರದಿಂದ ದೆರೆತವೆಂತಲ್ಲ; ಇವು ಅನುಗ್ರಹವೆನಿಸುತ್ತವೆ. ೨೮. ? < ದುಂದುಭಿ ಕಿಂಧಾಕಾಂಡ/೧೧ ವಾಲಿಯ ಅತುಲನೀಯ ಸಾಮರ್ಥ್ಯದ ಬಗ್ಗೆ ಸುಗ್ರೀವನು ರಾಮನಿಗೆ ಹೇಳುತ್ತಿದ್ದಾನೆ. “ಸೂರ್ಯೋದಯವಾಗುವ ಮೊದಲು ಬ್ರಾಹೀಮುಹೂರ್ತದಲ್ಲಿ ವಾಲಿಯು ಪ್ರತಿನಿತ್ಯವೂ ಪಶ್ಚಿಮ ಸಮುದ್ರದಿಂದ ಪೂರ್ವ ಸಮುದ್ರದವರೆಗೆ ಮತ್ತು ದಕ್ಷಿಣ ಸಮುದ್ರದಿಂದ ಉತ್ತರ ಸಮುದ್ರದವರೆಗೆ ಸ್ವಲ್ಪಕೂಡ ಆಯಾಸವೆನಿಸದೆ