ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಮಮ ಪ್ರಿಯಸಖೀ ಹೇಮಾ ನೃತ್ಯಗೀತವಿಶಾರದಾ ||೧೭|| ತಯಾ ದತ್ತವರಾ ಚಾಸ್ತಿ ರಕ್ಷಾಮಿ ಭವನಂ ಮಹತ್ |೧೮|| “ನಾನು ಮೇರುಸಾವರ್ಣಿಯ ಸ್ವಯಂಪ್ರಭೆ ಹೆಸರಿನ ಕನ್ಯಯಾಗಿದ್ದೇನೆ. ಈ ವಸತಿ ಸ್ಥಾನವು ಹೇಂಆ ಅಪ್ಸರೆಯದಿದೆ ಅದನ್ನು ನಾನು ರಕ್ಷಿಸುತ್ತಿದ್ದೇನೆ. ನೃತ್ಯ ಮತ್ತು ಸಂಗೀತದಲ್ಲಿ ನಿಪುಣಳಾದ ಹೇಮಾ ನನ್ನ ಗೆಳತಿಯಾಗಿದ್ದಾಳೆ. ಇದನ್ನು ರಕ್ಷಿಸುವ ಸಾಮರ್ಥ್ಯವನ್ನು ವರವಾಗಿ ಹೇಮಾ ನನಗೆ ಕೊಟ್ಟಿದ್ದಾಳೆ. ಆ ಕಾರಣ, ಈ ಪ್ರಚಂಡ ಗೃಹದ ಸಂರಕ್ಷಣೆಯನ್ನು ನಾನು ಮಾಡುತ್ತಲಿರುವೆನು.” ಆನಂತರ ಅವಳು ಹನುಮಂತನಿಗೆ ಆತನ ಆಗಮನದ ಕಾರಣವನ್ನು ಕೇಳಿ ಈ ದುರ್ಗಮವಾದ ವನವು ಅವರ ದೃಷ್ಟಿಗೆ ಹೇಗೆ ಕಂಡುಬಂದಿತು? ಎಂಬುದನ್ನು ತಿಳಿಸಲು ಹೇಳಿದಳು. ಇದು 'ಅಯಾಚಿತ' ವರವಿರಬಹುದು. ೩೨. ಹನುಮಾನ < ಸ್ವಯಂಪ್ರಭಾ ಕಿಂಧಾಕಾಂಡ/೫೨ ಹೇಮಾ ಅಪ್ಪರೆಯ ಸಖಿಯಾದ ಸ್ವಯಂಪ್ರಭೆಯು ಋಕ್ಷ-ಬಿಲವನ್ನು ಸಂರಕ್ಷಿಸುತ್ತಿದ್ದಳು. ಆಗ ಅಲ್ಲಿ ಪ್ರವೇಶಿಸಿದ ಹನುಮಾನ ಮುಂತಾದ ವಾನರರಿಗೆ ಅವರ ವೃತ್ತಾಂತವನ್ನು ಹೇಳಬೇಕೆಂದು ಪ್ರಾರ್ಥಿಸಿದಳು. ಸೀತೆಯ ಶೋಧವನ್ನು ಮಾಡಲು ಅಲೆಯುತ್ತ ಆ ಸ್ಥಳಕ್ಕೆ ಹೇಗೆ ತಲುಪಿದರು ಎಂಬುದರ ಬಗ್ಗೆ ಹನುಮಂತನು ವಿಸ್ತರಿಸಿ ಹೇಳಿದನು. ಅವನು ಕೃತಜ್ಞತಾಪೂರ್ವಕಾಗಿ ಈ ರೀತಿ ಎಂದನು: ತ್ವಾಂ ಚೈವೋಪಗತಾಃ ಸರ್ವೆ ಪದ್ಯನಾ ಬಭುಕ್ಷಿತಾಃ | ಆತಿಥ್ಯಧರ್ಮದತ್ತಾನಿ ಮೂಲಾನಿ ಚ ಫಲಾನಿ ಚ |೧೬|| ಅಸ್ಮಾಭಿರುಪಯುಕ್ತಾನಿ ಬುಭುಕ್ಷಾಪರಿಪೀಡಿತೈಃ | ಯತ್ಯಾ ರಕ್ಷಿತಾಃ ಸರ್ವೆ ಪ್ರಿಯಮಾಣಾ ಬುಭುಕ್ಷಯಾ ॥೧೭॥ ಬ್ರೂಹಿ ಪ್ರತ್ಯುಪಕಾರಾರ್ಥಂ ಕಿಂ ತೇ ಕುರ್ವಂತು ವಾನರಾ ॥೧೮॥ “ನಾವೆಲ್ಲರೂ ಹಸಿದು ಬಳಲಿದವರಾಗಿದ್ದೆವು. ಆಗ ನಿನ್ನ ಬಳಿಗೆ ಬಂದೆವು. ನಮ್ಮನ್ನು ಅತಿಥಿಗಳೆಂದು ಬಗೆದು ನೀವು ಕೊಟ್ಟ ಹಣ್ಣುಹಂಪಲುಗಳನ್ನು ಹಸಿವೆಯಿಂದ ವ್ಯಾಕುಲರಾದ ನಾವು ಭಕ್ಷಿಸಿದ್ದೇವೆ. ಹಸಿವೆಯಿಂದ ಬಳಲಿ