ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕುಸಿದನು. ರೆಕ್ಕೆಗಳನ್ನು ಹರಡಿ ಸಂಪಾತಿಯು ಆತನ ಮೇಲೆ ನೆರಳನ್ನುಂಟು ಮಾಡಿದನು. ಆದ್ದರಿಂದ ಜಟಾಯುವು ಸುಟ್ಟುಹೋಗಲಿಲ್ಲ; ಆದರೆ ಶಾಖದಿಂದ ಸಂಪಾತಿಯ ರೆಕ್ಕೆಗಳೆರಡೂ ಸುಟ್ಟುಹೋಗಿ ಸಂಪಾತಿಯು ವಿಂಧ್ಯಪರ್ವತದ ಮೇಲೆ ಒಂದು ಮುದ್ದೆಯಾಗಿ ಬಿದ್ದನು. ಸಂಪಾತಿಗೆ ಈ ರೀತಿ ತಮ್ಮನಾದ ಜಟಾಯುವಿನಿಂದ ವಿಯೋಗವಾಯಿತು; ರಾಜ್ಯವಿಲ್ಲದಂತಾಯಿತು. ರೆಕ್ಕೆಗಳಿಲ್ಲದೆ ಪರಾಕ್ರಮವಿಲ್ಲದಂತಾಗಿ ಅತೀವ ದುಃಖವಾಗಿ ಮರಣವನ್ನಪ್ಪುವ ವಿಚಾರದಿಂದ ಪರ್ವತದಿಂದ ಕೆಳಗೆ ಧುಮುಕಬೇಕೆಂಬ ತನ್ನ ಇಚ್ಛೆಯನ್ನು ಆತನು ನಿಶಾಕರ ಮುನಿಯ ಬಳಿ ಪ್ರಕಟಿಸಿದನು. ಆಗ ನಿಶಾಕರ ಮುನಿಯು ನುಡಿದದ್ದೇನೆಂದರೆ “ಮುಂಬರುವ ಕಾಲದಲ್ಲಿ ನಡೆಯಲಿರುವ ಒಂದು ಮಹತ್ವದ ಕಾರ್ಯದ ಬಗ್ಗೆ ಪುರಾಣದಿಂದ ಕೇಳಿದ್ದಲ್ಲದೆ, ತಪಸ್ವಾಮರ್ಥ್ಯದಿಂದಲೂ ಅದನ್ನು ಅವಲೋಕಿ ಸಿದ್ದೇನೆ. ಸೀತೆಯನ್ನು ಹುಡುಕುತ್ತ ಬರಲಿರುವ ವಾನರರಿಗೆ ಒಂದು ಮಹತ್ವದ ವಿಷಯವನ್ನು ನೀನು ಅರುಹಬೇಕಾಗಿದೆ. ಹೀಗಿರುವುದರಿಂದ ಈ ಸ್ಥಳವನ್ನು ಬಿಟ್ಟು ನೀನು ಕದಲುವದು ಯೋಗ್ಯವಾಲಾರದು.” ಪಚ ತೇ ಪ್ರಪಕ್ಷ ಚ ಪುನರನ್ಯ ಭವಿಷ್ಯತಃ | ಚಕ್ಷುಷೋ ಚೈವ ಪ್ರಾಣಾಶ್ಚ ವಿಕ್ರಮಶ್ಚ ಬಲು ಚ ತೇ ॥೨॥ “ನಿನ್ನ ಮುಖ್ಯ ರೆಕ್ಕೆಗಳು ಮತ್ತು ಉಪರೆಕ್ಕೆಗಳು ಮತ್ತೆ ಮೂಡ ಲಿರುವವು; ಅದೇ ರೀತಿ ದೃಷ್ಟಿ, ಪ್ರಾಣ, ಪರಾಕ್ರಮ ಇವೆಲ್ಲವೂ ನಿನ್ನಲ್ಲಿ ಸಂವರ್ಧಿಸ ಲಿರುವವು.” ದೇಶಕಾಲ ಪ್ರತೀಕ್ಷಸ್ವ ಪಕ್ಷ ತ್ವಂ ಪ್ರತಿಪತ್ನಸೇ ೧೨। “ದೇಶ ಮತ್ತು ಸಮಯದ ಪ್ರತೀಕ್ಷೆಯಲ್ಲಿರು; ನಿನಗೆ ತಾನಾಗಿ ರೆಕ್ಕೆಗಳು ಮೂಡುವವು.” ಆ ನಿಶಾಕರ ಮುನಿಯು ಇನ್ನೂ ನುಡಿದದ್ದೆಂದರೆ- “ನಾನು ಇಂದೇ ನಿನಗೆ ರೆಕ್ಕೆಗಳನ್ನು ಅನುಗ್ರಹಿಸಬಹುದಿತ್ತು; ಆದರೆ, ಒಮ್ಮೆ ರೆಕ್ಕೆಗಳು ಪ್ರಾಪ್ತವಾದ ನಂತರ ನೀನು ಈ ಸ್ಥಳದಲ್ಲಿ ಇರದೇ ಇದನ್ನು ಬಿಟ್ಟುಹೋಗುವ ಸಂಭವವಿದೆ; ಮತ್ತು ಮುಂದೆ ನಿನ್ನಿಂದ ನಡೆಯಬೇಕಾದ ದೇವತಾಕಾರ್ಯವು ಆಗಲಾರದು; ಆದ್ದರಿಂದ ಸಾಂಪ್ರತು ನಾನು ನಿನಗೆ ರೆಕ್ಕೆಗಳನ್ನು ಕೊಡುತ್ತಿಲ್ಲ.”