ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಯೋಜನೆಗಳಷ್ಟು ಎತ್ತರಕ್ಕೆ ಜಿಗಿದನು. ಇದನ್ನು ಕಂಡ ಇಂದ್ರನಿಗೆ ಆಶ್ಚರ್ಯವದು ದಲ್ಲದೆ ಕೋಪವೂ ಉಂಟಾಗಿ ಆತನು ಹನುಮಾನನ ಮೇಲೆ ವಜ್ರಾಯುಧದ ಪ್ರಹಾರವನ್ನು ಮಾಡಿದನು. ಅದರಿಂದ ಹನುಮಂತನು 'ಹನು' ಅಂದರೆ 'ಗದ್ದದ ಎಡಭಾಗವು ಮುರಿಯಿತು. ಆಗಿನಿಂದ ಈತನಿಗೆ ಹನುಮಾನನೆಂಬ ಹೆಸರು ಬಂದಿತು. ಹೀಗೆ ಹನುಮಂತನ ಮೇಲೆ ವಜ್ರಾಯುಧವನ್ನು ಇಂದ್ರನು ಎಸೆದನೆಂದು ವಾಯುವಿಗೆ ಕೋಪ ಬಂದಿತು. ವಾಯುವು ಸಮಸ್ತ ಮೂರೂ ಲೋಕಗಳ ತನ್ನ ಸಂಚಾರವನ್ನು ನಿಲ್ಲಿಸಿಬಿಟ್ಟನು. ಆಗ ಉಸಿರುಗಟ್ಟಿದಂತಾಗಿ ಮೂರೂ ಲೋಕಗಳಲ್ಲಿಂಯ ದೇವತೆಗಳು ಹೆದರಿಕೊಂಡು ವಾಯುವನ್ನು ಸ್ತುತಿಸಿ ಪ್ರಸನ್ನಗೊಳಿಸಲು ಉದ್ಯುಕ್ತರಾದರು. ಪ್ರಸಾದಿತೇ ಚ ಪವನೇ ಬ್ರಹ್ಮಾ ತುಭ್ಯಂ ವರಂ ದದ್ | ಅಶಸ್ತವಧ್ಯತಾಂ ತಾತ ಸಮರೇ ಸತ್ಯವಿಕ್ರಮ |೨೭| “ದೇವತೆಗಳು ವಾಯುವನ್ನು ಪ್ರಸನ್ನಗೊಳಿಸಿದರು. “ಸಂಗ್ರಾಮ ಭೂಮಿಯಲ್ಲಿ ಶಸ್ತ್ರಗಳಿಂದ ನಿನ್ನ ವಧೆಯಾಗಲಾರದು!”- ಎಂಬ ವರವನ್ನು ಬ್ರಹ್ಮದೇವನು ಕೊಟ್ಟನು. ಇದು “ಅಯಾಚಿತ' ವರವಾಗಿದೆ. ೩೫. ಇಂದ್ರ < ಹನುಮಾನ

  • ಕಿಂಧಾಕಾಂಡ/೬೬

ಬ್ರಹ್ಮದೇವ < ಹನುಮಾನ-ವರಕ್ರಮಾಂಕ ೩೪ ನೋಡಿ. ಜಾಂಬವಂತನು ಹನುಮಂತನಿಗೆ ಆತನು ಜನ್ಮ ವೃತ್ತಾಂತವನ್ನು ಹೇಳುತ್ತಿದ್ದಾನೆ. ಈ ಮೊದಲು ಬ್ರಹ್ಮನು ಹನುಮಂತನಿಗೆ ಕೊಟ್ಟ ವರದ ಬಗ್ಗೆ ಉಲ್ಲೇಖ ಮಾಡಿಯಾಗಿದೆ. ವರ ಕ್ರಮಸಂಖ್ಯೆ ೩೪. ವಜ್ರಸ್ಯ ಚ ನಿಪಾತೇನ ವಿರುಜಂ ತ್ವಾಂ ಸಮೀಕ್ಷ್ಯ ಚ | ಸಹಸ್ರನೇತ್ರಃ ಪ್ರೀತಾತ್ಮಾ ದದ್ ತೇ ವರಮುತ್ತಮಮ್ ||೨೮|| ಸ್ವಚ್ಛಂದತಶ್ಚ ಮರಣಂ ತವ ಸ್ಯಾದಿತಿ ವೈ ಪ್ರಭೋ ||೨೯|| “ವಜ್ರಾಯುಧದ ಪಟ್ಟಿನಿಂದಲೂ ಹನುಮಂತನಿಗೆ ಯಾವ ಗಾಯವೂ ಆಗಲಿಲ್ಲ ಎಂಬುದನ್ನು ಕಂಡು ಇಂದ್ರನ ಮನಸ್ಸು ಪ್ರಸನ್ನಗೊಂಡಿತು.