ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಗೊಳಿಸಿದನು. ಆಗ ಹನುಮಂತನು ಹೀಗೆಂದನು: “ನೀನು ನನ್ನನ್ನು ನುಂಗಬಹುದು; ಅಷ್ಟು ವಿಶಾಲವಾಗಿ ನಿನ್ನ ಬಾಯಿಯನ್ನು ತೆರೆ.” ಆಗ ಸುರಸೆಯು ಇನ್ನಷ್ಟು ಹೆಚ್ಚಾಗಿ ತನ್ನ ಬಾಯಿಯನ್ನು ತೆರೆದಳು. ಆಗ ಹನುಂಮತನು ತನ್ನ ಆಕಾರವನ್ನು ಕಿರಿದಾಗಿ ಮಾಡಿ ಕೈಯ ಹೆಬ್ಬೆರಳಿನಷ್ಟು ಗಾತ್ರದವನಾಗಿ ಆಕೆಯ ಬಾಯಿಯನ್ನು ಪ್ರವೇಶಿಸಿ, ತತ್‌ಕ್ಷಣ ಹೊರಗೆ ಬಂದು ಬಿಟ್ಟನು. ಆನಂತರ ಅಂತರಿಕ್ಷದಲ್ಲಿ ಸ್ಥಿರವಾಗಿ ಉಳಿದು ಅವಳೀಗೆ ಈ ರೀತಿ ಎಂದನು- ಪ್ರವಿಷ್ಟೋsಸ್ಮಿ ಹಿ ತೇ ವಕ್ತಂ ದಾಕ್ಷಾಯಿಣಿ ನಮೋಸ್ತುತೇ | ಗಮಿಷ್ಟೇ ಯತ್ರ ವೈದೇಹೀ ಸತ್ಯಶ್ಚಾಸೀದ್ ವರಸ್ತವ II೧೬೯ “ಹೇ ದಾಕ್ಷಾಯಿಣೀ, ನಮೋನಮಃ, ನಿನ್ನ ಹೇಳಿಕೆಯಂತೆ ನಾನು ನಿನ್ನ ಬಾಯಿಯಲ್ಲಿ ಪ್ರವೇಶಿಸಿದ್ದನು. ಈಗ ವಿದೇಹರಾಜನ ಕನೈಯು ಎಲ್ಲಿರುವಳೋ ಅಲ್ಲಿಗೆ ಹೋಗುವೆ. ನಿನಗೆ ದೊರೆತ ವರವು ನಿಜವಾದಂತಾಯಿತು. ಸುರಸೆಯು ತನ್ನ ಪೂರ್ವರೂಪವನ್ನು ತಾಳಿ ಈ ರೀತಿ ಎಂದಳು: “ನೀನು ಈಗ ನಿನ್ನ ಕಾರ್ಯಕ್ಕೆ ನಿರಾತಂಕವಾಗಿ ಹೊರಡು' ಮಹಾತ್ಮನೆನಿಸಿದ ರಘುಕುಲದ ರಾಮನೊಡನೆ ಸೀತೆಯ ಭೇಟಿಯನ್ನು ಮಾಡಿಸು!” ವಾನರರಿಗೆ, ಹನುಮಂತನು ತನ್ನ ಲಂಕಾಪ್ರಯಾಣದ ವೃತ್ತಾಂತವನ್ನು ಹೇಳುತ್ತಿದ್ದಾಗ ಸುರಸೆಯ ವರದ ಉಲ್ಲೇಖವನ್ನು ಮಾಡುತ್ತಾನೆ. “ಕಾರ್ಯ ಪೂರ್ತೀಯ ನಂತರ ಸುರಸೆಯ ಹೇಳಿಕೆಯಂತೆ ಅವಳ ಬಾಯಿಯನ್ನು ಪ್ರವೇಶಿಸುವೆ” ಎಂದು ಪ್ರತಿಜ್ಞಾಪೂರ್ವಕವಾಗಿ ಹೇಳಿದರೂ ಅವಳು ನನ್ನ ವಿನಂತಿಯನ್ನು ಮನ್ನಿಸಲಿಲ್ಲ.” ಅಬ್ರವೀನಾತಿವರ್ತನ್ಯಾಂ ಕಶ್ಚಿದೇಷ ವರೋ ಮಮ ॥೧೫೬ “ಈ ರೀತಿ ದೊರೆತ ವರವನ್ನು ವಿಫಲಗೊಳಿಸುವ ಸಾಮರ್ಥ್ಯವು ಯಾರಿಗೂ ಇಲ್ಲ'ವೆಂದು ಸುರಸೆಯು ಹೇಳಿದ್ದನ್ನು ಹನುಮಾನನು ವಿವರಿಸಿದನು. ಸುರಸೆಗೆ ವರವು ಏಕೆ? ಮತ್ತು ಯಾವ ರೀತಿ ದೊರಕಿತು? ಎಂಬುದರ ಸ್ಪಷ್ಟ ಉಲ್ಲೇಖವಿಲ್ಲ. ಹೀಗಿರುವುದರಿಂದ ಇದು ಯಾಚಿತ ವರವೋ ಅಯಾಚಿತ ವರವೋ ಎಂದು ನಿಶ್ಚಿಂತವಾಗಿ ತಿಳಿದುಬಂದಂತಿಲ್ಲ.