ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೯೩


ಕೈಗೊಳ್ಳಬೇಕು? ಎಂಬ ಬಗ್ಗೆ ವಿಚಾರವಿನಿಮಯ ನಡೆದಾಗ ಅಂಗದನು ಈ
ರೀತಿ ಎಂದನು-
ಅಶ್ವಿಪುತ್ರೌ ಮಹಾವೇಗೌ ಬಲವಂತೌ ಪ್ಲವಂಗಮೌ ‖೧‖
ಪಿತಾಮಹವರೋತ್ಸೇಕಾತ್ಪರಮಂ ದರ್ಪಮಾಸ್ಮಿತೌ |
ಅಶ್ವಿನೋರ್ಮಾನನಾರ್ಥಂ ಹಿ ಸರ್ವಲೋಕಪಿತಾಮಹಃ ‖೨‖
ಸರ್ವಾವಧ್ಯತ್ವಮತುಲಮನಯೋರ್ದತ್ತವಾನ್ಪುರಾ |
ವರೋತ್ಸೇಕೇನ ಮತ್ತೌ ಚ ಪ್ರಮಥ್ಯ ಮಹತೀಂ ಚಮೂಮ್ ‖೩‖


“ಶೀಘಗತಿಯವರಾಗಿದ್ದ ಈ ಅಶ್ವಿನೀಕುಮಾರ ಪುತ್ರರಾದ ಮೈಂದ, ದ್ವಿವಿದರು
ಮಹಾವೀರರಾದ ವಾನರರಾಗಿದ್ದಾರೆ. ಬ್ರಹ್ಮದೇವನ ವರದಿಂದ ಅವರು ತುಂಬ
ಗರ್ವಿಷ್ಠರಾಗಿದ್ದಾರೆ. ಅಶ್ವಿನೀಕುಮಾರರಿಗೆ ಸನ್ಮಾನಿಸಲು, ಸರ್ವಲೋಕಾಧಿ
ಪತಿಯಾದ ಬ್ರಹ್ಮದೇವನು ಇವರಿಗೆ ಈ ಮೊದಲು 'ನಿಮಗೆ ಯಾರಿಂದಲೂ ಪೀಡೆ
ಯಾಗಲಾರದು' ಎಂಬ ಉತ್ತಮ ವರವನ್ನು ಕೊಟ್ಟಿರುವದರಿಂದ, ಆ ವರದಿಂದ
ಮದವೇರಿದ ಇವರು ಪ್ರಚಂಡ ಸೇನೆಯನ್ನು ಪರಾಭವಗೊಳಿಸಿ ಈ ಮಹಾಬಲಾಢ್ಯ
ವಾನರವೀರರು ದೇವತೆಗಳ ಬಳಿಯ ಅಮೃತವನ್ನು ಪ್ರಾಶಿಸಿದ್ದಾರೆ.”
ಹೀಗಿರುವರಿಂದ ಮಿಕ್ಕೆಲ್ಲ ವಾನರರು ಬದಿಗೆ ಉಳಿದುಕೊಂಡರೂ
“ಇವರಿಬ್ಬರೇ ಲಂಕೆಯಲ್ಲಿಯ ಅಶ್ವ, ಗಜ, ರಥ ಸಮೇತ ಪೂರ್ಣಲಂಕೆಯನ್ನೇ
ನಾಶಗೊಳಿಸಲು ಸಮರ್ಥರಾಗಿದ್ದಾರೆ. ಹೀಗಿರುವದರಿಂದ ಕಿಷ್ಕಿಂಧೆಗೆ ಮರಳುವದು
ಬೇಡ; ಎಲ್ಲರೂ ಲಂಕೆಗೆ ಹೋಗಿ ರಾಕ್ಷಸರನ್ನು ನಾಶಗೊಳಿಸೋಣ; ಸೀತೆಯನ್ನು
ಜೊತೆಗೆ ಕರೆದುಕೊಂಡು ರಾಮನತ್ತ ಮರಳಿ ಹೋಗೋಣ!” ಎಂದು ಅಂಗದನು
ಸೂಚಿಸಿದನು.
ಈ ವರವು ಯಾಚಿತವೋ ಅಯಾಚಿತವೋ ಎಂಬುದನ್ನು ನಿಶ್ಚಿತವಾಗಿ
ಹೇಳಲಾಗುವುದಿಲ್ಲ.

೪೧. ? < ಕಾಲಕೇಯ

ಯುದ್ಧಕಾಂಡ/೭

ರಾಮನು ಲಂಕೆಯತ್ತ ಸಾಗಿ ಬರುತ್ತಿರುವದನ್ನು ಅರಿತ ರಾವಣನು
ಮಹಾಬಲಾಢ್ಯರಾದ ತನ್ನ ರಾಕ್ಷಸರನ್ನು ಒಟ್ಟಿಗೆ ಕರೆಯಿಸಿ ಅವರೊಡನೆ ವಿಚಾರ
ವಿನಿಮಯ ಮಾಡಿದನು. ಆಗ ಅವರೆಲ್ಲವೂ ರಾವಣನ ಪೂರ್ವಪರಾಕ್ರಮವನ್ನು