ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

ಮಾತ್ರ ವ್ಯತ್ಯಾಸವಿರುತ್ತದೆ. ವೈಜ್ಞಾನಿಕನು ಅನುಭವ ಹಾಗೂ ಪ್ರಯೋಗಗಳನ್ನು ಅವಲಂಬಿಸಿರುತ್ತಾನೆ. ಯಾತುಕ್ರಿಯೆಯಲ್ಲಿ ಮಂತ್ರ ತಂತ್ರಗಳಿಗೆ ಪ್ರಾಧಾನ್ಯ. ವೈಜ್ಞಾನಿಕನು ಬೌದ್ಧಿಕ ಆಧಾರದಿಂದ ಮುಂದುವರೆಸುತ್ತಾನೆ; ಆದರೆ ಯಾತುಕ್ರಿಯೆಯಲ್ಲಿ ಗೂಢತೆ, ಅಶಿಕ್ಷಿತತೆ, ಅಂಧ ಶ್ರದ್ಧೆ- ಇವು ಮುಖ್ಯ ಫ್ರೇಜರನು ಅವುಗಳಲ್ಲಿಯ ಭೇದವನ್ನು ರೀತಿ ಸ್ಪಷ್ಟಪಡಿಸಿದ್ದಾನೆ: “Legitimately applied they yield science; illegitimately applied they yield magic, the bastard sister of science.”
ವಿಶಿಷ್ಟ ಮಂತ್ರಗಳ ಹಾಗೆಯೇ ಅವುಗಳ ವಿಶಿಷ್ಟ ವಿಧಿ, ಎಂದರೆ 'ತಂತ್ರ'. ಈ ಯಾತು-ಕ್ರಿಯೆಯ ಮೂಲಕ ಪ್ರಾಥಮಿಕ ಅವಸ್ಥೆಯ ಮಾನವನು ತನ್ನ ಉದ್ದಿಷ್ಟ ಸಾಧನೆಯನ್ನು ಮಾಡಿಕೊಳ್ಳುತ್ತಾನೆ. ತಂತ್ರವಿದ್ಯೆಯಲ್ಲಿ ಶಿವ-ಶಕ್ತಿ, ಪ್ರಕೃತಿ- ಪುರುಷ ಇವುಗಳ ಸಂಯೋಗಕ್ಕೆ ಹೆಚ್ಚಿನ ಪ್ರಾಧಾನ್ಯವಿರುತ್ತದೆ. ಶಿವಪೂಜೆ, ಲಿಂಗಪೂಜೆ, ಪಶುಬಲಿ, ನರಬಲಿ ಮುಂತಾದ ಕಲ್ಪನೆಗಳು ಇದರಿಂದಲೇ ರೂಢಿಯಾಗಿವೆ. ಶಕ್ತಿ ಪೂಜೆಯಲ್ಲಿ ನಡೆಯುವ ಅನಾಚಾರ, ಸ್ವೈರಾಚಾರಗಳಿಂದ ಅನೇಕ ಅನಿಷ್ಟ ರೂಢಿಗಳು ಉಂಟಾಗಿವೆ.

ಯಜ್ಞ ಕರ್ಮ
ಭಾರತದಲ್ಲಿಯ ಆರ್ಯರನ್ನುಳಿದು ಇತರ ಗುಂಪುಗಳು ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸಲು ಮತ್ತು ಇಚ್ಛಾಪೂರ್ತಿಗಾಗಿ ತಂತ್ರವಿದ್ಯೆಯನ್ನು ಬಳಸುತ್ತಿದ್ದರು. ವೈದಿಕ ಕಾಲದ ಆರ್ಯರು ಯಾವ ಸಾಧನೆಯನ್ನು ಅವಲಂಬಿಸುತ್ತಿದ್ದರೋ ಅದಕ್ಕೆ ಯಜ್ಞವೆಂದು ಕರೆಯುತ್ತಾರೆ. ಯಜ್ಞ ಸಂಸ್ಥೆಯ ಕಲ್ಪನೆಯು ಯಾತು-ಕ್ರಿಯೆಯಿಂದ ಉದ್ಭವಿಸಿದೆ. ಪ್ರಸಿದ್ಧ ಮಾನವವಂಶಶಾಸ್ತ್ರಜ್ಞನಾದ ಆಂಡ್ರ್ಯೂ ಲ್ಯಾಂಗ್ ಈತನು ಯಜ್ಞವಿಧಿಯ ಬಗ್ಗೆ ಈ ರೀತಿ ಹೇಳುತ್ತಾನೆ:
On the whole the religion of the Rishis is practical; it might also be said, is magical. They desire temporal blessings, rain, sunshine, long life, power, wealth in flocks and herds. The whole purpose of the sacrifices which occupy So much of their time and thought is to obtain good things. The sacrifice and the Sacrificer
——————
೧. ವೈದಿಕಯಜ್ಞ-ತಂತ್ರಸಾಧನಾ-ಭಕ್ತಿಯೋಗ, ಪು.೫೨.