ಈ ಪುಟವನ್ನು ಪ್ರಕಟಿಸಲಾಗಿದೆ

೩೦೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಹೀಗೆ, ಇಲ್ಲಿ ಇಂದ್ರನ ಉಲ್ಲೇಖದೊಡನೆ ಬ್ರಹ್ಮ ಮತ್ತು ವರುಣ ಇವರು
ಕೊಟ್ಟ ವರಗಳ ಉಲ್ಲೇಖ ಸಹ ಬಂದಿದೆ. ಇಂದ್ರನು ಕೊಟ್ಟ ವರದ ಸ್ವರೂಪವು
ಸರ್ಗ ೧೨೦ರಲ್ಲಿ ಸ್ಪಷ್ಟವಾಗಿದೆ.

ಯುದ್ಧಕಾಂಡ/೧೨೬

ಹನುಮಂತನಿಂದ ರಾಮನ ಸುವಾರ್ತೆಯನ್ನು ಕೇಳಿದ ಭರತನಿಗೆ ಅತಿಶಯ
ಆನಂದವಾಯಿತು. ಆತನು ಇನ್ನೂ ಹೆಚ್ಚಾಗಿ ವಿವರಿಸಲು ವಿನಂತಿಸಿದನು.
ಹನುಮಂತನು ವಿವರಿಸಿದ ಸಂಗತಿಯಲ್ಲಿ ಈ ಉಲ್ಲೇಖವು ಬಂದಿದೆ.
ಸ ಶಕ್ರೇಣ ಸಮಾಗಮ್ಯ ಯಮೇನ ವರುಣೇನ ಚ |
ಮಹೇಶ್ವರ ಸ್ವಯಂಭೂಭ್ಯಾಂ ತಥಾ ದಶರಥೇನ ಚ ‖೫೧‖
ತ್ವೆಶ್ಚ ದತ್ತವರಃ ಶ್ರೀಮಾನ್ಯಪಿಭಿಶ್ಚ ಸಮಾಗತೈಃ |
ಸುರರ್ಷಿಭಿಶ್ಚ ಕಾಕುತ್ಸ್ಥೋ ವರಾಂಲ್ಲೇಭೇ ಪರಂತಪಃ ‖೫೨‖

'ಇಂದ್ರ, ಯಮ, ವರುಣ, ಮಹೇಶ್ವರ, ಬ್ರಹ್ಮದೇವ ಹಾಗೂ ದಶರಥ
ಇವರೆಲ್ಲರ ಭೇಟಿಯಾದ ನಂತರ ಅವರು ಹಾಗೂ ಅಲ್ಲಿದ್ದ ಋಷಿಗಳು ಆ
ವೈಭವಸಂಪನ್ನ ರಾಮನಿಗೆ ವರವನ್ನಿತ್ತರು. ಆ ಶತ್ರುತಾಪನ, ಕಾಕುತ್ಸ್ಥಕುಲೋತ್ಪನ್ನ
ರಾಮನಿಗೆ ದೇವ, ಋಷಿಗಳಿಂದಲೂ ವರವು ದೊರಕಿತು.'
ಇಲ್ಲಿ ಇಂದ್ರನಂತೆ ಇತರ ದೇವತೆಗಳು ಮತ್ತು ಋಷಿಗಳು ಸಹ ರಾಮನಿಗೆ
ವರವನ್ನು ಕೊಟ್ಟ ಉಲ್ಲೇಖವಿದೆ. ರಾವಣನನ್ನು ವಧಿಸುವಂಥ ದುಸ್ತರ ಕಾರ್ಯವನ್ನು
ರಾಮನು ಮಾಡಿದ್ದರಿಂದ ಸಂತೋಷಗೊಂಡ ಅಲ್ಲಿ ಉಪಸ್ಥಿತರಿದ್ದ ದೇವತೆಗಳು,
ಋಷಿಗಳು ರಾಮನಿಗೆ ವರವನ್ನಿತ್ತರು. ಸಾರಾಂಶದಲ್ಲಿ, ಈ ಎಲ್ಲ ವರಗಳೂ
'ಅಯಾಚಿತ'ವಾಗಿದೆ.

ಬಾಲಕಾಂಡ/೧

ಲಂಕೆಯಲ್ಲಿ ವಿಭೀಷಣನಿಗೆ ರಾಜ್ಯಾಭಿಷೇಕವನ್ನು ಮಾಡಿ ರಾಮನು ಕೃತ
ಕೃತ್ಯನಾದನು.
ದೇವತಾಭ್ಯೋ ವರಂ ಪ್ರಾಪ್ಯ ಸಮುತ್ಥಾಪ್ಯ ಚ ವಾನರಾನ್ |
ಅಯೋಧ್ಯಾಂ ಪ್ರಸ್ಥಿತೋ ರಾಮಃ ಪುಷ್ಪಕೇಣ ಸುಹೃದ್ವೃತಃ ‖೮೬‖