ಈ ಪುಟವನ್ನು ಪ್ರಕಟಿಸಲಾಗಿದೆ

೩೪೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೭೨. ಶಂಕರ < ಹನುಮಾನ

ಉತ್ತರಕಾಂಡ/೩೬

ಇಂದ್ರ < ಹನುಮಾನ, ವರ ಕ್ರಮಾಂಕ ೬೭- ನೋಡಿ.
ದೇವತೆಗಳಿಂದ ಹನುಮಾನನು ಹಲವು ವರಗಳನ್ನು ಪಡೆದನು. ಅವುಗಳ
ಬಗ್ಗೆ ಅಗಸ್ತ್ಯಮುನಿಯು ರಾಮನಿಗೆ ಹೇಳುತ್ತಿದ್ದಾನೆ.
ಮತ್ತೋ ಮದಾಯುಧಾನಾಂ ಚ ಅವಧ್ಯೋಯಂ ಭವಿಷ್ಯತಿ |
ಇತ್ಯೇವಂ ಶಂಕರೇಣಾಪಿ ದತ್ತೋಸ್ಯ ಪರವೋ ವರಃ ‖೧೮‖

“ನನ್ನಿಂದ ಅಥವಾ ನನ್ನ ಆಯುಧಗಳಿಂದ ಈತನ ವಧೆಯಾಗಲಾರದು”
ಎಂಬ ಸರ್ವೋತ್ತಮ ವರವನ್ನು ಶಂಕರನು ಹನುಮಾನನಿಗೆ ಕೊಟ್ಟನು.
ಇದು 'ಅಯಾಚಿತ' ವರವಾಗಿದೆ.

೭೩. ವಿಶ್ವಕರ್ಮ < ಹನುಮಾನ

ಉತ್ತರಕಾಂಡ/೩೬

ಇಂದ್ರ < ಹನುಮಾನ, ವರ ಕ್ರಮಾಂಕ ೬೭- ನೋಡಿ.
ಅಗಸ್ತ್ಯಮುನಿಯು ರಾಮನಿಗೆ ದೇವತೆಗಳಿಂದ ಹನುಮಾನನಿಗೆ ದೊರೆತ
ವರಗಳ ಬಗ್ಗೆ ವಿವರಿಸಿ ಹೇಳುತ್ತಿದ್ದಾನೆ.
ವಿಶ್ವಕರ್ಮಾ ಚ ದೃಷ್ಟ್ವೇಮಂ ಬಾಲಸೂರ್ಯೋಪಮಂ ಶಿಶುಮ್ |
ಶಿಲ್ಪಿನಾಂ ಪ್ರವರಃ ಪ್ರಾದಾದ್ವರಮಸ್ಯ ಮಹಾಮತಿಃ ‖೧೯‖
ಮತ್ಕೃತಾನಿ ಚ ಶಸ್ತ್ರಾಣಿ ಯಾನಿ ದಿವ್ಯಾನಿ ತಾನಿ ಚ |
ತ್ವೆರವಧ್ಯತ್ವಮಾಪನ್ನಶ್ಚಿರಜೀವಿ ಭವಿಷ್ಯತಿ ‖೨೦‖

ಬಾಲರವಿಯಂತೆ ಅರುಣಕಾಂತಿಯುಳ್ಳ ಆ ಕಂದನನ್ನು ಕಂಡು ಶಿಲ್ಪಿ
ಶ್ರೇಷ್ಠನಾದ ಮಹಾಮತಿ ವಿಶ್ವಕರ್ಮನು, “ನನ್ನಿಂದ ಸೃಷ್ಟಿಸಲ್ಪಟ್ಟ ಯಾವ ದಿವ್ಯ
ಶಸ್ತ್ರಗಳಿಮದಲೂ ಈ ಹನುಮಾನನ ವಧೆಯಾಗದೆ ಈತನು ಚಿರಂಜೀವಿ
ಯಾಗುವನು” ಎಂಬ ವರವನ್ನು ಕೊಟ್ಟನು.
ಇದು 'ಅಯಾಚಿತ' ವರವಾಗಿದೆ.