ಈ ಪುಟವನ್ನು ಪ್ರಕಟಿಸಲಾಗಿದೆ

೩೪೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೮೦. ದೇವತೆಗಳು < ಬ್ರಹ್ಮಹತ್ಯೆ

ಉತ್ತರಕಾಂಡ/೮೬

ಲಕ್ಷ್ಮಣನು ರಾಮನಿಗೆ ವೃತ್ರಾಸುರನ ವಧೆಯ ವೃತ್ತಾಂತವನ್ನು ವಿವರಿಸು
ತ್ತಿದ್ದಾನೆ. ತಪೋಬಲದಿಂದ ವೃತ್ರಾಸುರನು ಸಮಸ್ತ ಲೋಕಗಳನ್ನೂ ತನ್ನ ವಶ
ಮಾಡಿಕೊಂಡ ಕಾರಣ ಇಂದ್ರಾದಿ ದೇವತೆಗಳಿಗೆ ಅಪಾರ ದುಃಖವಾಯಿತು.
ಅವರೆಲ್ಲರೂ ವಿಷ್ಣುವಿನ ಬಳಿಗೆ ಹೋಗಿ ವೃತ್ರಾಸುರನನ್ನು ಸಂಹರಿಸಿ ದೇವತೆಗಳನ್ನು
ರಕ್ಷಿಸಬೇಕೆಂದು ವಿನಂತಿಸಿದರು. ವಿಷ್ಣು ಹಾಗೂ ವೃತ್ರಾಸುರ ಇವರಲ್ಲಿ ಪ್ರೇಮ
ವಿಶ್ವಾಸಗಳು ಮೊದಲಿನಿಂದಲೂ ಇದ್ದ ಕಾರಣ ಆ ಅಸುರನ ವಧೆ ಮಾಡುವದನ್ನು
ವಿಷ್ಣು ನಿರಾಕರಿಸಿದನು. ಆದರೆ, ಇಂದ್ರನು ಆತನ ವಧೆ ಮಾಡಲು ಸಿದ್ಧನಾದರೆ,
ತನ್ನ ಮೂರನೆಯ ಒಂದು ಭಾಗದಷ್ಟು ತೇಜಸ್ಸನ್ನು ಇಂದ್ರನಿಗೆ ಕೊಡುವದಾಗಿ
ಒಪ್ಪಿದನು. ಆಗ ಇಂದ್ರನು ತನ್ನ ವಜ್ರಾಯುಧವನ್ನು ವೃತ್ರಾಸುರನ ತಲೆಗೆ ಹೊಡೆದನು.
ವೃತ್ರಾಸುರನ ತಲೆಯು ಭೂಮಿಗೆ ಬೀಳುತ್ತಿರುವಾಗ ಈ ಜಗತ್ತೆಲ್ಲ ತೊಂದರೆ
ಗೀಡಾಯಿತು. ವೃತ್ರಾಸುರನ ವಧೆ ಅನುಚಿತವಾಯಿತೆಂದು ತಿಳಿದು ಇಂದ್ರನು
ತ್ರೈಲೋಕ್ಯವನ್ನು ಸಂಚರಿಸಿದನು. ಆತನನ್ನು ಬ್ರಹ್ಮಹತ್ಯೆಯು ಬೆನ್ನಟ್ಟಿತು. ಕೊನೆಗೆ
ಬ್ರಹ್ಮಹತ್ಯೆಯು ಇಂದ್ರನಿಗೆ ತಟ್ಟಿತು. ಇಂದ್ರನಿಗೆ ಅತೀವ ದುಃಖವಾಯಿತು. ದೇವತೆ
ಗಳೆಲ್ಲರೂ ಪುನಃ ವಿಷ್ಣುವಿನ ಬಳಿಗೆ ಹೋದರು. ವಿಷ್ಣುವಿಗೆ ನುಡಿದದ್ದೇ ನೆಂದರೆ:
“ನೀವೇ ನಿಮ್ಮ ತೇಜಸ್ಸನ್ನು ಕೊಟ್ಟು ಇಂದ್ರನಿಂದ ವೃತ್ರಾಸುರನ ವಧೆಯಾಗುವಂತೆ
ಮಾಡಿರುವಿರಿ; ಮತ್ತು ನಮ್ಮ ರಕ್ಷಣೆಯನ್ನು ಮಾಡಿರುವಿರಿ. ಈಗ ಬ್ರಹ್ಮಹತ್ಯೆಯು
ಇಂದ್ರನ ಬೆನ್ನುಹತ್ತಿ ಆತನಿಗೆ ಕಷ್ಟವನ್ನು ಕೊಡುತ್ತಿದೆ. ಆದ್ದರಿಂದ ಈ ಬ್ರಹ್ಮಹತ್ಯೆಯಿಂದ
ಇಂದ್ರನ ಬಿಡುಗಡೆಯಾಗುವಂತೆ ಒಂದು ಉಪಾಯವನ್ನು ಮಾಡಿರಿ!” ಎಂದರು.
ಆಗ ವಿಷ್ಣುವು, ಇಂದ್ರನಿಂದ ಒಂದು ವಿಷ್ಣುಯಾಗವು ನಡೆಯುವಂತೆ ಮಾಡಲು
ಹೇಳಿದನು. ಹೀಗಾದಲ್ಲಿ ಇಂದ್ರನು ಬ್ರಹ್ಮಹತ್ಯೆಯಿಂದ ಮುಕ್ತನಾಗುವನು ಎಂಬ
ಆಶ್ವಾಸನೆಯನ್ನು ಸಹ ಕೊಟ್ಟನು.
ಇಂದ್ರನು ವಿಷ್ಣುಯಾಗವನ್ನೂ ಮತ್ತು ವಿಷ್ಣುವನ್ನು ಉದ್ದೇಶಿಸಿ
ಅಶ್ವಮೇಧವನ್ನೂ ಪೂರ್ತಿಗೊಳಿಸಿದನು. ಯಜ್ಞ ಸಮಾಪ್ತಿಯಾಗುತ್ತಲೇ ಬ್ರಹ್ಮ
ಹತ್ಯೆಯು ದೇವತೆಗಳ ಬಳಿಗೆ ಹೋಗಿ, ಹೀಗೆ ನುಡಿಯಿತು: “ನೀವು ನನಗೆ
ಎಲ್ಲಿ ವಾಸಸ್ಥಾನವನ್ನು ಕೊಡಲಿರುವಿರಿ?” ಆಗ ದೇವತೆಗಳು ಬ್ರಹ್ಮಹತ್ಯೆಗೆ ನಾಲ್ಕು
ಭಾಗಗಳಾಗಲು ತಿಳಿಸಿದರು. ಬ್ರಹ್ಮಹತ್ಯೆಯ ಇರುವಿಕೆಯು ಬಲು ಕ್ಲೇಶಕರವಾದದ್ದು;