ಈ ಪುಟವನ್ನು ಪ್ರಕಟಿಸಲಾಗಿದೆ

೩೫೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ರೆಂದೆನಿಸಿಸುವ ಯಾವ ವರ್ಗಸಮೂಹಗಳನ್ನು ನಾನು ಪೂಜಿಸಿರುವೆನೋ
ಅಂಥವರು ನಿನ್ನನ್ನು ಹಿಂಸಿಸದಿರಲಿ!
ಆಗಮಾಸ್ತೇ ಶಿವಾಃ ಸಂತು ಸಿದ್ಧಂತು ಚ ಪರಾಕ್ರಮಾಃ |
ಸರ್ವಸಂಪತ್ತಯೋ ರಾಮ ಸ್ವಸ್ತಿಮಾನ್ಗಚ್ಛ ಪುತ್ರಕ ‖೨೧‖
ಸ್ವಸ್ತಿ ತೇsಸ್ತ್ವಾಂತರಿಕ್ಷೇಭ್ಯಃ ಪಾರ್ಥಿವೇಭ್ಯಃ ಪುನಃ ಪುನಃ |
ಸರ್ವೇಭ್ಯಶ್ಚೈವ ದೇವೇಭ್ಯೋ ಯೇ ಚ ತೇ ಪರಿಪಂಥಿನಃ ‖೨೨‖
ಶುಕ್ರಃ ಸೋಮಶ್ಚ ಸೂರ್ಯಶ್ಚ ಧನದೋsಥ ಯಮಸ್ತಥಾ |
ಪಾಂತು ತ್ವಾಮರ್ಚಿತಾ ರಾಮ ದಂಡಕಾರಣ್ಯವಾಸಿನಮ್ ‖೨೩‖
ಅಗ್ನಿರ್ವಾಯುಸ್ತಥಾ ಧೂಮೋ ಮಂತ್ರಾಶ್ಚರ್ಪಿಮುಖಚ್ಯುತಾಃ |
ಉಪಸ್ಪರ್ಶನಕಾಲೇ ತು ಪಾಂತು ತ್ವಾಂ ರಘುನಂದನ ‖೨೪‖
ಸರ್ವಲೋಕಪ್ರಭುರ್ಬ್ರಹ್ಮಾ ಭೂತಕರ್ತೃ ತಥರ್ಷಯಃ |
ಯೇ ಚ ಶೇಷಾಃ ಸುರಾಸ್ತೇ ತು ರಕ್ಷಂತು ವನವಾಸಿನಮ್ ‖೨೫‖

“ನಿನ್ನ ಮಾರ್ಗವು ನಿನಗೆ ಸುಗಮ ಮತ್ತು ಕಲ್ಯಾಣಕಾರಕವಾಗಲಿ!
ಪರಾಕ್ರಮದಲ್ಲಿ ನೀನು ಸಫಲನಾಗು! ಎಲ್ಲ ಬಗೆಯ ಇಷ್ಟಾರ್ಥಗಳೂ ಕಾಡಿನಲ್ಲಿ
ನಿನಗೆ ಸಮೃದ್ಧವಾಗಿ ದೊರೆಯಲಿ. ನೀನು ಶುಭಸಂಪನ್ನನಾಗಿ ಹೊರಡು!
ಆಕಾಶ ಮತ್ತು ಪೃಥ್ವಿ ಇವುಗಳಲ್ಲಿ ವಾಸವಿರುವ ಸಕಲ ಪ್ರಾಣಿಮಾತ್ರರಿಂದ,
ದೇವತೆಗಳಿಂದ, ಅಲ್ಲದೆ ನನಗಿರುವ ಶತ್ರುಗಳಿಂದ ಕೂಡ ನಿನಗೆ ಶುಭವಾಗಲಿ!
ರಮನೇ, ಶುಕ್ರ, ಚಂದ್ರ, ಸೂರ್ಯ, ಕುಬೇರ ಮತ್ತು ಯಮ ಇವರನ್ನು ನಾನು
ಪೂಜಿಸಿದ್ದೇನೆ. ನೀನು ದಂಡಕಾರಣ್ಯದಲ್ಲಿ ವಾಸವಿದ್ದಾಗ ಅವೆರಲ್ಲರೂ ನಿನ್ನನ್ನು
ರಕ್ಷಿಸಲಿ! ಹೇ ರಘುನಂದನನೇ, ಅಗ್ನಿ, ವಾಯು, ಧೂಮ ಮತ್ತು ಋಷಿಗಳ
ಮುಖೋದ್ಗತ ಮಂಥ್ರಗಳು ಸ್ನಾನದ ಸಮಯದಲ್ಲಿ ನಿನ್ನನ್ನು ಕಾಪಾಡಲಿ!”
ನಂತರ ಕೌಸಲ್ಯೆಯು ದೇವಸಮೂಹವನ್ನು ಪೂಜಿಸಿದಳು. ಬ್ರಾಹ್ಮಣರಿಂದ
ಯಥಾವಿಧಿ ಹವನವನ್ನು ಮಾಡಿಸಿದಳು. ರಾಮನಿಗೆ ಆರೋಗ್ಯ ಲಭಿಸಬೇಕೆಂದು
ಉಪಾಧ್ಯಾಯರಿಂದ ಹೋಮವನ್ನು ಪೂರೈಸಿದಳು. ಅವಶಿಷ್ಟ ಹವಿರ್ದ್ರವ್ಯಗಳಲ್ಲಿಯ
ಶೇಷಭಾಗವನ್ನು ಲೋಕಪಾಲಕಾದಿಗಳಿಗೆ ಬಲಿಯಾಗಿ ಅರ್ಪಿಸಿದಳು. ರಾಮನಿಗೆ
ಮಂಗಲಕರವಾಗಬೇಕೆಂದು ಪುಣ್ಯಾಹವಾಚನವನ್ನು ಮಾಡಿಸಿ ಬ್ರಾಹ್ಮಣರಿಗೆ
ದಕ್ಷಿಣೆಯನ್ನು ಕೊಟ್ಟಳು.