ಈ ಪುಟವನ್ನು ಪ್ರಕಟಿಸಲಾಗಿದೆ

೩೬೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


“ಹೇ ರಾಘವನೇ, ನಾನು ಪೂಜಿಸಿದ ಶಿವಾದಿ ದೇವತೆಗಳು, ಮಹರ್ಷಿಗಳು,
ಭೂತ ಗಣಾದಿಗಳು, ಇತರ ದೇವತೆಗಳು, ಪನ್ನಗ ಮತ್ತು ದಿಕ್ಕುಗಳು, ಕಾಡಿನಲ್ಲಿ
ಹೋಗಲಿರುವ ನಿನ್ನ ಹಿತವನ್ನು ಬಯಸಿ ಚಿರಕಾರ ರಕ್ಷಣೆಯನ್ನೀಯಲಿ!

೨. ಸುಮಿತ್ರೆಯ ಆಶೀರ್ವಾದ

ಅಯೋಧ್ಯಾಕಾಂಡ/೪೦

ರಾಮನೊಡನೆ ವನವಾಸಕ್ಕೆ ತೆರಳಲು ಸಿದ್ಧನಾದ ಲಕ್ಷ್ಮಣನು ಸುಮಿತ್ರೆಯನ್ನು
ನಮಸ್ಕರಿಸಲು ಹೋದಾಗ ಆಕೆಯು ಆತನ ತಲೆಯನ್ನು ಆಘ್ರಾಣಿಸಿ ಕಂಬನಿ
ಸುರಿಸಿದಳು.
ಸೃಷ್ಟಸ್ತ್ವಂ ವನವಾಸಾಯ ಸ್ವನುರಕ್ತಃ ಸುಹೃಜ್ಜನೇ |
ರಾಮೇ ಪ್ರಮಾದಂ ಮಾ ಕಾರ್ಷೀಃ ಪುತ್ರ ಭ್ರಾತರಿ ಗಚ್ಛತಿ ‖೫‖
ವ್ಯಸನೀ ವಾ ಸಮೃದ್ಧೋ ವಾ ಗತಿರೇಷ ತವಾನಘ |
ಏಷ ಲೋಕೇ ಸತಾಂ ಧರ್ಮೋ ಯಜ್ಜೇಷ್ಠವಶಗೋ ಭವೇತ್ ‖೬‖
ಇದಂ ಹಿ ವೃತ್ತಮುಚಿತಂ ಕುಲಸ್ಯಾಸ್ಯ ಸನಾತನಮ್ |
ದಾನಂ ದೀಕ್ಷಾ ಚ ಯಜ್ಞೇಷು ತನುತ್ಯಾಗೋ ಮೃಧೇಷು ಹಿ ‖೭‖
ಲಕ್ಷ್ಮಣಂ ತ್ವೇವಮುಕ್ತ್ವಾಸೌ ಸಂಸಿದ್ಧಂ ಪ್ರಿಯರಾಘವಮ್ |
ಸುಮಿತ್ರಾ ಗಚ್ಛ ಗಚ್ಛೇತಿ ಪುನಃ ಪುನರುವಾಚ ತಮ್ ‖೮‖
ರಾಮಂ ದಶರಥಂ ವಿದ್ಧಿ ಮಾಂ ವಿದ್ಧಿ ಜನಕಾತ್ಮಜಾಮ್ |
ಅಯೋಧ್ಯಾಮಟವೀಂ ವಿದ್ಧಿ ಗಚ್ಛ ತಾತ ಯಥಾಸುಖಮ್ ‖೯‖


“ಹೇ ಪುತ್ರನೇ, ಸುಹೃದಯನಾದ ರಾಮನನ್ನು ನೀನು ಬಹು ಪ್ರೀತಿಸುವೆ;
ಆ ಕಾರಣ ವನವಾಸಕ್ಕೆ ಹೋಗುವ ಅನುಮತಿಯನ್ನು ನಾನು ಕೊಡುತ್ತೇನೆ.
ನಿನ್ನ ಭ್ರಾತೃವಾದ ರಾಮನು ಎಲ್ಲಿಗಾದರೂ ಹೊರಟಾಗ ನೀನು ತುಂಬಾ
ಎಚ್ಚರಿಕೆಯನ್ನು ವಹಿಸು. ಎಲೈ ನಿಷ್ಪಾಪಪುರುಷನೇ, ರಾಮನು ಸಂಕಟದಲ್ಲಿರಲಿ,
ಸುಖಸಮೃದ್ಧನಿರಲಿ, ಅವನೇ ನಿನಗೆ ಗತಿಯಾಗುವನು. ಹಿರಿಯಣ್ಣನನ್ನು
ಹೊಂದಿಕೊಂಡಿರುವದು ಈ ಜಗತ್ತಿನಲ್ಲಿಯ ಸಜ್ಜನರ ಧರ್ಮವಾಗಿದೆ. ಆತನನ್ನು
ಅನುಸರಿಸಿ ಆಚರಿಸುವದು ನಮ್ಮ ಕುಲಕ್ಕೆ ಯೋಗ್ಯವಿದ್ದು ಪರಂಪರಾಗತವಾಗಿ
ನಡೆದುಬಂದಿದೆ. ಜ್ಞಾನ, ಯಜ್ಞದೀಕ್ಷೆ ಮತ್ತು ಯುದ್ಧದಲ್ಲಿ ದೇಹತ್ಯಾಗ, ಇವೆಲ್ಲವೂ
ಕ್ಷತ್ರಿಯಕುಲಕ್ಕೆ ಗೌರವಯುಕ್ತವಾಗಿವೆ. ಹೊರಡು! ಹೊರಡು!” ಎಂದು ಪುನಃ