ಈ ಪುಟವನ್ನು ಪ್ರಕಟಿಸಲಾಗಿದೆ

ಆಶೀರ್ವಾದ, ಹರಕೆಗಳು

೩೬೫


ಯಕ್ಷ್ಯೇ ತ್ವಾಂ ಪ್ರೀಯತಾಂ ದೇವಿ ಪುರೀ೦ ಪುನರುಪಾಗತಾ ‖೮೯‖
ಯಾನಿ ತ್ವತ್ತಿರವಾಸೀನಿ ದೈವತಾನಿ ಚ ಸಂತಿ ಹಿ |
ತಾನಿ ಸರ್ವಾಣಿ ಯಕ್ಷ್ಯಾಮಿ ತೀರ್ಥಾನ್ಯಾಯತನಾನಿ ಚ ‖೦೯‖
ಪುನರೆವ ಮಹಾಬಾಹುರ್ಮಯಾ ಭ್ರಾತ್ರಾ ಚ ಸಂಗತಃ |
ಅಯೋಧ್ಯಾಂ ವನವಾಸಾತ್ತು ಪ್ರವಿಶತ್ವನಘೋsನಘೇ ‖೯೧‖


“ಹೇ ಗಂಗೆಯೇ, ದಶರಥ ಮಹಾರಾಜನ ಈ ವಿಚಾರವಂತ ಪುತ್ರನನ್ನು
ನೀನು ರಕ್ಷಿಸುತ್ತಿರುವಾಗ ಈತನಿಂದ ಪಿತನ ಆಜ್ಞೆಯು ಪೂರ್ತಿಗೊಳ್ಳಲಿ! ಹೇ
ದೇವಿ, ಹೇ ಭಾಗ್ಯವಂತೆಯಾದ ಗಂಗೆಯೇ, ಹದಿನಾಲ್ಕು ವರ್ಷಗಳ ವನವಾಸವನ್ನು
ಮುಗಿಸಿ ಆತನು ಬಂಧುವಾದ ಲಕ್ಷ್ಮಣ ಹಾಗೂ ನನ್ನ ಸಮೇತ ಮರಳಿ ಬರುವನು.
ಆಗ ನನ್ನ ಮನೋರಥಗಳೆಲ್ಲ ಪರಿಪೂರ್ಣವಾಗಿ ನಾನು ಸುಖರೂಪವಾಗಿ
ಮರಳಿ ಬಂದ ನಂತರ, ಅತೀವ ಆನಂದ ಹರ್ಷಗಳಿಂದ ನಾನು ಪೂಜಿಸುವೆನು.
ಎಲೈ ತ್ರೈಲೋಕ್ಯಗಾಮಿನೀದೇವಿ, ನೀನು ಬ್ರಹ್ಮಲೋಕವನ್ನು ವ್ಯಾಪಿಸಿರುವೆ;
ನೀನು ಮಹಾಸಾಗರದ ಭಾರ್ಯೆ ಇರುವದು ಈ ಲೋಕದ ದೃಷ್ಟೋತ್ಪತ್ತಿಯಾಗಿದೆ.
ಹೇ ದೇವೀ, ಶುಭಕಾರಿಣೀ, ಪುರುಷಶ್ರೇಷ್ಠನಾದ ನನ್ನ ಪತಿಯು ವನದಿಂದ
ಮರಳಿ ರಾಜ್ಯಭಾರವನ್ನು ಕೈಗೊಂಡ ನಂತರ ನಾನು ನಿನಗೆ ನಮಸ್ಕರಿಸಿ,
ನಿನ್ನನ್ನು ಸಂತೋಷಗೊಳಿಸಲು ಒಂದು ಲಕ್ಷ ಗೋವುಗಳನ್ನೂ, ವಸ್ತ್ರಾಲಂಕಾರ
ಗಳನ್ನೂ, ಉತ್ತಮ ಭಕ್ಷ್ಯಭೋಜನಾದಿಗಳನ್ನೂ ಬ್ರಾಹ್ಮಣರಿಗೆ ಅರ್ಪಿಸುವೆನು.
ಇಷ್ಠೇ ಅಲ್ಲದೆ, ನಾನು ಅಯೋಧ್ಯೆಯನ್ನು ತಲುಪಿದನಂತರ ಒಂದು ಸಾವಿರ
ಕೊಡಗಳಷ್ಟು ಮದ್ಯವನ್ನೂ, ಮಾಂಸಮಿಶ್ರಿತಾನ್ನವನ್ನೂ ನಿನಗೆ ಬಲಿಯಾಗಿ
ಅರ್ಪಿಸುವೆನು. ಹೇ ಗಂಗೆಯೇ, ನೀನು ನನಗೆ ಪ್ರಸನ್ನಳಾಗು! ನಿನ್ನ ತೀರದಲ್ಲಿರುವ
ದೇವತೆಗಳನ್ನೂ, ತೀರ್ಥಸ್ಥಾನಗಳನ್ನೂ, ಕ್ಷೇತ್ರಗಳನ್ನೂ ನಾನು ಅರ್ಚಿಸುವೆನು.
ಹೇ ಪಾಪರಹಿತ ಗಂಗೆಯೇ, ನಾನು, ನನ್ನ ನಿಷ್ಪಾಪ ಪತಿ ಹಾಗೂ ಅವನ
ಬಂಧು ಲಕ್ಷಣ ಮರಳಿ ಅಯೋಧ್ಯೆಯನ್ನು ಪ್ರವೇಶಿಸಲಿ!”

೭. ಯಮುನಾ ನದಿಗೆ ಬೇಡಿಕೊಂಡ ಹರಕೆ

ಅಯೋಧ್ಯಾಕಾಂಡ/೫೫

ಭರದ್ವಾಜ ಮುನಿಯ ಆಶ್ರಮದಲ್ಲಿ ಒಂದು ರಾತ್ರಿ ಕಳೆದ ನಂತರ ಚಿತ್ರಕೂಟ
ಪರ್ವತದತ್ತ ಸಾಗುವ ದಾರಿಯನ್ನು ಮುನಿಯು ರಾಮನಿಗೆ ಹೇಳಿ, ಆಶೀರ್ವದಿಸಿ