ಈ ಪುಟವನ್ನು ಪ್ರಕಟಿಸಲಾಗಿದೆ

ವ್ಯಕ್ತಿ ವಿಶೇಷ

೩೮೧

ಸ್ವತಃ ಇಂದ್ರನೇ ಬಂದಿದ್ದನು. ಅದೇ ರೀತಿ ರಾಮ-ರಾವಣರಲ್ಲಿಯ ಯುದ್ಧದ ಸಮಯಕ್ಕೆ ರಾಮನಿಗೆ ನೆರವಾಗಲು ತನ್ನ ರಥದೊಂದಿಗೆ ಸಾರಥಿಯಾದ ಮಾತಲಿಯನ್ನು ಸಹ ಕಳುಹಿದ್ದನು. ಕುಂಭಕರ್ಣನು ಇಂದ್ರನನ್ನು ಯುದ್ಧದಲ್ಲಿ ಪರಾಭವಗೊಳಿಸಿದ್ದನು. ಮೇಘನಾದನು ಇಂದ್ರನನ್ನು ಗೆದ್ದು ಈತನನ್ನು ಹಿಡಿದು ಲಂಕೆಗೆ ಒಯ್ದಿದ್ದನು. ಇಂದ್ರನನ್ನು ಮುಕ್ತಗೊಳಿಸಲು ಬ್ರಹ್ಮದೇವನು ಮೇಘನಾದನಿಗೆ ಕಟ್ಟಳೆಯ ವಧೆಯಾಗದ ವರವನ್ನು ಕೊಟ್ಟನು; ಅದಲ್ಲದೆ, ಅಗ್ನಿಯ ಅಶ್ವಯುಕ್ತ ರಥವನ್ನು ಕೊಟ್ಟಿದ್ದನು. ಬ್ರಹ್ಮದೇವನ ಹೇಳಿಕೆಯಂತೆ ಇಂದ್ರನು ಒಂದು ವೈಷ್ಣವಯಾಗವನ್ನು ಮಾಡಿದನು. ಈತನ ವಜ್ರಪ್ರಹಾರದಿಂದ ವಾಯುಪುತ್ರನ 'ಹನು' ಅಂದರೆ ಗದ್ದವು ಭಗ್ನವಾಯಿತು. ಆಗ ಆ ವಾಯುಪುತ್ರನಿಗೆ ಹನುಮಾನನೆಂಬ ಹೆಸರು ಬಂದಿತು. ವಿಷ್ಣುವಿನ ಆಜ್ಞೆಯ ಮೇರೆಗೆ ಈತನು ಅಶ್ವಮೇಧಯಾಗವನ್ನು ಮಾಡಿದನು.
ಇಂದ್ರನು ಬ್ರಹ್ಮದೇವನ ವಿನಂತಿಯನುಸಾರ ನಿದ್ರಾದೇವಿಯನ್ನು ಲಂಕೆಗೆ ಕರೆದೊಯ್ದನು. ಅಲ್ಲಿ ಸೀತೆಯನ್ನು ಭೇಟಿಯಾದಾಗ ಅವಳು ಅನ್ನಪಾನೀಯಗಳನ್ನು ಸೇವಿಸದಿದ್ದರೂ ಅವಳು ಜೀವಿತವಿರಬೇಕೆಂದು ಅವಳಿಗೆ ಹವಿಷ್ಯಾನ್ನವನ್ನು ಕೊಟ್ಟನು. ತ್ವಷ್ಟನ ಪುತ್ರನಾದ ವೃತ್ರಾಸುರನನ್ನು ಇಂದ್ರನು ವಧಿಸಿದ ಕಾರಣ ಬ್ರಹ್ಮ ಹತ್ಯೆಯು ಇವನ ಬೆನ್ನಟ್ಟಿತು. ರಾಮನ ಸಹಾಯಕ್ಕಾಗಿ ಇಂದ್ರನು ಮೈನಾಕಪರ್ವತಕ್ಕೆ ವರವನ್ನು ಕೊಟ್ಟು ಸಮುದ್ರದಲ್ಲಿ ಇರಿಸಿದ್ದನು. ಸಮುದ್ರವನ್ನು ಉಲ್ಲಂಘಿಸಿ ಲಂಕೆಯನ್ನು ತಲುಪುವಾಗ ಹನುಮಾನನಿಗೆ ವಿಶ್ರಾಂತಿಯು ಸಿಗಬೇಕೆಂಬ ಉದ್ದೇಶ ಆತನದಿತ್ತು. ಕಬಂಧ ರಾಕ್ಷಸನು ಮೈಮೇಲೇರಿಬಂದಾಗ ಇಂದ್ರನು ವಜ್ರಾಘಾತದಿಂದ ಆತನನ್ನು ಮುದುಡೆ ಮಾಡಿಬಿಟ್ಟನು. ಅನಂತರ ಕಬಂಧನ ಪ್ರಾರ್ಥನೆಯಂತೆ ಆತನ ಉದರನಿರ್ವಹಣೆಗಾಗಿ ಬಹುದೀರ್ಘವಾದ ಬಾಹುಗಳನ್ನು ಕರುಣಿಸಿದನು. ಶುನಃಶೇಪನ ಸ್ತುತಿಗೆ ಮಾರು ಹೋಗಿ ಇಂದ್ರನು ಆತನಿಗೆ ದೀರ್ಘ ಆಯುಸ್ಸನ್ನು ಕೊಟ್ಟನು.
ಶರೀರದಲ್ಲಿಯ ಮಲ ಹಾಗೂ ಹಸಿವನ್ನು ಚೆಲ್ಲಿದ ಮತ್ತು ಈ ರೀತಿ ತಾನು ಶುದ್ಧವಾಗಲು ಸಹಾಯಕ್ಕೆ ಬಂದ ಪ್ರದೇಶಗಳಿಗೆ ಇಂದ್ರನು 'ಮಲದ', 'ಕರುಷ' ಎಂಬ ಹೆಸರುಗಳನ್ನು ಕೊಟ್ಟು ಆ ಪ್ರದೇಶಗಳಿಗೆ ವರಗಳನ್ನು ಕೊಟ್ಟು ಅವನ್ನು ಸಮೃದ್ಧಗೊಳಿಸಿದನು. ಕಶ್ಯಪನು ವಿಷ್ಣುವಿಗೆ ಅದಿತಿಯ ಹೊಟ್ಟೆಯಲ್ಲಿ ಜನ್ಮತಾಳಲು ವಿನಂತಿಸಿದನು. ಅದನ್ನು ಮನ್ನಿಸಿ ವಿಷ್ಣುವು ವಾಮನಾವತಾರವನ್ನು ತಾಳಿ ಬಲಿಯನ್ನು ಹತ್ತಿಕ್ಕಿ, ಇಂದ್ರನನ್ನು ಪುನಃ ತ್ರೈಲೋಕ್ಯಾಧಿಪತಿಯನ್ನಾಗಿ